ರಾಜ್ಯದಲ್ಲಿ ಇಂದು 1143 ಹೊಸ ಕೊರೊನಾ ಸೋಂಕು ಪತ್ತೆ

ಬೆಂಗಳೂರು, ಡಿಸೆಂಬರ್ 24: ಕರ್ನಾಟಕ ರಾಜ್ಯದಲ್ಲಿ ಶುಕ್ರವಾರ (ಡಿ.24) ರಂದು 1143 ಹೊಸ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಂದು ಆಸ್ಪತ್ರೆಯಿಂದ 1268 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೊರೊನಾ ವೈರಸ್ ನಿಂದ ಶುಕ್ರವಾರ ಸಾವನ್ನಪ್ಪಿದವರ ಸಂಖ್ಯೆ ಕೇವಲ 1 ಆಗಿದ್ದು, ಇದರಿಂದ ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 913483ಕ್ಕೆ ಏರಿಕೆಯಾಗಿದೆ. ಅದೇ ರೀತಿ 887815 ಒಟ್ಟು ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 642 ಸೋಂಕಿತರು, ಬಳ್ಳಾರಿಯಲ್ಲಿ 28, ಮೈಸೂರು 88, ಹಾಸನ 27, ಬೆಳಗಾವಿ 21, ತುಮಕೂರು 40, ಶಿವಮೊಗ್ಗ 19, ವಿಜಯಪುರ 21, ಉತ್ತರ ಕನ್ನಡ 14, ಧಾರವಾಡ 15, ದಕ್ಷಿಣ ಕನ್ನಡ 20, ಚಿಕ್ಕಬಳ್ಳಾಪುರ 27, ಚಿತ್ರದುರ್ಗ 19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

1143 New Coronavirus Cases Reported In Karnataka Today

ದಾವಣಗೆರೆ ಜಿಲ್ಲೆಯಲ್ಲಿ 19 ಕೊರೊನಾ ಪ್ರಕರಣಗಳು, ಕಲಬುರಗಿ 18, ಚಿಕ್ಕಮಗಳೂರು 10, ರಾಯಚೂರು 14, ಗದಗ 10, ಮಂಡ್ಯ 16, ಕೊಪ್ಪಳ 12, ಹಾವೇರಿಯಲ್ಲಿ 2 ಕೊರೊನಾ ವೈರಸ್ ಪ್ರಕರಣ ದೃಢಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+