ನೂರಾಎರಡು ವರ್ಷದ ಅಜ್ಜಿಗೆ ಪ್ರೆಸಿಡೆಂಟ್ ಆಗುವಾಸೆ?

ಚಾಮರಾಜನಗರ, ಜೂ. 08 : ಜಿಲ್ಲೆಯ ದೊಡ್ಡ ಅಳತ್ತೂರು ಹಳ್ಳಿಯಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿ, ಕೊರಳಿಗೆ ಹಾರ ಹಾಕಿಸಿಕೊಂಡು ಜೈಜೈಕಾರ ಹಾಕಿಸಿಕೊಂಡ ಈ ಮಹಿಳೆಯ ಹೆಸರು ಗೌತಮ್ಮ. ಗೆದ್ದಿದ್ದು ಮಾತ್ರವಲ್ಲದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೂ ಆಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಈ ಮಹಿಳೆ ಹೊಂದಿದ್ದಾರೆ.

ವಿಷಯ ಏನಪ್ಪಾ ಅಂದ್ರೆ, ಆ ಮಹಿಳೆಯ ವಯಸ್ಸು ಬರೊಬ್ಬರಿ 102! ಇನ್ನೂ ಗಟ್ಟಿಮುಟ್ಟಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸುವುದಕ್ಕೆ ವಯೋಮಿತಿ ನಿಗದಿಪಡಿಸಬೇಕು, ಯುವತಿಯರಿಗೆ ಅವಕಾಶ ನೀಡಬೇಕು ಎಂಬ ವಿಷಯ ಚರ್ಚೆ ಆಗುತ್ತಿರುವ ಹೊತ್ತಿನಲ್ಲಿ ಅನಕ್ಷರಸ್ಥೆಯಾಗಿರುವ ಗೌತಮ್ಮ ಸ್ಪರ್ಧಿಸಿರುವುದು ಮಾತ್ರವಲ್ಲ ಗೆದ್ದಿದ್ದಾರೆ ಕೂಡ.

ಅಚ್ಚರಿ ಅಂದರೆ, ಇದು ಅವರು ಮೊದಲನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದು. ಮೊದಲ ಏಟಿಗೇ ಸಿಕ್ಸರ್ ಬಾರಿಸಿದ್ದಾರೆ ಗೌತಮ್ಮ. ಈಗ, ಚಾಮರಾಜನಗರ ಜಿಲ್ಲೆ, ಕೊಳ್ಳೆಗಾರ ತಾಲೂಕಿನಲ್ಲಿ ಹನೂರು ಗ್ರಾಮ ಪಂಚಾಯತ್ ಅಡಿಯಲ್ಲಿ ಬರುವ ದೊಡ್ಡ ಅಳತ್ತೂರು ಗ್ರಾಮದಿಂದ ಸ್ಪರ್ಧಿಸಿ ಗೆದ್ದಿದ್ದಾರೆ ಗೌತಮ್ಮ. [ಪಂಚಾಯಿತಿ ಫಲಿತಾಂಶ : ಯಾರು, ಏನು ಹೇಳಿದರು?]

102-year-old GP member wants to become president

ಮೊದಲನೇ ಚುನಾವಣೆಯಲ್ಲಿಯೇ 354 ಮತಗಳನ್ನು ಗಳಿಸಿದ ಗೌತಮ್ಮ ಅವರು 160 ಮತಗಳನ್ನು ಗಳಿಸಿದ ತಮ್ಮ ಸಮೀಪದ ಸ್ಪರ್ಧಿ ನೀಲಮ್ಮ ಅವರನ್ನು ಸೋಲಿಸಿದ್ದಾರೆ. ಗೌತಮ್ಮ ಅವರ ಮೈದುನ ಕೂಡ ಮಂಡಲ ಪಂಚಾಯತ್ ಅಧ್ಯಕ್ಷರಾಗಿದ್ದರು.

ಭಾನುವಾರ ಜಿಲ್ಲಾ ಉಸ್ತುವಾರಿ ವಹಿಸಿರುವ ಎಚ್ಎಸ್ ಮಹದೇವ ಪ್ರಸಾದ್ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ಸನ್ನು ಸೇರಿದ ಗೌತಮ್ಮಮ್ಮ ಅವರು ತಾವು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಬೇಕು, ತಮ್ಮ ಹೆಸರನ್ನು ಅಧ್ಯಕ್ಷಗಿರಿಗೆ ಶಿಫಾರಸು ಮಾಡಬೇಕು ಎಂಬ ಅಹವಾಲನ್ನು ಮುಂದಿಟ್ಟಿದ್ದಾರೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಮೀಸಲಾತಿ ಪಟ್ಟಿ ಪ್ರಕಟವಾದ ನಂತರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವುದಾಗಿ ಮಹದೇವ ಪ್ರಸಾದ್ ಅವರು ಗೌತಮ್ಮ ಅವರಿಗೆ ಭರವಸೆ ನೀಡಿದ್ದಾರೆ. [ಪಂಚಾಯಿತಿ ಫಲಿತಾಂಶದಲ್ಲಿ ಹಿಂಗೂ ಆಯ್ತು ನೋಡಿ!]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+