ಕೆಲಸದಿಂದ ತೆಗೆದಿದ್ದಕ್ಕೆ ಕೈ ಕೊಯ್ದುಕೊಂಡ ಕಲಬುರಗಿ ಯುವಕ

ಕಲಬುರಗಿ, ಜನವರಿ 04: ಕಾರಣವಿಲ್ಲದೆ ಏಕಾಏಕಿ ಉದ್ಯೋಗದಿಂದ ತೆಗೆದ ಕಾರಣಕ್ಕೆ ಹತಾಶಗೊಂಡ ಯುವಕನೋರ್ವ ಕೈಕೊಯ್ದುಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿಯ ಸೇಡಂ ನಲ್ಲಿ ESI ಮೆಡಿಕಲ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಚನ್ನವೀರ ಚಾಕುವಿನಿಂದ ಕೈ ಕೊಯ್ದುಕೊಂಡಿದ್ದಾನೆ.

Young man cuts his hand for dismissing him from job

ಚನ್ನವೀರನನ್ನು ಸೇರಿದಂತೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 40 ಜನ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಕೆಲಸದಿಂದ ತೆಗೆದುಹಾಕಿ ನಂತರ 150 ಜನ ಹೊಸ ಕೆಲಸಗಾರರನ್ನು ಆಸ್ಪತ್ರೆಯ ಆಡಳಿತ ಮಂಡಳಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡಿತ್ತು.

ಹಳೆಯ ನೌಕರರನ್ನು ಕೆಲಸದಿಂದ ತೆಗೆದುಹಾಕಿ ಹೊಸ ನೌಕರರನ್ನು ಕೆಲಸಕ್ಕೆ ಸೇರಿಸಿಕೊಂಡಿರುವ ESI ಆಡಳಿತ ಮಂಡಳಿಯ ಎಂಜಿನಿಯರ್ ವಿರುದ್ಧ ನೌಕರರು ಪ್ರತಿಭಟನೆಗಳು ನಡೆಯುತ್ತಿದ್ದ ವೇಳೆ ಕೆಲಸ ಹೋಗಿದ್ದಕ್ಕೆ ಹತಾಶಗೊಂಡ ಚನ್ನವೀರ ಕೈಕೊಯ್ದುಕೊಂಡಿದ್ದಾನೆ.

ಯುವಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+