ವಿಡಿಯೋ; ಕಲಬುರಗಿಯಲ್ಲಿ ಎಸಿಬಿ ದಾಳಿ, ನೀರಿನ ಪೈಪ್‌ನಲ್ಲಿ ಹಣ!

ಕಲಬುರಗಿ, ನವೆಂಬರ್ 24; ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು 68 ವಿವಿಧ ಪ್ರದೇಶಗಳಲ್ಲಿ ಬುಧವಾರ ದಾಳಿ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳ ನಿವಾಸ, ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆದಿದ್ದು, ಪರಿಶೀಲನೆ ಮುಂದುವರೆದಿದೆ.

Recommended Video

      ACB ದಾಳಿ ವೇಳೆ ನೀರಿನ ಪೈಪ್ ನಿಂದ ಹಣ ತೆಗೆದಿದ್ದು ಹೇಗೆ ನೋಡಿ | Oneindia Kannada

      ಬುಧವಾರ ಬೆಳಗ್ಗೆ ಕಲಬುರಗಿಯಲ್ಲಿ ಎಸಿಬಿ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶಾಂತಗೌಡರ ಗುಬ್ಬಿ ಕಾಲೋನಿಯಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಅಧಿಕಾರಿಗಳು ಮನೆಗೆ ಬರುತ್ತಿದ್ದಂತೆ ನೀರಿನ ಪೈಪ್‌ಗೆ ಹಣವನ್ನು ಹಾಕಲಾಗಿತ್ತು.

       Video ACB Raid In Kalaburagi Money Found In Water Pipe

      ಐಷಾರಾಮಿ ಮನೆಯ 2ನೇ ಮಹಡಿಯಲ್ಲಿ ಶಾಂತಗೌಡ ಪುತ್ರನ ಜೊತೆ ವಾಸವಾಗಿದ್ದರು. ಅಧಿಕಾರಿಗಳು ಬರುತ್ತಿದ್ದಂತೆ ಹಣವನ್ನು ನೀರನ ಪೈಪ್‌ನಲ್ಲಿ ಹಾಕಿದ್ದರು. ಎಸಿಬಿ ಅಧಿಕಾರಿಗಳು ಈ ಕುರಿತು ಮಾಹಿತಿ ಪಡೆದು ಪ್ಲಂಬರ್ ಕರೆಸಿದ್ದಾರೆ.

      ಮನೆಯ ನೀರಿನ ಪೈಲ್ ಕಟ್ ಮಾಡಿಸಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ. ಪ್ಲಂಬರ್ ಪೈಪ್ ಕತ್ತರಿಸಿ ಹಣದ ಕಂತೆ ಹೊರತೆಗೆಯುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಶಾಂತಗೌಡ ಮನೆಯಲ್ಲಿ ಅಧಿಕಾರಿಗಳ ಪರಿಶೀಲನೆ ಇನ್ನು ಸಹ ಮುಂದುವರೆದಿದೆ.

      ಎಸಿಬಿ ಅಧಿಕಾರಿಗಳು ಕಲಬುರಗಿ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಜೇವರ್ಗಿ ಉಪವಿಭಾಗದ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದಾರಗೆ ಸೇರಿದ ಕಲಬುರಗಿ, ಯಡ್ರಾಮಿ, ಜೇವರ್ಗಿಯಲ್ಲಿರುವ ಕಚೇರಿ ಸೇರಿದಂತೆ 7 ಕಡೆ ದಾಳಿ ನಡೆಸಿದ್ದಾರೆ.

      ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ಆಕ್ರಮ ಆಸ್ತಿಯ ಜೊತೆ ಸರ್ಕಾರದ ಸಿಸಿ ರಸ್ತೆ ಸೌಲಭ್ಯಗಳನ್ನು ತಮ್ಮ ಮನೆ, ತೋಟಗಳಿಗೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ.

      ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ನಿವಾಸಕ್ಕೆ 4 ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಯಡ್ರಾಮಿ ತಾಲೂಕಿನ ಹಂಗರಗಾದಲ್ಲಿ ತೋಟದ ಮನೆ ಇದ್ದು, ಅದರ ಮೇಲೆ ಸಹ ದಾಳಿ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+