ನ.18ರಿಂದ ಕಲಬುರಗಿ-ದೆಹಲಿ ನಡುವೆ ಸ್ಟಾರ್ ಏರ್ ವಿಮಾನ ಹಾರಾಟ

ಕಲಬುರಗಿ, ಅಕ್ಟೋಬರ್ 31: ಸ್ಟಾರ್ ಏರ್ ಸಂಸ್ಥೆಯು ದೆಹಲಿ ಕಲಬುರಗಿ ನಡುವೆ ವಿಮಾನ ಯಾನ ಸೇವೆಯನ್ನು ಆರಂಭಿಸುತ್ತಿದ್ದು, ಇದೇ ನವೆಂಬರ್ 18ರಿಂದ ವಿಮಾನ ಯಾನ ಆರಂಭಗೊಳ್ಳಲಿರುವುದಾಗಿ ತಿಳಿಸಿದೆ.

ಈ ಕುರಿತು ಸ್ಟಾರ್ ಏರ್ ಸಂಸ್ಥೆಯು ತನ್ನ ಅಧೀಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ನವೆಂಬರ್ 18ರಿಂದ ದೆಹಲಿ-ಕಲಬುರಗಿ ವಿಮಾನ ಯಾನ ಆರಂಭಗೊಳ್ಳುತ್ತಿದ್ದು, ವಾರದಲ್ಲಿ ಮೂರು ದಿನಗಳ ಕಾಲ ಈ ಸೇವೆ ಲಭ್ಯವಿರುವುದಾಗಿ ತಿಳಿಸಿದೆ. ಕಲಬುರಗಿ-ಬೆಂಗಳೂರು ವಿಮಾನ ಯಾನ ಸೇವೆಗೆ ಈ ಭಾಗದ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಇದೀಗ ಕಲಬುರಗಿ-ದೆಹಲಿ (ಹಿಂಡಾನ್) ಗೆ ವಿಮಾನ ಸೇವೆಯನ್ನು ಆರಂಭಿಸಲಾಗುತ್ತಿದೆ.

ಪ್ರತಿ ಮಂಗಳವಾರ, ಬುಧವಾರ ಹಾಗೂ ಶನಿವಾರ, ಈ ಮೂರು ದಿನ ಬೆಳಿಗ್ಗೆ 10.20ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ 12.40ಕ್ಕೆ ದೆಹಲಿ ತಲುಪಲಿದೆ. ವಾರದ ಅದೇ ಮೂರು ದಿನ ದೆಹಲಿಯಿಂದ ಮಧ್ಯಾಹ್ನ 1.10ಕ್ಕೆ ಹೊರಡುವ ವಿಮಾನ, 3.30ಕ್ಕೆ ಕಲಬುರಗಿ ವಿಮಾನ ನಿಲ್ದಾಣ ತಲುಪಲಿದೆ.

Star Air To Start Delhi Kalaburagi Flight Serive From November 18

ನಾನ್ ಸ್ಟಾಪ್ ವಿಮಾನ ಇದಾಗಿದ್ದು, ಕೇವಲ 2 ಗಂಟೆ 20 ನಿಮಿಷದಲ್ಲಿ ಕಲಬುರಗಿಯಿಂದ ದೆಹಲಿ ತಲುಪಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+