ಅಕ್ಕನ ಮೇಲಿನ ಸಿಟ್ಟಿಗೆ ಭಾವನ ಮನೆಗೆ ಬೆಂಕಿಯಿಟ್ಟ ತಮ್ಮ: ಪೊಲೀಸರಿಂದ ಫೈರಿಂಗ್
ಕಲಬುರಗಿ, ಜುಲೈ.12: ಅಕ್ಕನ ಮೇಲಿನ ಕೋಪಕ್ಕೆ ಭಾವನ ಮನೆಗೆ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ ತಮ್ಮನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಜಿಲ್ಲೆಯ ಹೊರವಲಯದ ಸೇಡಂ ರಸ್ತೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದಾಗ, ಆತ್ಮರಕ್ಷಣೆಗಾಗಿ ಆರೋಪಿ ಮಹ್ಮದ್ ಮುಸ್ತಫಾ ಮೇಲೆ ಫೈರಿಂಗ್ ನಡೆಸಿದ್ದಾರೆ.
ಜು.4 ರಂದು ತನ್ನ ಅಕ್ಕನೊಂದಿಗೆ ಜಗಳವಾಡಿ ಆಕೆಯ ಮನೆಗೆ ಬೆಂಕಿ ಇಟ್ಟಿದ್ದ. ಘಟನೆಯಲ್ಲಿ ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದರು. ಜು. 10 ರಂದು ಹೈದರಾಬಾದ್‌ನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಮುಸ್ತಫಾ ಎಸ್ಕೇಪ್ ಆಗಿದ್ದ.

ಆದರೆ ನಿನ್ನೆ ಪೊಲೀಸರು ಮುಸ್ತಫಾನನ್ನು ಬಂಧಿಸಿ, ಇಂದು ವಿಚಾರಣೆ ವೇಳೆ ಮಾರಕಾಸ್ತ್ರಗಳ ಜಪ್ತಿಗೆ ಕರೆದೊಯ್ದಾಗ ಈ ಘಟನೆ ನಡೆದಿದೆ. ಮುಸ್ತಫಾ ಮಾಡಿರುವ ಹಲ್ಲೆಯಿಂದ ಇಬ್ಬರು ಎಎಸ್ಐ ಮತ್ತು ಇಬ್ಬರು ಹೆಡ್ ಕಾನ್ಸ್ಟೇಬಲ್ ಗೆ ಗಾಯಗಳಾಗಿವೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications