ಸರ್ಕಾರಿ ಬಸ್ ಬಾಡಿಗೆಗೆ; ವಿಶೇಷ ರಿಯಾಯಿತಿ ಲಭ್ಯ

ಕಲಬುರಗಿ, ಅಕ್ಟೋಬರ್ 30: ಕೋವಿಡ್ ಪರಿಸ್ಥಿತಿಯ ನಡುವೆಯೇ ಶಾಲಾ-ಕಾಲೇಜುಗಳನ್ನು ಆರಂಭಿಸುವ ಕುರಿತು ಚರ್ಚೆ ನಡೆದಿದೆ. ರಾಜ್ಯದ ಸಾರಿಗೆ ಸಂಸ್ಥೆಗಳು ಸರ್ಕಾರಿ ಬಸ್‌ಗಳನ್ನು ಶಾಲಾ-ಕಾಲೇಜುಗಳಿಗೆ ವಿಶೇಷ ರಿಯಾಯಿತಿ ಮೇಲೆ ಬಾಡಿಗೆಗೆ ನೀಡಲಿವೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಈ ಕುರಿತು ಘೋಷಣೆ ಮಾಡಿದೆ. ಶಾಲಾ-ಕಾಲೇಜು ಪ್ರಾರಂಭವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ಬಸ್‌ಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ ಎಂದು ಹೇಳಿದೆ.

ಶಾಲಾ-ಕಾಲೇಜುಗಳ ವೇಳಾ ಪಟ್ಟಿಯಂತೆ ಪಿಕ್‍ ಅಪ್ ಮತ್ತು ಡ್ರಾಪ್ ಮಾಡಲು ಬಸ್‌ಗಳನ್ನು ನೀಡಲಾಗುತ್ತದೆ. ಒಪ್ಪಂದದ ಮೇಲೆ ಸಂಸ್ಥೆಯ ವಾಹನಗಳನ್ನು ರಿಯಾಯಿತಿ ದರದಲ್ಲಿ ಸೇವೆಗೆ ನೀಡಲಾಗುತ್ತದೆ ಎಂದು ತಿಳಿಸಿದೆ.

NEKRTC Announced Rent Of Bus For School And College

ಕರ್ನಾಟಕ ಸಾರಿಗೆ ವಾಹನಗಳಿಗೆ 37 ರೂ., ಮಿನಿ ವಾಹನಗಳಿಗೆ 32 ರೂ. ಮತ್ತು ರಾಜಹಂಸ ವಾಹನಗಳಿಗೆ ಪ್ರತಿ ಕಿ. ಮೀ. ಗೆ 43 ರೂ. ರಂತೆ ದರಗಳನ್ನು ನಿಗದಿ ಮಾಡಲಾಗಿದೆ. ಆದರೆ, ಶಾಲಾ-ಕಾಲೇಜುಗಳಿಗೆ ಎಲ್ಲಾ ಮಾದರಿಯ ವಾಹನಗಳಿಗೆ ಪ್ರತಿ ಕಿ. ಮೀ. ಗೆ 2 ರೂ.ರಂತೆ ರಿಯಾಯಿತಿ ಇದೆ.

ಸಂಬಂಧಪಟ್ಟ ಶಾಲಾ-ಕಾಲೇಜುಗಳು ಬಸ್‌ಗಳು ಬಾಡಿಗೆಗೆ ಬೇಕಾದಲ್ಲಿ ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+