• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರಗಿ : ನರೇಂದ್ರ ಮೋದಿ ಸಮಾವೇಶ ಮತ್ತೆ ಮುಂದೂಡಿಕೆ

|

ಕಲಬುರಗಿ, ಫೆಬ್ರವರಿ 22 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಲಬುರಗಿ ಸಮಾವೇಶ ಮತ್ತೆ ಮುಂದೂಡಿಕೆಯಾಗಿದೆ. ಮಾರ್ಚ್ 1ರ ಬದಲು ಮಾರ್ಚ್ 7ರಂದು ಸಮಾವೇಶ ನಡೆಯಲಿದೆ.

2019ರ ಲೋಕಸಭಾ ಚುನಾವಣೆ ಪ್ರಚಾರವನ್ನು ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರು ಆರಂಭಿಸಿದ್ದಾರೆ. ಮಾರ್ಚ್1ರಂದು ಅವರು ಕಲಬುರಗಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಬೇಕಿತ್ತು.

ಫೆ.17ರ ನರೇಂದ್ರ ಮೋದಿ ಸಮಾವೇಶ ಮುಂದೂಡಿಕೆ

ಆದರೆ, ಸಮಾವೇಶದ ದಿನಾಂಕವನ್ನು ಮುಂದೂಡಲಾಗಿದೆ. ಮಾರ್ಚ್ 1ರ ಬದಲು ಮಾರ್ಚ್ 7ರಂದು ಕಲಬುರಗಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಕರ್ನಾಟಕಕ್ಕೆ ಬರುತ್ತಿರುವ ಮೋದಿಗೆ ಹಲವು ಪ್ರಶ್ನೆ ಕೇಳಿದ ಕಾಂಗ್ರೆಸ್!

ಫೆ.10ರಂದು ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಆರಂಭಿಸಿದ್ದರು. ಫೆ.17ರಂದು ಕಲಬುರಗಿಯಲ್ಲಿ ಸಮಾವೇಶ ನಿಗದಿಯಾಗಿತ್ತು. ಬಳಿಕ ಅದನ್ನು ಮಾರ್ಚ್ 1ಕ್ಕೆ ಮುಂದೂಡಲಾಗಿತ್ತು.

ಖರ್ಗೆ ವಾಗ್ದಾಳಿ : 'ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಅಲ್ಲ' ಎಂದು ಕ್ಷೇತ್ರದ ಸಂಸದ ಮತ್ತು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, 'ಅವರಿಗೆ ರಾಜಕೀಯ ಮುಖ್ಯ ಹೊರತು ಅಭಿವೃದ್ಧಿ ಅಲ್ಲವೇ ಅಲ್ಲ. ಅಭಿವೃದ್ಧಿ ಬಗ್ಗೆ ಅವರಿಗೆ ಚಿಂತೆ ಇದ್ದರೆ ನಾನೇನು ಮಾಡಿರುವೆ ಮಾಡಿರುವೆ ಎನ್ನುವ ಬಗ್ಗೆ ತಿಳಿದುಕೊಳ್ಳಬೇಕಾದರೆ ವಿಮಾನ ನಿಲ್ದಾಣ, ಇಎಸ್‌ಐ ಮೆಡಿಕಲ್ ಹಬ್‌ಗೆ ಭೇಟಿ ನೀಡಲಿ' ಎಂದರು.

English summary
Prime Minister of India Narendra Modi Kalaburagi rally postponed. March 1, 2019 rally postponed to March 7. This is 2nd election campaign rally of Narendra Modi in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X