ಕಲಬುರಗಿ: ಬಸ್ ಡಿಪೋಗೆ ಬೆಂಕಿ 12 ಬಸ್ ಬೆಂಕಿಗಾಹುತಿ
ಕಲಬುರಗಿ, ಫೆಬ್ರವರಿ 28: ನಗರದ ಎನ್‌ಇಕೆಎಸ್‌ಆರ್‌ಟಿಸಿ ಬಸ್ 3ನೇ ಡಿಪೋನಲ್ಲಿ ಆಕಸ್ಮಿಕವಾಗಿ ಬೆಂಕಿಹತ್ತಿಕೊಂಡ ಪರಿಣಾಮ ಬಸ್ಸುಗಳು ಬೆಂಕಿಗಾಹಿತಿಯಾಗಿವೆ.
12 ಬಸ್ಸುಗಳು ಬೆಂಕಿಗೆ ಆಹುತಿಯಾಗಿದ್ದು, ನೂರಾರು ಟೈರುಗಳು ಇನ್ನಿತರೆ ಬಸ್ಸಿನ ಬಿಡಿ ಭಾಗಗಳು ಬೆಂಕಿಯಿಂದ ಸುಟ್ಟು ಕರಕಲಾಗಿವೆ.

ದಟ್ಟವಾಗಿ ಹೊಗೆ ಆವರಿಸಿದ ಕಾರಣ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು, ಅಗ್ನಿಶಾಮಕ ದಳದವರು ಹರಸಾಹಸ ಪಟ್ಟು ಬೆಂಕಿಯನ್ನು ತಹಬದಿಗೆ ತಂದರಾದರೂ ಅಷ್ಟರಲ್ಲೆ 12 ಬಸ್ಸುಗಳು ಬೆಂಕಿಗೆ ಆಹುತಿಯಾಗಿದ್ದವು.

ಭಾರಿ ಗಾತ್ರದಲ್ಲಿ ಬೆಂಕಿಯ ಕೆನ್ನಾಲಗೆ ಹರಡಿದ್ದರಿಂದ ಡಿಪೋದ ಸುತ್ತಮುತ್ತಲನೆಯ ಬಡಾವಣೆಯ ಜನ ಆತಂಕದಿಂದ ಮನೆಗಳಿಂದ ಹೊರ ಬಂದಿದ್ದರು.












Click it and Unblock the Notifications