ಕಲಬುರಗಿ; ಖಾಜಾ ಬಂದಾ ನವಾಜ್ ದರ್ಗಾದ ಉರುಸ್ ರದ್ದು
ಕಲಬುರಗಿ, ಜುಲೈ 05 : ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಕಲಬುರಗಿಯ ಖಾಜಾ ಬಂದಾ ನವಾಜ್ ದರ್ಗಾದ ಉರುಸ್ ರದ್ದುಗೊಳಿಸಲಾಗಿದೆ. ಕಲಬುರಗಿಯಲ್ಲಿ ಶನಿವಾರ 37 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ.
ದರ್ಗಾದ ಮುಖ್ಯಸ್ಥ ಸೈಯದ್ ಶಾ ಖುಸ್ರೊ ಹುಸೇನಿ ಸಜ್ಜಾದ್ ನಶೀನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಜುಲೈ 6 ರಿಂದ 10ರ ತನಕ ಉರುಸ್ ನಡೆಸಲು ಉದ್ದೇಶಿಸಲಾಗಿತ್ತು.ಉರುಸ್‌ಗೆ ದೇಶದ ವಿವಿಧ ರಾಜ್ಯಗಳಿಂದ ಜನರು ಆಗಮಿಸುವ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ.

ಉರುಸ್ ನಡೆಸಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ಉರುಸ್, ಗಂಧದ ಮೆರವಣಿಗೆ, ಸೂಫಿ ಸಂತರ ಗ್ರಂಥಗಳ ಮೆರವಣಿಗೆ ಹಾಗೂ ತಿಂಗಳವರೆಗೆ ನಡೆಯುತ್ತಿದ್ದ ಜಾತ್ರೆಯನ್ನು ಈ ಬಾರಿ ರದ್ದುಗೊಳಿಸಲಾಗಿದೆ.
ಕರ್ನಾಟಕದಲ್ಲಿಯೇ ಕೊರೊನಾ ವೈರಸ್‌ಗೆ ಸೋಂಕಿಗೆ ವ್ಯಕ್ತಿಯೊಬ್ಬರು ಬಲಿಯಾದ ಜಿಲ್ಲೆ ಕಲಬುರಗಿ. ಶನಿವಾರವೂ 37 ಹೊಸ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1597ಕ್ಕೆ ಏರಿಕೆಯಾಗಿದೆ.
ಕರ್ನಾಟಕ ಸರ್ಕಾರ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಜುಲೈ 5 ರಿಂದ ಆಗಸ್ಟ್ 2ರ ವರೆಗೆ ವರೆಗಿನ ಎಲ್ಲಾ ಭಾನುವಾರಗಳಂದು ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.












Click it and Unblock the Notifications