ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಕಲಬುರಗಿ ವೈದ್ಯನಿಗೂ ಕೊರೊನಾ ಪಾಸಿಟಿವ್
ಕಲಬುರ್ಗಿ, ಮಾರ್ಚ್ 17: ಕಲಬುರಗಿಯಲ್ಲಿ ಮೂರನೇ ಕೊರೊನಾ ವೈರಸ್ ಪಾಸಿಟಿವ್ ದೃಢ ಪಟ್ಟಿದೆ. ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ.
Recommended Video
Kalaburagi marks one more corona case but Sriramulu urges not to worry
ಕಲಬುರಗಿ ವೃದ್ಧ ಕೊರೊನಾದಿಂದ ಮೃತಪಟ್ಟಿದ್ದರು. ಆ ನಂತರ ವೃದ್ಧನ ಪುತ್ರಿಗು ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು. ವೃದ್ಧನ ಆರೈಕೆ ಮಾಡಿದ ಮಗಳಿಗೆ ಕೊರೊನಾ ವೈರಸ್ ಹರಡಿತ್ತು. ಇದೀಗ ವೈದ್ಯನಿಗೂ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧನಿಗೆ ಕಲಬುರಗಿಯ ವೈದ್ಯರು ಚಿಕಿತ್ಸೆ ನೀಡಿದ್ದರು. ಈ ವೇಳೆ ವೈರಸ್ ಅವರಿಗೂ ಹರಡಿದೆ. ಕಲಬುರ್ಗಿಯಲ್ಲಿ ಕೊರೊನಾ ವೈರಸ್ ಮೂರನೇ ಪಾಸಿಟಿವ್ ಪ್ರಕರಣ ಇದಾಗಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಎರಡಂಕಿಯನ್ನು ದಾಡಿದೆ. ಒಟ್ಟು 11 ಪ್ರಕರಣಗಳು ಕಂಡು ಬಂದಿದೆ. ವೃದ್ಧನ ಸಂಪರ್ಕದಲ್ಲಿ ಇದ್ದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ.












Click it and Unblock the Notifications