ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ಕಲಬುರಗಿ ಮಹಿಳಾ ವಸತಿ ನಿಲಯ

ಕಲಬುರಗಿ, ಆಗಸ್ಟ್ 30: ಕಲಬುರಗಿ ನಗರದ ಆಳಂದ ರಸ್ತೆಯಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ನಿಲಯ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಯಿತು. ನಿಲಯದ ನಿವಾಸಿಗಳಾದ ಅಂಬಿಕಾ ಹಾಗೂ ಶಾರದಾಬಾಯಿ ಅವರ ವಿವಾಹವು ಸರಳವಾಗಿ ನಡೆಯಿತು.

ಮಹಿಳಾ ನಿಲಯದ ನಿವಾಸಿಯಾದ ಅಂಬಿಕಾ ವಿವಾಹವು ಕಲಬುರಗಿ ಬಿದ್ದಾಪುರ ಕಾಲೋನಿಯ ಕಾವೇರಿ ಮತ್ತು ಕೇಶವರಾವ ಕುಲಕರ್ಣಿ ಅವರ ಪುತ್ರ ವೆಂಕಟೇಶ ಅವರೊಂದಿಗೆ ನಡೆಯಿತು.

ಶಾರದಾಬಾಯಿ ಎಂಬ ಮಹಿಳಾ ನಿಲಯದ ನಿವಾಸಿ ವಿವಾಹ ಅಫಜಲಪುರ ತಾಲೂಕಿನ ಬಾದನಳ್ಳಿಯ ಮಹಾನಂದಾ ಮತ್ತು ಭೀಮಾಶಂಕರ ಜಮಾದಾರ ಇವರ ಜೇಷ್ಠ ಪತ್ರ ಮಲಕಣ್ಣಾ ಜೊತೆ ನಡೆಯಿತು.

Kalaburagi State Home Of Women Witness For Marriage

ಕೋವಿಡ್-19 ಪರಿಸ್ಥಿತಿ ಹಿನ್ನೆಲೆಯಲ್ಲಿ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ನೋಂದಣಿ ಮಾಡುವ ಮೂಲಕ ಸರಳವಾದಿ ಮದುವೆ ಕಾರ್ಯಕ್ರಮ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕ ಜಿ.ಎಸ್. ಗುಣಾರಿ, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಡಾ. ವಿಜಯಲಕ್ಷ್ಮೀ ಹೇರೂರು, ವಿವಾಹ ನೋಂದಣಾಧಿಕಾರಿ ಪರಸಪ್ಪ ಮುಂತಾದವರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+