ಕಲಬುರಗಿ-ಬೆಂಗಳೂರು-ಮೈಸೂರು ವಿಮಾನದ ವೇಳಾಪಟ್ಟಿ
ಕಲಬುರಗಿ, ಡಿಸೆಂಬರ್ 20 : ಕಲಬುರಗಿ-ಬೆಂಗಳೂರು-ಮೈಸೂರು ವಿಮಾನ ಸೇವೆಗೆ ಡಿಸೆಂಬರ್ 27ರಂದು ಚಾಲನೆ ದೊರೆಯಲಿದೆ. ಕಲಬುರಗಿ-ಬೆಂಗಳೂರು ನಡುವಿನ ಪ್ರಯಾಣ ದರ 2,645 ರೂ. ಆಗಿದೆ.
ಏರ್ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್ ಏರ್ ಕಲಬುರಗಿ-ಬೆಂಗಳೂರು-ಮೈಸೂರು ನಡುವೆ ವಿಮಾನ ಸಂಪರ್ಕವನ್ನು ಕಲ್ಪಿಸಲಿದೆ. ಉಡಾನ್ ಯೋಜನೆಯಡಿ 70 ಆಸನಗಳ ವಿಮಾನ ಹಾರಾಟ ನಡೆಸಲಿದೆ.
ಡಿಸೆಂಬರ್ 27ರಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ಟಿಕೆಟ್ ಬುಕ್ ಮಾಡುವವರಿಗೆ ಉಡಾನ್ ಯೋಜನೆಯಡಿ ರಿಯಾಯಿತಿ ಸಹ ದೊರೆಯಲಿದೆ.

ವಿಮಾನಯಾನ ಇಲಾಖೆ ಜೊತೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ ಮೂರು ತಿಂಗಳ ತನಕ ಸ್ಟಾರ್ ಏರ್ ವೇಸ್, ಅಲಯನ್ಸ್ ಏರ್, ಇಂಡಿಗೋ ಏರ್‌ಲೈನ್ಸ್ ವಿಮಾನಗಳಲ್ಲಿ ರಿಯಾಯಿತಿ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಲಬುರಗಿ-ಬೆಂಗಳೂರು-ಮೈಸೂರು ನಡುವಿನ ವಿಮಾನ ಸಂಚಾರ ಆರಂಭವಾದರೆ ಕಲ್ಯಾಣ ಕರ್ನಾಟಕ ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಇದರಿಂದಾಗಿ ವಾಣಿಜ್ಯೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ ಎಂಬ ನಿರೀಕ್ಷೆಯೂ ಇದೆ.
ವೇಳಾಪಟ್ಟಿ ವಿವರ
* ವಿಮಾನ ಸಂಖ್ಯೆ 91510 ಕಲಬುರಗಿಯಿಂದ 11.50ಕ್ಕೆ ಹೊರಟು 1.30ಕ್ಕೆ ಬೆಂಗಳೂರು ತಲುಪಲಿದೆ. 2.50ಕ್ಕೆ ಮೈಸೂರನ್ನು ತಲುಪಲಿದೆ.
* 91897 ಸಂಖ್ಯೆಯ ವಿಮಾನ ಮೈಸೂರಿನಿಂದ 8.30ಕ್ಕೆ ಹೊರಟು 9.10ಕ್ಕೆ ಬೆಂಗಳೂರು ತಲುಪಲಿದೆ. 11.25 ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.












Click it and Unblock the Notifications