ಮೋದಿ ನೇಣುಹಾಕಿಕೊಳ್ಳೋದಾದ್ರೆ, ರಸ್ತೆ ರೆಡಿ ಮಾಡಿಕೊಡ್ತೀವಿ: ಪ್ರಿಯಾಂಕ್ ಖರ್ಗೆ

ಕಲಬುರಗಿ, ಮೇ 13: ಮೋದಿ ನೇಣಿಗೇರಲು ಸಿದ್ಧ ಎನ್ನುವುದಾದರೆ, ನಾವು ರಸ್ತೆ ರೆಡಿ ಮಾಡಿಕೊಡ್ತೀವಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಚಿಂಚೋಳಿಯ ಶಾದಿಪುರದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ 'ನೋಟ್ ಬ್ಯಾನ್ ಪರಿಣಾಮ 50 ದಿನದಲ್ಲಿ ಸರಿಯಾಗದಿದ್ರೆ ನಡು ರಸ್ತೆಯಲ್ಲಿ ನೇಣು ಹಾಕಿ ಅಂತ ಮೋದಿ ಹೇಳಿದ್ರು, ಈಗಲೂ ಜನರ ಪರದಾಟ ತಪ್ಪಿಲ್ಲ, ನಾವು ರಸ್ತೆ ರೆಡಿ ಮಾಡಿಕೊಡಲು ಸಿದ್ದರಿದ್ದೆವೆ, ಮೋದಿ ಬರ್ತಾರಾ?' ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್‌ ಪಕ್ಷ 40ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಜಯ್ ಚೌಕದಲ್ಲಿ ನೇಣು ಹಾಕಿಕೊಳ್ಳುತ್ತಾರಾ ? ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.

If Modi wants to commit suicide, then we will help: Priyank Kharge

ಮಲ್ಲಿಕಾರ್ಜುನ ಖರ್ಗೆ ಕ್ಷಮೆಗೆ ಆಗ್ರಹಿಸುವ ಮುನ್ನ ಮೋದಿ ಸೇರಿ ಬಿಜೆಪಿ ನಾಯಕರು ಕ್ಷಮೆ ಕೇಳಲಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಬಗ್ಗೆ ನಿತ್ಯ ಕೀಳಾಗಿ ನಿಂದಿಸುವವರು ಯಾರು, ಖರ್ಗೆ ಅವರ ಮೇಲೆ ಕೇಸ್ ಹಾಕ್ತಿರೋದಾದ್ರೆ ದಯವಿಟ್ಟು ಮೋದಿ ವಿರುದ್ಧ ಮೊದಲು ಹಾಕಿ, ಶಾದಿಪುರ ಕಾಂಗ್ರೆಸ್ ಸಭೆಯಲ್ಲಿ ಪ್ರಿಯಾಂಕ್ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿರುದ್ಧ ಈಗಾಗಲೇ ಬಿಜೆಪಿ ಮುಖಂಡರು ಹರಿಹಾಯುತ್ತಿದ್ದಾರೆ, ಈಗ ಅವರ ಮಗ ಪ್ರಿಯಾಂಕ್ ಖರ್ಗೆ ಅಂತಹುದ್ದೇ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಇದರ ವಿರುದ್ಧವೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+