ಕಲಬುರಗಿ: ಎಸಿಬಿ ಬಲೆಗೆ ಮಹಾನಗರ ಪಾಲಿಕೆ ಆಯುಕ್ತ ಡಾ. ಶಂಕರಪ್ಪ ವಣಿಕ್ಯಾಳ
ಕಲಬುರಗಿ, ಜೂ. 2: ಇಲ್ಲಿಯ ಮಹಾನಗರ ಪಾಲಿಕೆ ಆಯುಕ್ತ ಡಾ. ಶಂಕರಪ್ಪ ವಣಿಕ್ಯಾಳ ಲಂಚ ಪಡೆಯುವಾಗ ನೇರವಾಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಕೋವಿಡ್ ಸುರಕ್ಷಾ ಚಕ್ರದ ನಿರ್ದೇಶಕ ಶರಣ್ ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆಗಿಳಿದ ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಆಯುಕ್ತರು ಸಿಕ್ಕಿಕೊಂಡಿದ್ದಾರೆ.
ಅಧೀನ ಸಿಬ್ಬಂದಿ ಮೂಲಕ ಪಡೆಯುತ್ತಿದ್ದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಡಾ.ಶಂಕರಪ್ಪ ವಣಿಕ್ಯಾಳ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬುಧವಾರ ರಾತ್ರಿ ಬಂಧಿಸಿರುವ ಘಟನೆ ನಡೆದಿದೆ.
ಮನೆಗೆ ಹಣ ತರುವಂತೆ ಬೇಡಿಕೆ
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕರಪ್ಪ ವಣಿಕ್ಯಾಳ ಹಾಗೂ ಪಾಲಿಕೆ ಅಕೌಂಟೆಂಟ್ ಚೆನ್ನಪ್ಪ ಅವರು ಬಿಲ್ ಒಂದನ್ನು ಪಾಸ್ ಮಾಡಲು ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೊರೋನಾ ಸುರಕ್ಷಾ ಚಕ್ರದ, 7.50 ಲಕ್ಷ ರೂಪಾಯಿ ಬಿಲ್ ಪಾಸ್ ಮಾಡಲು, ನಿರ್ದೇಶಕ ಶರಣ ಅವರಿಗೆ ಶಂಕ್ರಣ್ಣ ವಣಿಕ್ಯಾಳ, 2% ಕಮಿಷನ್ ಕೇಳಿದ್ದರು. ಅದರಂತೆ ಪಾಲಿಕೆ ಅಕೌಂಟೆಂಟ್ ಚೆನ್ನಪ್ಪ, 14 ಸಾವಿರ 500 ಲಂಚ ಪಡೆದಾಗ ಎಸಿಬಿ ಬಲೆಗೆ ಬಿದಿದ್ದಾರೆ.

ಕೊರೋನಾ ಸುರಕ್ಷಾ ಚಕ್ರದ ನಿರ್ದೇಶಕ ಶರಣ್ ನೀಡಿದ ದೂರಿನ ಆಧಾರದ ಮೇಲೆ ಟ್ರ್ಯಾಪ್ ಮಾಡಿ, ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಲಂಚ ಪಡೆದ ಅಕೌಂಟೆಂಟ್ ಚೆನ್ನಪ್ಪ, ಬಳಿಕ ಎಸಿಬಿ ಅಧಿಕಾರಿಗಳ ಮುಂದೆ ಕಮಿಷನರ್ ಶಂಕ್ರಣ್ಣ ವಣಿಕ್ಯಾಳಗೆ ಕರೆ ಮಾಡಿ ಹಣ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದ, ಕಮಿಷನರ್ ವಣಿಕ್ಯಾಳ, ಹಣ ಮನೆಗೆ ತೆಗೆದುಕೊಂಡು ಬಂದು ನೀಡುವಂತೆ ಚನ್ನಪ್ಪನಿಗೆ ಹೇಳಿದ್ದ.
ಚೆನ್ನಪ್ಪ ಹಾಗೂ ಕಮಿಷನರ್ ನಡುವೆ ನಡೆದ ಆಡಿಯೋ ಸಂಭಾಷಣೆ
ಎಸಿಬಿ ದಾಳಿ ವೇಳೆ ಅಕೌಂಟೆಂಟ್ ಚನ್ನಪ್ಪ ಬಳಿ ಇನ್ನೂ 1ಲಕ್ಷ 45 ಸಾವಿರ ಹಣ ಇರುವುದು ಪತ್ತೆಯಾಗಿದ್ದು, ಅದು ಕೂಡಾ ಕಮಿಷನರ್‌ಗರ ನೀಡೋದಕ್ಕೆ ಇಟ್ಟಿದ್ದ ಹಣ ಅಂತಾ ಹೇಳಿದ್ದ ಅಕೌಂಟೆಂಟ್ ಚೆನ್ನಪ್ಪ ಎಸಿಬಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ. ಚೆನ್ನಪ್ಪ ಹಾಗೂ ಕಮಿಷನರ್ ನಡುವೆ ನಡೆದ ಆಡಿಯೋ ಸಂಭಾಷಣೆ ಕೂಡ ಎಸಿಬಿ ಅಧಿಕಾರಿಗಳು ಪಡೆದಿದ್ದಾರೆ. ಸದ್ಯ ಎಸಿಬಿ ಅಧಿಕಾರಿಗಳಿಂದ ಕಮಿಷನರ್ ಶಂಕರಪ್ಪ ವಣಿಕ್ಯಾಳ, ಅಕೌಂಟೆಂಟ್ ಚೆನ್ನಪ್ಪನನ್ನು ಬಂಧಿಸಲಾಗಿದೆ.
ಐಎಎಸ್ ಶ್ರೇಣಿಯ ಅಧಿಕಾರಿಯನ್ನು ಪಾಲಿಕೆಗೆ ನೇಮಕ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕೆಎಎಸ್ ಅಧಿಕಾರಿಯಾದ ವಣಿಕ್ಯಾಳ ಅವರನ್ನು ನೇಮಕ ಮಾಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications