ಚೀನಾದ ವುಹಾನ್ ರೀತಿ ಕಲಬುರಗಿಯಲ್ಲೂ ದಿಗ್ಬಂಧನ: ಏನೆಲ್ಲಾ ಕ್ರಮ?

ಕಲಬುರಗಿ, ಮಾರ್ಚ್ 18: ಚೀನಾದ ವುಹಾನ್ ರೀತಿ ಕಲಬುರಗಿಯಲ್ಲೂ ದಿಗ್ಬಂಧನ ಹೇರಲಾಗಿದೆ. ಸೋಂಕಿತ ವೈದ್ಯನ ಮನೆಗೆ ಹೋಗುವ ರಸ್ತೆಗಳು ಬಂದ್ ಆಗಿವೆ. ಮನ ಸುತ್ತ 300 ಮೀಟರ್‌ವರೆಗೆ ಸಂಚಾರ ನಿಷೇಧಿಸಲಾಗಿದೆ.

Recommended Video

      No need to panic about Corona says this MBBS student | Oneindia kannada

      ಈಗಾಗಲೇ ಕೊರೊನಾದಿಂದ ಮೃತ ವೃದ್ಧನ ಪುತ್ರಿಗೆ ಸೋಂಕು ತಗುಲಿದ್ದು, ಇದೀಗ ವೃದ್ಧನಿಗೆ ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರಿಗೂ ತಗುಲಿದೆ. ಜಿಲ್ಲಾಡಳಿತ ಕಲಬುರಗಿಯಾದ್ಯಂತ ನಿರ್ಬಂಧಗಳನ್ನು ಹೇರಿದೆ. ಸೋಂಕಿತ ವೈದ್ಯ ವಾಸಿಸುವ ನಿವಾಸದ ಸುತ್ತ 300 ಮೀಟರ್ ವರೆಗೆ ಜನರ ಸಂಚಾರವನ್ನು ನಿಷೇಧಿಸಲಾಗಿದೆ.

      ಸೋಂಕು ಪತ್ತೆಯಾಗಿರುವ ವೈದ್ಯರು ಸರ್ಕಾರದ ಸೇವೆಯಲ್ಲಿದ್ದರು

      ಸೋಂಕು ಪತ್ತೆಯಾಗಿರುವ ವೈದ್ಯರು ಸರ್ಕಾರದ ಸೇವೆಯಲ್ಲಿದ್ದರು

      ಸೋಂಕು ಪತ್ತೆಯಾಗಿರುವ ವೈದ್ಯರು ಸರ್ಕಾರದ ಸೇವೆಯಲ್ಲಿದ್ದರು. ನಿವೃತ್ತಿ ನಂತರ ಖಾಸಗಿಯಾಗಿ ವೈದ್ಯ ವೃತ್ತಿ ಆರಂಭಿಸಿದ್ದರು. ಇವರಿಗೆ ಸೋಂಕು ಕಂಡಿದ್ದರಿಂದ ಪ್ರತ್ಯೇಕವಾಗಿ ಇಎಸ್‌ಐಸಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ನೆಲೆಸಿರುವ ಮನೆಯ ಸುತ್ತಮುತ್ತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

      ಕಲಬುರಗಿಯಲ್ಲಿ ಬಂದ್ ವಾತಾವರಣ

      ಕಲಬುರಗಿಯಲ್ಲಿ ಬಂದ್ ವಾತಾವರಣ

      ಜಿಲ್ಲೆಯಲ್ಲಿ ಮೂರನೇ ಕೊರೊನಾ ಪ್ರಕರಣ ಪತ್ತೆಯಾಗುತ್ತಿದ್ದಂತೆ ಜನರು ಮನೆಯಿಂದ ಹೊರ ಬರುವುದನ್ನೇ ನಿಲ್ಲಿಸಿದ್ದಾರೆ. ವಾಣಿಜ್ಯ ಮಳಿಗೆಗಳು , ಹೋಟೆಲ್, ರಸ್ತೆ ಬದಿ ಅಂಗಡಿ ಎಲ್ಲವೂ ಸಂಪೂರ್ಣವಾಗಿ ಬಂದ್ ಆಗಿದೆ. ವಾಣಿಜ್ಯ ಮಳಿಗೆಗಳು , ಹೋಟೆಲ್‌, ರಸ್ತೆ ಬದಿ ಅಂಗಡಿಗಳೆಲ್ಲವನ್ನೂ ಜಿಲ್ಲಾಡಳಿತ ಸಂಪೂರ್ಣ ಬಂದ್ ಮಾಡಿದೆ. ಅಗತ್ಯ ಕೆಲಸಗಳಿಗೆ ಮಾತ್ರ ಜನರು ಹೊರಗಡೆ ಬರುತ್ತಿದ್ದಾರೆ.

      ಕಲಬುರಗಿಯಲ್ಲಿ 3 ಸಾವಿರ ಮನೆಗಳ ಪರೀಕ್ಷೆ

      ಕಲಬುರಗಿಯಲ್ಲಿ 3 ಸಾವಿರ ಮನೆಗಳ ಪರೀಕ್ಷೆ

      ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮನೆ ಇರುವ ವಾರ್ಡ್ ಅನ್ನು ಈಗಾಗಲೇ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಅಲ್ಲಿರುವ ಮೂರು ಸಾವಿರ ಮನೆಗಳ ತಪಾಸಣೆ ನಡೆಸಲಾಗುತ್ತಿದೆ. 50 ಮಂದಿ ಆರೋಗ್ಯ ಸಿಬ್ಬಂದಿ ತಂಡವನ್ನು ರಚಿಸಿಕೊಂಡು ಪ್ರತಿ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

      ಚೀನಾದಿಂದ ಮರಳಿದ ವ್ಯಕ್ತಿ ತೋಟದಮನೆಗೆ

      ಚೀನಾದಿಂದ ಮರಳಿದ ವ್ಯಕ್ತಿ ತೋಟದಮನೆಗೆ

      ಚೀನಾದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬ ಮರಳಿ ಗ್ರಾಮಕ್ಕೆ ಆಗಮಿಸಿದ್ದರಿಂದ ಗ್ರಾಮಸ್ಥರೆಲ್ಲರೂ ಆತನನ್ನು ಕೊರೊನಾ ಆತಂಕದಿಂದ ದೂರವಿಟ್ಟಿರುವ ಘಟನೆ ಸವದತ್ತಿಯಲ್ಲಿ ನಡೆದಿದೆ. ಮುನವಳ್ಳಿಯ 32 ವರ್ಷದ ವ್ಯಕ್ತಿಯೊಬ್ಬರು ಮಾರ್ಚ್ 14ರಂದು ಸ್ವದೇಶಕ್ಕೆ ಮರಳಿದ್ದಾರೆ. ಊರಿಗೆ ಬಂದ ವ್ಯಕ್ತಿಯನ್ನು ನೇರವಾಗಿ ತೋಟದಮನೆಗೆ ಕಳುಹಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+