ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೋಮವಾರದ ಪ್ರವಾಸ ವೇಳಾಪಟ್ಟಿ
ಕಲಬುರಗಿ, ಫೆಬ್ರವರಿ 26: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ಕಲಬುರಗಿ, ಸೇಡಂ ಮತ್ತು ಬಸವ ಕಲ್ಯಾಣಕ್ಕೆ ಭೇಟಿ ನೀಡಲಿದ್ದಾರೆ. ಅವರ ಕಾರ್ಯಕ್ರಮಗಳ ವೇಳಾ ಪಟ್ಟಿ ಇಲ್ಲಿದೆ.
ಹಿಂದುಳಿದ ವರ್ಗದ ನಾಯಕರೊಂದಿಗೆ ಸಂವಾದ (ಕಲಬುರಗಿ) ಬೆಳಗ್ಗೆ 11
ಶಕ್ತಿ ಕೇಂದ್ರ ಪ್ರಮುಖರ ಸಭೆ (ಕಲಬುರಗಿ) ಮಧ್ಯಾಹ್ನ 12
ನವಶಕ್ತಿ ಸಮಾವೇಶ (ಸೇಡಂ) ಮಧ್ಯಾಹ್ನ 2
ಅನುಭವ ಮಂಟಪ ಭೇಟಿ (ಬಸವ ಕಲ್ಯಾಣ) ಸಂಜೆ 4
ನವಶಕ್ತಿ ಸಮಾವೇಶ (ಬಸವ ಕಲ್ಯಾಣ) ಸಂಜೆ 5

ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದು, ಈಚೆಗೆ ಉಡುಪಿ-ಮಂಗಳೂರು ಪ್ರವಾಸ ಕೈಗೊಂಡಿದ್ದ ಅವರು ಅನಾರೋಗ್ಯದ ಕಾರಣಕ್ಕೆ ಮೊಟಕುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ದಿನಗಳ ಲೆಕ್ಕಾಚಾರ ಶುರುವಾಗಿದ್ದು, ಅಮಿತ್ ಶಾ- ನರೇಂದ್ರ ಮೋದಿ ಕರ್ನಾಟಕಕ್ಕೆ ಪದೇ ಪದೇ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಮತ್ತೊಂದು ಕಡೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸಹ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಎರಡೂ ಪಕ್ಷಗಳ ಮಧ್ಯೆ ಆರೋಪ- ಪ್ರತ್ಯಾರೋಪಗಳು ಭಾರೀ ಕಾವು ಪಡೆದುಕೊಳ್ಳುತ್ತಿವೆ.












Click it and Unblock the Notifications