ಮೈಸೂರು-ಕಲಬುರಗಿ ನಡುವೆ ಅಲಯನ್ಸ್ ಏರ್ ಹಾರಾಟ

ಕಲಬುರಗಿ, ನವೆಂಬರ್ 27 : ಕಲಬುರಗಿಗೆ ಮೈಸೂರಿನಿಂದ ಪ್ರಯಾಣಿಸುವ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಲಯನ್ಸ್ ಏರ್ ಉಭಯ ನಗರಗಳ ನಡುವೆ ವಿಮಾನ ಸೇವೆಯನ್ನು ಆರಂಭಿಸಲಿದೆ. ನವೆಂಬರ್ 22ರಂದು ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡಿದೆ.

ಉಡಾನ್ ಯೋಜನೆಯಡಿ ಮೈಸೂರು-ಕಲಬುರಗಿ ನಡುವೆ ವಿಮಾನ ಸೇವೆಯನ್ನು ಆರಂಭಿಸಲಾಗುತ್ತಿದೆ. ಮೈಸೂರು-ಕೊಚ್ಚಿ ನಡುವೆ ಸಂಚಾರ ನಡೆಸುತ್ತಿದ್ದ ವಿಮಾನವನ್ನು ಅಲಯನ್ಸ್ ಏರ್ ರದ್ದುಗೊಳಿಸಿದ್ದು, ಅದೇ ವಿಮಾನ ಕಲಬುರಗಿಗೆ ಹಾರಲಿದೆ.

ಎಐ 9893 ವಿಮಾನ ಕೊಚ್ಚಿ-ಮೈಸೂರು ನಡುವೆ ಹಾರಾಟ ನಡೆಸುತ್ತಿತ್ತು. ಆದರೆ, ಕೊಚ್ಚಿ ವಿಮಾನ ನಿಲ್ದಾಣದ ರನ್ ವೇ ಕಾಮಗಾರಿ ಹಿನ್ನಲೆಯಲ್ಲಿ ಬೆಳಗಿನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ, ಈ ವಿಮಾನ ಕಲಬುರಗಿಗೆ ಹಾರಾಟ ನಡೆಸಲಿದೆ.

Alliance Air To Connect Mysuru Kalaburagi

ಸ್ಟಾರ್ ಏರ್ ಬೆಂಗಳೂರು-ಕಲಬುರಗಿ ನಡುವೆ ವಿಮಾನ ಸೇವೆಯನ್ನು ಆರಂಭಿಸಿದೆ. ಭಾನುವಾರ, ಸೋಮವಾರ ಮತ್ತು ಶುಕ್ರವಾರ ವಿಮಾನ ಉಭಯ ನಗರಗಳ ನಡುವೆ ಹಾರಲಿದ್ದು, 2850 ರೂ. ದರ ನಿಗದಿ ಮಾಡಲಾಗಿದೆ.

ಸ್ಟಾರ್ ಏರ್ ಕಲಬುರಗಿ-ತಿರುಪತಿ ನಡುವೆ ಶೀಘ್ರದಲ್ಲಿಯೇ ವಿಮಾನ ಸೇವೆಯನ್ನು ಆರಂಭಿಸಲು ತೀರ್ಮಾನಿಸಿದೆ. ಕಲಬುರಗಿಗೆ ಬೇರೆ-ಬೇರೆ ನಗರಗಳಿಂದ ಉಡಾನ್ ಯೋಜನೆಯಡಿ ವಿಮಾನ ಸೇವೆ ಶೀಘ್ರದಲ್ಲಿಯೇ ದೊರೆಯಲಿದೆ.

742.23 ಎಕರೆ ಪ್ರದೇಶದಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಏರ್ ಬಸ್‌ನಂತಹ ದೊಡ್ಡ ವಿಮಾನಗಳು ಸಹ ಬಂದಿಳಿಯಲು ಅನುಕೂಲವಾಗುವಂತೆ ರನ್ ವೇ ನಿರ್ಮಾಣ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+