ಮಗುವಿಗೆ ಚಿಕಿತ್ಸೆ ನೀಡಿ ಕೊರೊನಾಗೆ ತುತ್ತಾಗಿದ್ದ ಸರ್ಜನ್ ಗುಣಮುಖ

ಕಲಬುರಗಿ, ಮೇ 1: ಇಲ್ಲಿನ ಒಂದು ವರ್ಷದ ಮಗು ಕೊರೊನಾಗೆ ತುತ್ತಾಗಿತ್ತು. ಅದಕ್ಕೆ ಚಿಕಿತ್ಸೆ ನೀಡಿದ್ದ ಸರ್ಜನ್ ಕೂಡ ಸೋಂಕಿಗೆ ಗುರಿಯಾಗಿದ್ದು ಇದೀಗ ಚೇತರಿಸಿಕೊಂಡಿದ್ದಾರೆ.

ಕರ್ನಾಟಕದ ಪೇಷೆಂಟ್ ನಂ.302 ಇವರಾಗಿದ್ದು, ಗುರುವಾರದಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ ಕಲಬುರ್ಗಿಯ ಆಸ್ಪತ್ರೆಯಲ್ಲಿ ಕೋವಿಡ್-19 ಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿರುವವರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಪ್ರಕರಣ 50 ನ್ನು ದಾಟಿದ್ದರೆ 5 ಜನ ಮೃತಪಟ್ಟಿದ್ದಾರೆ.

ಇನ್ನೋರ್ವ ನರ್ಸ್ ಸಹ ಗುಣಮುಖರಾಗಬೇಕಿದ್ದು, ಕಲಬುರಗಿಯ ಡೆಪ್ಯುಟಿ ಕಮಿಷನರ್ ನೀಡಿರುವ ಮಾಹಿತಿಯ ಪ್ರಕಾರ ಒಟ್ಟಾರೆ 3,927 ಜನರ ಗಂಟಲು ದ್ರವವನ್ನು ಪರೀಕ್ಷಿಸಲಾಗಿದೆ. ಈ ಪೈಕಿ 3403 ಜನರ ಮಾದರಿಗಳು ಕೋವಿಡ್-19 ಕ್ಕೆ ನೆಗೆಟೀವ್ ಬಂದಿದ್ದರೆ 472 ಸ್ಯಾಂಪಲ್ ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

corona

ಕಲಬುರಗಿಯಲ್ಲಿ ಈ ಪ್ರಕರಣವೂ ಸೇರಿ ಇಬ್ಬರು ವೈದ್ಯರಿಗೆ ಕೊರೊನಾ ಸೋಂಕು ಹರಡಿತ್ತು, ಇಬ್ಬರೂ ವೈದ್ಯರು ಈಗ ಗುಣಮುಖರಾಗಿದ್ದಾರೆ. ಈ ವೈದ್ಯರು ಚಿಕಿತ್ಸೆ ನೀಡಿದ್ದ ಒಂದು ವರ್ಷದ ಮಗು ಕೋವಿಡ್-19 ರಿಂದ ಇನ್ನಷ್ಟೇ ಚೇತರಿಕೆ ಕಾಣಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+