ಕಲಬುರಗಿಯಲ್ಲಿ ಐವರು ಕೊರೊನಾ ಸೋಂಕಿತರ ಬಿಡುಗಡೆ

ಕಲಬುರಗಿ, ಮೇ 22: ಆರೋಗ್ಯ ಇಲಾಖೆಯು ಶುಕ್ರವಾರ ಸಂಜೆ ಹೊರಡಿಸಿರುವ ಆರೋಗ್ಯ ಬುಲೆಟಿನ್ ನಲ್ಲಿ ಕಲಬುರಗಿಯ ಐವರು ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸತತ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಕಲಬುರಗಿ ನಗರದ ಗಾಜಿಪುರ ನಿವಾಸಿ ಕೆಎಸ್ಆರ್ಪಿ ಪೇದೆ ರೋಗಿ ಸಂಖ್ಯೆ-679 ಮತ್ತು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿ ಸಂಖ್ಯೆ-604, ಕರೀಂ ನಗರ ನಿವಾಸಿ 35 ವರ್ಷದ ಪುರುಷ ರೋಗಿ ಸಂಖ್ಯೆ-697 ಇವರು ಗುಣಮುಖರಾಗಿದ್ದಾರೆ.

ಇದರ ಜೊತೆಗೆ ಇಸ್ಲಾಮಬಾದ್ ಕಾಲೋನಿ ನಿವಾಸಿ 36 ವರ್ಷದ ರೋಗಿ ಸಂಖ್ಯೆ-698 ಮತ್ತು ಇಸ್ಲಾಮಬಾದ್ ಕಾಲೋನಿ ನಿವಾಸಿ 41 ವರ್ಷದ ರೋಗಿ ಸಂಖ್ಯೆ-699 ವ್ಯಕ್ತಿಗಳು ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Five Coronavirus Persons Released From Hospital In Kalaburagi

ಕಲಬುರಗಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 134, ಸಾವನ್ನಪ್ಪಿರುವವರ ಸಂಖ್ಯೆ 7 ಮತ್ತು ಒಟ್ಟು 61 ಜನ ಗುಣಮುಖರಾಗಿದ್ದಾರೆ. ಉಳಿದಂತೆ 67 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+