ಕಲಬುರಗಿ: ಕಾರು ಪಲ್ಟಿ, ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರು ಸಾವು
ಕಲಬುರಗಿ, ಮೇ 23 : ಕಲಬುರಗಿಯ ಹೊರವಲಯದ ಗೀತಾ ನಗರ ಬಳಿ ಕಾರು ಪಲ್ಟಿಯಾಗಿ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ ಮೂವರು ಸಾವಿಗೀಡಾದ ದುರ್ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಶರಣಬಸಪ್ಪ(33), ಪ್ರತ್ಯಕ್ಷ (30), ಪ್ರತೀಕ್ (31) ಮೃತ ದುರ್ದೈವಿಗಳು. ಮೃತರ ಪೈಕಿ ಶರಣಪ್ಪ ಪಾಟೀಲ ಉದ್ಯಮಿಯಾಗಿದ್ದು ಇನ್ನಿಬ್ಬರು ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.

ರಾತ್ರಿ 11ರ ಸುಮಾರಿಗೆ ಊಟ ಮಾಡಲು ಸೇಡಂ ರಸ್ತೆಯ ಡಾಬಾಕ್ಕೆ ತೆರಳಿದ್ದರು. ಮನೆಗೆ ಹಿಂದಿರುಗಿ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಮೃತರು ಅಂತಿಮ ವರ್ಷದ ಎಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಇದೇ ಕಾಲೇಜಿನ ಇನ್ನಿಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದಯ, ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications