ಪುಲ್ವಾಮಾ ದಾಳಿ ಸುದ್ದಿ ಐಎಸ್ಐಗೆ ಮುಟ್ಟಿಸಿದ Spy ಬಂಧನ

ಜೈಪುರ, ಮಾರ್ಚ್ 14: ಪುಲ್ವಾಮಾ ಉಗ್ರರ ದಾಳಿ ನಂತರದ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಕಳುಹಿಸಿದ್ದ ಗೂಢಾಚಾರಿಯೊಬ್ಬನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು 36 ವರ್ಷ ವಯಸ್ಸಿನ ನವಾಬ್ ಖಾನ್ ಎಂದು ಗುರುತಿಸಲಾಗಿದೆ. ಗಾಂಗಾ ಗ್ರಾಮದ ನಿವಾಸಿಯಾಗಿದ್ದು, ಜೈಸ್ಮಲೇರ್ ನಲ್ಲಿ ಬಂಧಿಸಲಾಗಿದೆ. ಅಫೀಶಿಯಲ್ ಸೀಕ್ರೇಟ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಲಾಗಿದೆ.

ಭಾರತೀಯ ಸೇನೆ ಕುರಿತಂತೆ ಅನೇಕ ಮಾಹಿತಿಯನ್ನು ಈತ ಸಂಗ್ರಹಿಸಿದ್ದ,ದಾಳಿ ದಿನದಂದು ಆ ಹೆದ್ದಾರಿಯಲ್ಲಿ ಸಾಗುವ ಸಿಆರ್ ಪಿಎಫ್ ಯೋಧರ ವಾಹನಗಳ ಸಂಪೂರ್ಣ ಮಾಹಿತಿ ಹೊಂದಿದ್ದ. ಪುಲ್ವಾಮಾ ದಾಳಿಯ ನಂತರದ ಬೆಳವಣಿಗೆಗಳನ್ನು ಗುಪ್ತ ಚಿಹ್ನೆ ಹಾಗೂ ವಿಡಿಯೋ ಕಾಲ್ ಗಳ ಮೂಲಕ ಐಎಸ್ಐಗೆ ರವಾನಿಸಿದ್ದ.

Spy who passed information to ISI after Pulwama attack arrested

ಗೂಢಾಚಾರನಾಗಿ ಕಾರ್ಯ ನಿರ್ವಹಿಸಲು ಈತನಿಗೆ ಪಾಕಿಸ್ತಾನದಲ್ಲಿ 22 ದಿನಗಳ ಕಾಲ ತರಬೇತಿ ನೀಡಲಾಗಿತ್ತು. ಪಾಕಿಸ್ತಾನದಿಂದ ಬಂದ ಕೂಡಲೇ ಸೇನೆ ಕುರಿತ ಮಾಹಿತಿಗಳನ್ನು ಕಲೆ ಹಾಕಿ, ರವಾನಿಸುತ್ತಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಡಿಆರ್ ಡಿಒನಲ್ಲಿ ಸಿಬ್ಬಂದಿ ವೇಷದಲ್ಲಿದ್ದುಕೊಂಡು ಬ್ರಹ್ಮೋಸ್ ಸೇರಿದಂತೆ ಅನೇಕ ರಹಸ್ಯ ಮಾಹಿತಿ ಸೋರಿಕೆ ಮಾಡಿದ್ದ ಪಾಕಿಸ್ತಾನ ಗೂಢಾಚಾರನ ಬಂಧನದ ನಂತರ, ಗಡಿಭಾಗದಲ್ಲಿ ಗೂಢಚಾರರನ್ನು ಬಂಧಿಸಲು ತೀವ್ರ ಶೋಧಕಾರ್ಯ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+