ರಾಹುಲ್ ಗಾಂಧಿ ನೈಜ ಗೋತ್ರ ಯಾವುದು? ಅರ್ಚಕ ಬಹಿರಂಗಪಡಿಸಿದ ಸಂಗತಿ

ಪುಷ್ಕರ್ (ರಾಜಸ್ಥಾನ), ನವೆಂಬರ್ 26: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಗೋತ್ರ ಯಾವುದು? ಈ ಪ್ರಶ್ನೆ ಪದೇ ಪದೇ ಚರ್ಚೆಗೆ ಒಳಪಡುತ್ತಿದೆ.

'ರಾಹುಲ್ ಗಾಂಧಿ ಅವರು ಜನಿವಾರ ಧರಿಸುವುದಾದರೆ ಅವರು ಯಾವ ರೀತಿಯ ಯಜ್ಞೋಪವೀತ ಧರಿಸುತ್ತಾರೆ? ಅವರ ಗೋತ್ರ ಯಾವುದು?' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್, ರಾಹುಲ್ ಗಾಂಧಿ ಅವರ ಗೋತ್ರ 'ಭಾರತೀಯ' ಎಂದು ವ್ಯಂಗ್ಯದ ಪ್ರತ್ಯುತ್ತರ ನೀಡಿತ್ತು.

rahul gandhi gotra revealed by rajasthan priest dattatreya

ಈಗ ರಾಹುಲ್ ಗಾಂಧಿ ಅವರ ನಿಜವಾದ ಗೋತ್ರ ಯಾವುದು ಎಂದು ರಾಜಸ್ಥಾನದ ಪುಷ್ಕರ್‌ನ ಪ್ರಸಿದ್ಧ ಬ್ರಹ್ಮ ದೇವಸ್ಥಾನದ ಅರ್ಚಕರು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ರಾಹುಲ್ ಗಾಂಧಿ ಅವರು, ತಾವು ಕಾಶ್ಮೀರಿ ಕೌಲ ಬ್ರಾಹ್ಮಣರಾಗಿದ್ದು, ತಮ್ಮದು ದತ್ತಾತ್ರೇಯ ಗೋತ್ರ ಎಂದು ಹೇಳಿಕೊಂಡಿದ್ದಾಗಿ ಅರ್ಚಕರು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅವರ ಕುಟುಂಬ ಇಲ್ಲಿಗೆ 15 ವರ್ಷಗಳ ಹಿಂದೆ ಬಂದಿತ್ತು. ರಾಹುಲ್ ಅವರು ಕಾಶ್ಮೀರಿ ಬ್ರಾಹ್ಮಣ. ಅವರದು ದತ್ತಾತ್ರೇಯ ಗೋತ್ರ ಎಂದು ಅರ್ಚಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+