ಕೂಲರ್‌ಗಾಗಿ ರೋಗಿಯ ವೆಂಟಿಲೇಟರ್ ಸ್ವಿಚ್ ಆಫ್ ಮಾಡಿದ್ರು: ಮುಂದೇನಾಯ್ತು?

ಜೈಪುರ, ಜೂನ್ 20: ಕುಟುಂಬದ ಬೇಜವಾಬ್ದಾರಿಯಿಂದಲೇ ಕೊರೊನಾ ಸೋಂಕಿತರೊಬ್ಬರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಆಸ್ಪತ್ರೆಗೆ ಬಂದ ಕುಟುಂಬದವರು ಹೆಚ್ಚು ಸೆಕೆಯೆಂದು ರೋಗಿಗೆ ಹಾಕಿದ್ದ ವೆಂಟಿಲೇಟರ್ ಪ್ಲಗ್ ತೆಗೆದು ಏರ್ ಕೂಲರ್ ಆನ್ ಮಾಡಿದ ಕಾರಣ ವ್ಯಕ್ತಿ ಕೃತಕ ಉಸಿರಾಟ ವ್ಯವಸ್ಥೆ ಇಲ್ಲದೆ ಮೃತಪಟ್ಟಿದ್ದಾರೆ.

40 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದಾಗಿ ಮಹಾರಾವ್ ಭೀಮ್ ಸಿಂಗ್ ಆಸ್ಪತ್ರೆಗೆ ಜೂನ್ 13 ರಂದು ದಾಖಲಾಗಿದ್ದರು. ಆದರೆ ಅವರ ವರದಿ ಕೊನೆಗೆ ನೆಗೆಟಿವ್ ಬಂದಿತ್ತು.

Ventilator
ಜೂನ್ 15ರಂದು ವ್ಯಕ್ತಿಯನ್ನು ಐಸೋಲೇಷನ್‌ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುನಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ಈಸೋಲೇಷನ್‌ ವಾರ್ಡ್‌ನಲ್ಲಿ ಅತಿ ಹೆಚ್ಚು ಸೆಕೆ ಇತ್ತು, ಅಂದು ಕುಟುಂಬದವರು ಏರ್‌ ಕೂಲರ್‌ನ್ನು ತೆಗೆದುಕೊಂಡು ಬಂದಿದ್ದರು. ಅವರು ವೆಂಟಿಲೇಟರ್ ಪ್ಲಗ್ ತೆಗೆದು ಏರ್ ಕೂಲರ್ ಪ್ಲಗ್ ಹಾಕಿದ್ದರು. ಅರ್ಧ ಗಂಟೆ ಬಳಿಯ ವಿದ್ಯುತ್ ಇಲ್ಲದೇ ವೆಂಟಿಲೇಟರ್ ಆಫ್ ಆಗಿದೆ. ತಕ್ಷಣವೇ ವೈದ್ಯರಿಗೆ ಮಾಹಿತಿ ನೀಡಲಾಯಿತು ಅಷ್ಟರೊಳಗ ವ್ಯಕ್ತಿ ಮೃತಪಟ್ಟಿದ್ದರು.

ಈ ಸಾವಿಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಅವರು ಕೂಲರ್ ಆನ್ ಮಾಡಲು ಆಸ್ಪತ್ರೆಯಿಂದ ಅನುಮತಿ ಪಡೆಯಬೇಕಿತ್ತು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಜೊತೆ ಕುಟುಂಬವರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಡಾ. ಸಮೀರ್ ಟಂಡರ್ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+