ತನಗಿಂತ 12 ವರ್ಷ ಹಿರಿಯ ಅಧಿಕಾರಿಯೊಂದಿಗೆ ಎರಡನೇ ಮದುವೆಯಾದ ಟೀನಾ ದಾಬಿ
ಜೈಪುರ, ಏಪ್ರಿಲ್ 21: ಯುಪಿಎಸ್‌ಸಿ ಪರೀಕ್ಷೆಯ 2016ನೇ ಬ್ಯಾಚ್‌ನಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿ ಬಳಿಕ ಐಎಎಸ್ ಅಧಿಕಾರಿಯಾಗಿದ್ದ ಟೀನಾ ದಾಬಿ ಜೈಪುರನಲ್ಲಿ ಎರಡನೇ ಮದುವೆಯಾಗಿದ್ದಾರೆ.
ಟೀನಾ ಅವರು ಈ ಹಿಂದೆ ತಮ್ಮ ಬ್ಯಾಚ್‌ನಲ್ಲಿ ಸ್ನೇಹಿತನಾಗಿದ್ದ ಹಾಗೂ ದೇಶಕ್ಕೆ ಐಎಎಸ್‌ನಲ್ಲಿ 2ನೇ ಸ್ಥಾನಗಳಿಸಿದ್ದ ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಅಥರ್ ಅಮೀರ್ ಖಾನ್ ಜೊತೆಗೆ ಟೀನಾಳ ಮದುವೆ ದೇಶದಲ್ಲಿ ಸುದ್ದಿ ಮಾಡಿತ್ತು. ಕೆಲ ದಿನಗಳ ಹಿಂದೆ ಟೀನಾ ಮತ್ತು ಅಥರ್ ಅಮೀರ್ ಖಾನ್ ವಿಚ್ಛೇದನ ನೀಡಿ ತಮ್ಮಿಬ್ಬರ ಸಂಬಂಧಕ್ಕೆ ಅಂತ್ಯ ಹಾಡಿದ್ದರು.
ಆದರೆ ಇದೀಗ ಟೀನಾ ದಾಬಿ ಮತ್ತೆ ಹಿರಿಯ ಅಧಿಕಾರಿಯ ಜೊತೆಗೆ ಎರಡನೇ ಮದುವೆಯಾಗಿದ್ದು ತಮ್ಮ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ಹೌದು ಎರಡನೇ ಬಾರಿ ಹಸೆಮಣೆಯೇರಿದ ಟೀನಾ ದಾಬಿ ಬುಧವಾರ ಜೈಪುರದ ಖಾಸಗಿ ಹೋಟೆಲ್‌ನಲ್ಲಿ ಡಾ. ಪ್ರದೀಪ್ ಗವಾಂಡೆ ಅವರೊಂದಿಗೆ ಎರಡನೇ ಮದುವೆಯಾಗಿದ್ದಾರೆ. ಈ ಬಹಳ ಸರಳವಾಗಿ ಮದುವೆಯಾಗಿದ್ದು ಈ ಮದುವೆಯಲ್ಲಿ ಆಪ್ತವರ್ಗದ ಸಂಬಂಧಕರು, ಸ್ನೇಹಿತರು ಕೆಲವು ಅತಿಥಿಗಳು ಹಾಗೂ ಟೀನಾ ಮತ್ತು ಗವಾಂಡೆ ಕುಟುಂಬದ ಸಂಬಂಧಿಕರು ಈ ಎರಡನೇ ಮುದುವೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಟೀನಾ ದಾಬಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ತನಗಿಂತ 12 ವರ್ಷ ವರ್ಷ ಸೀನಿಯರ್ ಆಗಿರುವ ಡಾ. ಪ್ರದೀಪ್ ಗವಾಂಡೆ ಅವರನ್ನು ವಿವಾಹವಾಗಿದ್ದಾರೆ. ಇನ್ನು ಇವರಿಬ್ಬರ ಮದುವೆಯ ವಿಶೇಷ ಆರತಕ್ಷತೆ ಕಾರ್ಯಕ್ರಮವನ್ನು ಜೈಪುರದ ಐಶಾರಾಮಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದು ಏಪ್ರಿಲ್ 12ರಂದು ಈ ಮದುವೆಯ ಕಾರ್ಯಕ್ರಮ ನಡೆಯಲಿದೆ.

ಟೀನಾ ದಾಬಿ ಜೊತೆಗಿನ ಪ್ರದೀಪ್ ಗವಾಂಡೆ ಈ ಎರಡನೇ ವಿವಾಹವು ರಾಜಸ್ಥಾನಿ ಮತ್ತು ಮರಾಠಿ ಸಂಪ್ರದಾಯಗಳಂತೆ ನರವೇರಿತು. ಪ್ರದೀಪ್ ಅವರ ಕುಟುಂಬವು ಮರಾಠಿಯಾಗಿದ್ದು ಟೀನಾ ಅವರ ಕುಟುಂಬವು ರಾಜಸ್ಥಾನಿಯಾಗಿದ್ದಾರೆ. ಇವರಿಬ್ಬರ 'ಆಶೀರ್ವಾದ ಸಮಾರಂಭ' ನಾಳೆ ನಡೆಯಲಿದೆ. ಈ ಮದುವೆಯ ಸಭಾರಂಭಕ್ಕೆ ಅಧಿಕಾರಿಗಳು ಹಾಗೂ ರಾಜಕೀಯ ಕ್ಷೇತ್ರದ ಜನರನ್ನುಆಹ್ವಾನಿಸಲಾಗಿದೆ.

ಡಾ. ಪ್ರದೀಪ್ ಗಾವಂಡೆ ಯಾರು?
ಟೀನಾ ಸದ್ಯ ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿ ಮತ್ತು ಪ್ರದೀಪ್ ಉನ್ನತ ಶಿಕ್ಷಣ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಡಾ. ಪ್ರದೀಪ್ ಗಾವಂಡೆ ಅವರು 2013ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು ಟೀನಾ ದಾಬೆ ಅವಳಗಿಂತ 12 ವರ್ಷ ಹಿರಿಯರಾಗಿರುವ ಡಾ. ಪ್ರದೀಪ್ ಸದ್ಯ ರಾಜಸ್ಥಾನದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.












Click it and Unblock the Notifications