ಪ್ರತಿಭಟನಾ ನಿರತ ರೈತರು ತಿನ್ನುತ್ತಿರುವ ಚಿಕನ್ ಬಿರಿಯಾನಿಯಿಂದ ಹಕ್ಕಿ ಜ್ವರ ಹರಡುತ್ತಿದೆ: ಬಿಜೆಪಿ ಶಾಸಕ ಆರೋಪ

ಜೈಪುರ,ಜನವರಿ 10: ದೆಹಲಿಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ತಿನ್ನುವ ಚಿಕನ್ ಬಿರಿಯಾನಿಯಿಂದಲೇ ಹಕ್ಕಿ ಜ್ವರ ಹರಡಿದೆ ಎಂದು ಬಿಜೆಪಿ ಶಾಸಕ ಮದನ್ ದಿಲ್ವಾರ್ ಆರೋಪಿಸಿದ್ದಾರೆ. ಪ್ರತಿಭಟನಾ ಸ್ಥಳಗಳಲ್ಲಿ ಚಿಕನ್ ಸೇವಿಸುವ ಮೂಲಕ ಹಕ್ಕಿ ಜ್ವರ ಹರಡುತ್ತಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಸೋ ಕಾಲ್ಡ್ ರೈತರಿಗೆ ದೇಶದ ಬಗ್ಗೆ ಆತಂಕವಿಲ್ಲ, ಸವಿಯಾದ ಭಕ್ಷ್ಯಗಳ ಹೊರತಾಗಿ ಲಕ್ಸುರಿಯಾಗಿ ಪಿಕ್ ನಿಕ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ವೇಳೆ ರೈತರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸದಿದ್ದರೆ ಹಕ್ಕಿಜ್ವರ ದೇಶದ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಲಿದೆ ಎಂದು ದಿಲ್ವಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಕೆಲ ಸೋ ಕಾಲ್ಡ್ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಸೋ ಕಾಲ್ಡ್ ರೈತರು ಯಾವುದೇ ಚಳವಳಿಯಲ್ಲಿ ತೊಡಗಿಸಿಕೊಂಡಿಲ್ಲ ಆದರೆ, ಚಿಕನ್ ಬಿರಿಯಾನಿ, ಡ್ರೈ ಪ್ರೂಟ್ಸ್ ತಿನ್ನುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದ ಹಕ್ಕಿ ಜ್ವರ ಹರಡುವ ಶಂಕೆ ಇರುವುದಾಗಿ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನಾನಿರತ ರೈತರಲ್ಲಿ ಕೆಲವರು ಉಗ್ರರು, ದರೋಡೆಕೋರರು, ಕಳ್ಳ ಕಾಕರು, ರೈತ ವಿರೋಧಿಗಳಿರುವ ಸಾಧ್ಯತೆಯಿದೆ. ಇವರೆಲ್ಲರೂ ದೇಶ ಹಾಳಾಗುವುದನ್ನು ಬಯಸಿದ್ದಾರೆ ಎಂದು ಬಿಜೆಪಿ ಶಾಸಕ ಆರೋಪಿಸಿದ್ದಾರೆ.

ರೈತರು ಪ್ರತಿಭಟನೆ ನಿಲ್ಲಿಸದಿದ್ದರೆ ದೇಶಾದ್ಯಂತ ಹಕ್ಕಿಜ್ವರ

ರೈತರು ಪ್ರತಿಭಟನೆ ನಿಲ್ಲಿಸದಿದ್ದರೆ ದೇಶಾದ್ಯಂತ ಹಕ್ಕಿಜ್ವರ

ಒಂದು ವೇಳೆ ಇನ್ನು ಕೆಲವೇ ದಿನಗಳಲ್ಲಿ ಸರ್ಕಾರ ಅವರನ್ನು ಮಾತುಕತೆ ಅಥವಾ ಬಲಪ್ರಯೋಗದ ಮೂಲಕ ಅಲ್ಲಿಂದ ತೆರವುಗೊಳಿಸದೇ ಇದ್ದರೇ , ದೇಶಾದ್ಯಂತ ಹಕ್ಕಿ ಜ್ವರ ವ್ಯಾಪಕವಾಗಲಿದೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ದಿಲಾವರ್‌ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಇದು ಬಿಜೆಪಿಯರ ಸಂಸ್ಕೃತಿ ತೋರಿಸುತ್ತದೆ ಎಂದು ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಗೋವಿಂದ್‌ ಸಿಂಗ್‌ ದೋಟ್‌ಸಾರ ಹೇಳಿದ್ದಾರೆ.

ರೈತರು ತಿನ್ನುವ ಚಿಕನ್ ಬಿರಿಯಾನಿಯಿಂದಲೇ ಹಕ್ಕಿ ಜ್ವರ

ರೈತರು ತಿನ್ನುವ ಚಿಕನ್ ಬಿರಿಯಾನಿಯಿಂದಲೇ ಹಕ್ಕಿ ಜ್ವರ

ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರು ದೇಶಾದ್ಯಂತ ಹಕ್ಕಿ ಜ್ವರ ಹರಡಲಿಕ್ಕಾಗಿಯೇ ಚಿಕನ್‌ ಬಿರಿಯಾನಿ ತಿನ್ನುತ್ತಿದ್ದಾರೆ ಎಂದು ಬಿಜೆಪಿ ಶಾಸಕರೊಬ್ಬರು ಆರೋಪ ಮಾಡಿದ್ದಾರೆ.

ಪ್ರತಿಭಟನಾ ನಿರತರಲ್ಲಿ ಹಲವು ಮಂದಿ ಉಗ್ರಗಾಮಿಗಳಿರಬಹುದು

ಪ್ರತಿಭಟನಾ ನಿರತರಲ್ಲಿ ಹಲವು ಮಂದಿ ಉಗ್ರಗಾಮಿಗಳಿರಬಹುದು

ರೈತರು ನಿಯಮಿತವಾಗಿ ಬಿರಿಯಾನಿ ಸೇವಿಸುತ್ತಿದ್ದಾರೆ. ಕಾಜೂ ಬಾದಮ್‌ ಕೂಡ ಅವರಿಗೆ ಸಿಗುತ್ತಿದೆ. ಅವರು ಎಲ್ಲಾ ರೀತಿಯಲ್ಲಿ ಅಲ್ಲಿ ಸುಖ ಅನುಭವಿಸುತ್ತಿದ್ದಾರೆ. ಅದರಲ್ಲಿ ತುಂಬಾ ಮಂದಿ ಉಗ್ರಗಾಮಿಗಳಿರಬಹುದು. ಕಳ್ಳರು, ಲೂಟಿ ಕೋರರೂ ಇದ್ದಾರೆ. ಅವರು ರೈತರ ವಿರೋಧಿಗಳು ಎಂದು ಹೇಳಿ ವಿವಾದ ಸೃಷ್ಟಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ರಾಜಸ್ಥಾನದ ರಾಮ್‌ಗಂಜ್‌ ಮಂಡಿ ಕ್ಷೇತ್ರದ ಶಾಸಕ ಮದನ್‌ ದಿಲಾವರ್‌ ಈ ಆರೋಪ ಮಾಡಿದ್ದಾರೆ. ಅವರು ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ದೇಶಾದ್ಯಂತ ಹಕ್ಕಿ ಜ್ವರ ಹರಡಲಿಕ್ಕಾಗಿಯೇ ಪ್ರತಿಭಟನಾ ನಿರತ ರೈತರು ಚಿಕನ್‌ ಬಿರಿಯಾನಿ ಸೇವಿಸುತ್ತಿದ್ದಾರೆ.

ಅಲ್ಲದೇ ಪ್ರತಿಭಟನೆ ನಡೆಸುವ ಮೂಲಕ ಬಿಕ್ಕಟ್ಟು ಉಂಟು ಮಾಡುತ್ತಿರುವವರು ಉಗ್ರರು, ಕಳ್ಳರು, ದರೋಡೆಕೋರರು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+