ರಾಜಸ್ಥಾನದಲ್ಲಿ ಪೈಲಟ್ ವಿರುದ್ಧ ಬಿಜೆಪಿಯಿಂದ ಏಕೈಕ ಮುಸ್ಲಿಂ ಅಭ್ಯರ್ಥಿ ಕಣಕ್ಕೆ!

ಜೈಪುರ, ನವೆಂಬರ್ 19: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಅವರ ಕ್ಷೇತ್ರವಾದ ಟೋಂಕ್ ನಲ್ಲಿ ಬಿಜೆಪಿಯು ತನ್ನ ಏಕೈಕ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಸೋಮವಾರ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ, ಟೋಂಕ್ ಕ್ಷೇತ್ರದಿಂದ ರಾಜ್ಯ ಸಚಿವ ಯುನಸ್ ಖಾನ್ ಅವರನ್ನು ಕಣಕ್ಕಿಳಿಸಿದೆ.

ರಾಜ್ಯ ಸಾರಿಗೆ ಸಚಿವರಾಗಿರುವ ಯುನಸ್ ಖಾನ್ ಇಲ್ಲಿನ ದೀಡ್ವಾನಾ ಕ್ಷೇತ್ರದ ಶಾಸಕರಾಗಿದ್ದರು. ಆದರೆ ಈ ಬಾರಿ ಅವರನ್ನು ಟೋಂಕ್ ಕ್ಷೇತ್ರದಿಂದ ಕಣಕ್ಕಿಳಿಸುತ್ತಿದ್ದು, ಅದಕ್ಕೆ ಕಾರಣ, ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಹೆಚ್ಚಿರುವುದು.

BJP fields muslim candidate against Sachin Pilot in Tonk

ಈ ಕ್ಷೇತ್ರದ ಹಾಲಿ ಶಾಸಕ ಅಜಿತ್ ಸಿಂಗ್ ಮೆಹ್ತಾ ಅವರ ಬದಲಿಗೆ ಖಾನ್ ಅವರಿಗೆ ಟಿಕೆಟ್ ನೀಡಲಾಗಿದೆ.

ಆರು ಅಭ್ಯರ್ತಿಗಳ ಐದನೇ ಪಟ್ಟಿಯಲ್ಲಿ ಮೆಹ್ತಾ ಮತ್ತು ಶಂಕರಲಾಲ್ ಖರಡಿ ಅವರ ಹೆಸರನ್ನು ಕೈಬಿಡಲಾಗಿದೆ. ಪೈಲಟ್ ಮತ್ತು ಖಾನ್ ಇಬ್ಬರೂ ಸೋಮವಾರವೇ ನಾಮಪತ್ರ ಸಲ್ಲಿಸಲಿದ್ದಾರೆ.

ಡಿಸೆಂಬರ್ 07 ರಂದು ರಾಜಸ್ಥಾನದಲ್ಲಿ ಮತದಾನ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+