ರಾಜಸ್ಥಾನದ ರಸ್ತೆಯಲ್ಲಿ ಬಿದ್ದಿದ್ದ ಮತಪೆಟ್ಟಿಗೆಗಳು! ಇಬ್ಬರು ಅಧಿಕಾರಿಗಳ ಅಮಾನತು

ಜೈಪುರ, ಡಿಸೆಂಬರ್ 08: ಚುನಾವಣೆ ಮುಗಿದ ಕೆಲವೇ ಹೊತ್ತುಗಳಲ್ಲಿ ಎರಡು ಮತಪೆಟ್ಟಿಗೆಗಳು ರಸ್ತೆಯಲ್ಲಿ ಪತ್ತೆಯಾದ ಘಟನೆ ರಾಜಸ್ಥಾನದ ಕಿಶನ್ ಗಂಜ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.

ಬರಾನ್ ಜಿಲ್ಲು ಕಿಶಾನ್ ಗಂಜ್ ವಿಧಾನಸಭಾ ಕ್ಷೇತ್ರದ ಶಹಬಾದ್ ಪ್ರದೇಶದಲ್ಲಿ ಎರಡು ಮತಪೆಟ್ಟಿಗೆಗಳು ಬಿದ್ದಿತ್ತು. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿಗಳು, ಮತಪೆಟ್ಟಿಗೆಗಳನ್ನು ವಶಕ್ಕೆ ಪಡೆದು, ಈ ಮತಗಟ್ಟುಯ ಉಸ್ತುವಾರಿ ಹೊತ್ತಿದ್ದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.

ಸದ್ಯಕ್ಕೆ ಕಿಶನ್ ಗಂಜ್ ನ ಸ್ಟ್ರಾಂಗ್ ರೂಮಿಗೆ ಈ ಮತಪೆಟ್ಟಿಗೆಗಳನ್ನು ಸ್ಥಳಾಂತರಿಸಲಾಗಿದೆ.

Ballot unit found on road in Rajasthan, 2 poll officers suspended

ಇನ್ನೊಂದು ಬೆಳವಣಿಗೆಯಲ್ಲಿ ರಾಜಸ್ಥಾನದ ಪಾಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಮನೆಯಲ್ಲಿ ಇವಿಎಂ ಯಂತ್ರ ಪತ್ತೆಯಾದ ನಿಟ್ಟಿನಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ರಾಜಸ್ಥಾನದ 199(200) ಕ್ಷೇತ್ರಗಳಿಗೆ ಡಿ.7 ರಂದು ಮತದಾನ ನಡೆದಿದ್ದು, ಶೇ. 73.85 ರಷ್ಟು ಮತದಾನ ದಾಖಲಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದಿವೆ. ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದ್ದು, ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+