ಪ್ರಯೋಗ ಫಲಪ್ರದ: ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಗೆದ್ದ Anti-HIV ಡ್ರಗ್ಸ್!

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವಕ್ಕೆ ವಿಶ್ವವೇ ಬೆಚ್ಚಿಬಿದ್ದಿದೆ. ದಿನೇ ದಿನೇ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಶ್ವದಾದ್ಯಂತ 7988 ಮಂದಿಯನ್ನ ಡೆಡ್ಲಿ ಕೊರೊನಾ ವೈರಸ್ ಬಲಿ ಪಡೆದಿದೆ.

ಹೀಗಿರುವಾಗಲೇ ವೈದ್ಯಕೀಯ ಲೋಕದಿಂದ ಒಂದು ಅಚ್ಚರಿ ಸುದ್ದಿ ಹೊರಬಿದ್ದಿದೆ. ಕೊರೊನಾ ವೈರಸ್ ಅನ್ನು ಸದೆಬಡಿಯುವ ಶಕ್ತಿ Anti-HIV ಡ್ರಗ್ಸ್ ಹೊಂದಿದೆ ಎಂಬುದು ಪ್ರಯೋಗದ ಮೂಲಕ ಸಾಬೀತಾಗಿದೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಭಾರತದಲ್ಲಿರುವ ಇಟಲಿಯ ದಂಪತಿ ಮೇಲೆ Anti-HIV ಡ್ರಗ್ಸ್ ಪ್ರಯೋಗ ಮಾಡಲಾಗಿತ್ತು. ಈ ಪ್ರಯೋಗ ಇದೀಗ ಫಲಪ್ರದವಾಗಿದ್ದು, ಕೊರೊನಾ ವೈರಸ್ ಸೋಂಕಿನಿಂದ ಕಂಗೆಟ್ಟಿದ್ದ ಇಟಲಿಯ ದಂಪತಿ Anti-HIV ಡ್ರಗ್ಸ್ ನಿಂದಾಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಇಟಲಿ ದಂಪತಿ ಮೇಲೆ Anti-HIV ಡ್ರಗ್ಸ್ ಪ್ರಯೋಗ

ಇಟಲಿ ದಂಪತಿ ಮೇಲೆ Anti-HIV ಡ್ರಗ್ಸ್ ಪ್ರಯೋಗ

ಇಟಲಿಯಿಂದ ಭಾರತಕ್ಕೆ ಬಂದಿದ್ದ ಇಟಲಿಯ ದಂಪತಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಮಾರ್ಚ್ ಮೊದಲನೇ ವಾರದಲ್ಲಿ ದೃಢಪಟ್ಟಿತ್ತು. ಕೋವಿಡ್-19 ನಿಂದಾಗಿ 69 ವರ್ಷದ ಪತಿ ಮತ್ತು 70 ವರ್ಷ ವಯಸ್ಸಿನ ಪತ್ನಿಯ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಹೀಗಾಗಿ ಇಬ್ಬರ ಒಪ್ಪಿಗೆ ಪಡೆದು ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ ವೈದ್ಯರು ಇಬ್ಬರ ಮೇಲೆ Anti-HIV ಡ್ರಗ್ಸ್ ಪ್ರಯೋಗಿಸಿದ್ದರು.

ಕೊರೊನಾ ಕೊಂದ Anti-HIV ಡ್ರಗ್ಸ್

ಕೊರೊನಾ ಕೊಂದ Anti-HIV ಡ್ರಗ್ಸ್

Anti-HIV ಡ್ರಗ್ಸ್ ಪ್ರಯೋಗದಿಂದ ಅದೃಷ್ಟವಶಾತ್ ಇಟಲಿ ದಂಪತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. Anti-HIV ಡ್ರಗ್ಸ್ ಪ್ರಯೋಗದ ಬಳಿಕ ದಂಪತಿಯನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ರಿಪೋರ್ಟ್ ನಲ್ಲಿ ಕೋವಿಡ್-19 ನೆಗೆಟಿವ್ ಬಂದಿದೆ. ಅಲ್ಲಿಗೆ, ಕೊರೊನಾ ವೈರಸ್ ನ ಸದೆಬಡಿಯುವಲ್ಲಿ Anti-HIV ಡ್ರಗ್ಸ್ ಯಶಸ್ವಿಯಾಗಿದೆ.!

85 ವರ್ಷ ವಯಸ್ಸಿನ ವ್ಯಕ್ತಿ ಮೇಲೂ ಪ್ರಯೋಗ

85 ವರ್ಷ ವಯಸ್ಸಿನ ವ್ಯಕ್ತಿ ಮೇಲೂ ಪ್ರಯೋಗ

ಇಟಲಿಯ ದಂಪತಿಯ ಜೊತೆಗೆ ದುಬೈನಿಂದ ವಾಪಸ್ ಆಗಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 85 ವರ್ಷ ವಯಸ್ಸಿನ ವ್ಯಕ್ತಿಯ ಮೇಲೂ Anti-HIV ಡ್ರಗ್ಸ್ ಪ್ರಯೋಗಿಸಲಾಗಿದೆ. ಅಚ್ಚರಿ ಅಂದ್ರೆ, ಈ ವ್ಯಕ್ತಿಯೂ ಇದೀಗ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಮೂವರ ಆರೋಗ್ಯದಲ್ಲಿ ಚೇತರಿಕೆ

ಮೂವರ ಆರೋಗ್ಯದಲ್ಲಿ ಚೇತರಿಕೆ

''ಈ ಮೂರು ಕೇಸ್ ಗಳಲ್ಲಿ Anti-HIV ಡ್ರಗ್ಸ್ ಪ್ರಯೋಗವನ್ನು ಜಾಗರೂಕವಾಗಿ ನೆರವೇರಿಸಲಾಗಿದೆ. ಈ ಮೂವರು ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ'' ಎಂದು ರಾಜಸ್ಥಾನದ ಹೆಚ್ಚುವರಿ ಆರೋಗ್ಯ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈಗಲೇ ತೀರ್ಮಾನಕ್ಕೆ ಬರುವುದು ಕಷ್ಟ.!

ಈಗಲೇ ತೀರ್ಮಾನಕ್ಕೆ ಬರುವುದು ಕಷ್ಟ.!

ಪ್ರಯೋಗ ಯಶಸ್ವಿ ಆಗಿದ್ದರೂ, ಕೊರೊನಾ ವೈರಸ್ ಸೋಂಕನ್ನು ವಾಸಿ ಮಾಡಲು Anti-HIV ಡ್ರಗ್ಸ್ ಪರಿಣಾಮಕಾರಿ ಅಂತ ಈಗಲೇ ತೀರ್ಮಾನಿಸುವುದು ಕಷ್ಟ ಎನ್ನುತ್ತಾರೆ ತಜ್ಞರು. ''ಚೀನಾದಲ್ಲಿ 199 ಮಂದಿಯ ಮೇಲೆ ಪ್ರಯೋಗ ಕೈಗೊಳ್ಳಲಾಗಿದ್ದು, ಈ ವಿಷಯದ ಬಗ್ಗೆ ಹೆಚ್ಚು ಕ್ಲಾರಿಟಿ ಸಿಗುತ್ತದೆ'' ಅಂತ ಹೇಳುತ್ತಾರೆ ಐಸಿಎಂಆರ್ ನ ಎಪಿಡೆಮಿಯೋಲಜಿ ಮತ್ತು ಕಮ್ಯೂನಿಕಬಲ್ ಡಿಸೀಸ್ ನ ಮುಖ್ಯಸ್ಥ ಆರ್.ಆರ್.ಗಂಗಖೇದರ್

ಬೇಗ ಲಸಿಕೆ ಅಭಿವೃದ್ಧಿ ಕಷ್ಟ

ಬೇಗ ಲಸಿಕೆ ಅಭಿವೃದ್ಧಿ ಕಷ್ಟ

ಕೊರೊನಾ ವೈರಸ್ ಲಸಿಕೆಯನ್ನು 12 ತಿಂಗಳ ಒಳಗೆ ಅಭಿವೃದ್ಧಿ ಪಡಿಸುವ ಸಾಧ್ಯತೆ ಕಮ್ಮಿ ಎಂದು ತಜ್ಞರು ಹೇಳಿರುವುದರಿಂದ, Lopinavir ಮತ್ತು Ritonavir ಒಳಗೊಂಡ ಸೆಕೆಂಡ್ ಲೈನ್ HIV ಡ್ರಗ್ಸ್ ಪ್ರಯೋಗ ಮಾಡಲು ಸಂಶೋಧಕರಿಗೆ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಸಮ್ಮತಿ ನೀಡಿತ್ತು.

ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ

ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ

''ಕೊರೊನಾ ವೈರಸ್ ಸೋಂಕು ಎಂಬ ಸಾಂಕ್ರಾಮಿಕ ಪಿಡುಗಿಗೆ ಭಾರತದಲ್ಲಿ Anti-HIV ಡ್ರಗ್ಸ್ ಪ್ರಯೋಗ ಮಾಡಿರುವುದು ಇದೇ ಮೊದಲು'' ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಪ್ರಯೋಗ ಫಲಪ್ರದವಾಗಿರುವುದರಿಂದ ಆಸ್ಪತ್ರೆಯ ವೈದ್ಯರು, ಸಂಶೋಧಕರು ಮತ್ತು ಸಿಬ್ಬಂದಿಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಭಿನಂದನೆ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+