ಕೋವಿಡ್-19 ಟೆಸ್ಟ್ ರಿಪೋರ್ಟ್: ನಿಟ್ಟುಸಿರು ಬಿಟ್ಟ ಬಿಜೆಪಿ ಮುಖಂಡರ ಕುಟುಂಬ.!
ಜೈಪುರ್, ಜೂನ್ 5: ರಾಜಸ್ಥಾನದ ಮಾಜಿ ಬಿಜೆಪಿ ಅಧ್ಯಕ್ಷ ಭನ್ವರ್ ಲಾಲ್ ಶರ್ಮಾ ಮೇ 29 ರಂದು ಜೈಪುರದಲ್ಲಿ ಕೊನೆಯುಸಿರೆಳೆದಿದ್ದರು. ಬಿಜೆಪಿ ಮುಖಂಡರಾದ ಸತೀಶ್ ಪೂನಿಯಾ, ಮೋಹನ್ ಲಾಲ್ ಗುಪ್ತಾ ಸೇರಿದಂತೆ ಹಲವು ಗಣ್ಯರು ಭನ್ವರ್ ಲಾಲ್ ಶರ್ಮಾಗೆ ಅಂತಿಮ ನಮನ ಸಲ್ಲಿಸಿದ್ದರು.
Recommended Video
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಗಣ್ಯರೂ ಸೇರಿದಂತೆ ಭನ್ವರ್ ಲಾಲ್ ಶರ್ಮಾ ಕುಟುಂಬದ ಸದಸ್ಯರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಗುರುವಾರ ಟೆಸ್ಟ್ ರಿಪೋರ್ಟ್ ಲಭ್ಯವಾಗಿದ್ದು, ಭನ್ವರ್ ಲಾಲ್ ಶರ್ಮಾ ಕುಟುಂಬದ 18 ಮಂದಿಗೆ ಕೋವಿಡ್-19 'ನೆಗೆಟಿವ್' ದೃಢಪಟ್ಟಿದೆ.
ಕೊರೊನಾ ವೈರಸ್ ಸೋಂಕಿಲ್ಲದಿರುವುದು ದೃಢಪಟ್ಟ ಬಳಿಕ ಭನ್ವರ್ ಲಾಲ್ ಶರ್ಮಾ ಅವರ ಐವರು ಮಕ್ಕಳು ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೇ, ಸತೀಶ್ ಪೂನಿಯಾ ಅವರಿಗೂ ಕೋವಿಡ್-19 ನೆಗೆಟಿವ್ ಕಂಡುಬಂದಿದೆ.

ಅಂದ್ಹಾಗೆ, ರಾಜಸ್ಥಾನದಲ್ಲಿ ಸದ್ಯ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 9,862 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೂ 7,104 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 213 ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ ಸದ್ಯ 2545 ಸಕ್ರಿಯ ಸೋಂಕಿತರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications