Ukraine War: ಕಾಪಾಡಿ... ಕಾಪಾಡಿ... ಅಂತಾ ಬಾಯಿ ಬಡಿದುಕೊಳ್ಳುತ್ತಿದೆ ಉಕ್ರೇನ್!

ರಷ್ಯಾ ತನ್ನ ಸೇನೆಯಲ್ಲಿರುವ ಎಲ್ಲಾ ಬಲಿಷ್ಠ ಅಸ್ತ್ರಗಳನ್ನು ಇದೀಗ ಉಕ್ರೇನ್ ವಿರುದ್ಧ ಬಳಸುತ್ತಿದ್ದು, ಭಾರಿ ದೊಡ್ಡ ತಲ್ಲಣ ಸೃಷ್ಟಿಯಾಗಿದೆ. 2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ಈ ಯುದ್ಧ ಇನ್ನೇನು 4 ವರ್ಷ ಪೂರೈಸಲಿದೆ. ಹೀಗಾಗಿ ಎಲ್ಲಾ ಕಡೆಯೂ ಭಾರಿ ದೊಡ್ಡ ಸಂಚಲನ ಸೃಷ್ಟಿಯಾಗಿದ್ದು, ಈ ಯುದ್ಧ ನಿಲ್ಲಿಸಬೇಕು ಎಂಬ ಹೋರಾಟ ಜೋರಾಗಿದೆ. ಆದರೂ ರಷ್ಯಾ ಮಾತ್ರ ತನ್ನ ಹಠ ಬಿಡದೆ & ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಿದೆ. ಇಂತಹ ಸಮಯದಲ್ಲೇ, ಕಾಪಾಡಿ... ಕಾಪಾಡಿ... ಅಂತಾ ಬಾಯಿ ಬಡಿದುಕೊಳ್ಳುತ್ತಿದೆ ಉಕ್ರೇನ್!

ರಷ್ಯಾ ಜೊತೆಗೆ ನೇರವಾಗಿ ಮಾತುಕತೆ ಮಾಡಿ ಸಂಧಾನ ಮಾಡಿಕೊಳ್ಳುವ ಬದಲು ಉಕ್ರೇನ್ ಅಧ್ಯಕ್ಷ ಕಿತಾಪತಿ ಮಾಡುತ್ತಿದ್ದಾರೆ ಅನ್ನೋ ಆರೋಪ ಇದೆ. ಹೀಗಾಗಿಯೇ ಉಕ್ರೇನ್ ವಿರುದ್ಧ ರಷ್ಯಾ ಮತ್ತಷ್ಟು ಘೋರವಾಗಿ ದಾಳಿ ಮಾಡುತ್ತಿದ್ದು, ಈ ದಾಳಿಯ ಪರಿಣಾಮ ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಈ ರೀತಿಯ ದಾಳಿಗಳಿಂದ ಈಗಾಗಲೇ ಲಕ್ಷಾಂತರ ಜನ ಜೀವ ಕಳೆದುಕೊಂಡು, ಕೋಟ್ಯಂತರ ಜನ ಬೀದಿಗೆ ಬಿದ್ದಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಹೀಗಿದ್ದಾಗಲೇ ಮತ್ತೊಂದು ಸುತ್ತಿನಲ್ಲಿ ರಷ್ಯಾದ ಸೇನೆ ಭರ್ಜರಿಯಾಗಿ ದಾಳಿ ಮಾಡಿ ಉಕ್ರೇನ್ ನೆಲವನ್ನೇ ನಡುಗಿಸಿದೆ.

Zelenskyy Urges European Air Defence System Amid Russian Strikes

ಭೀಕರ ದಾಳಿಗೆ ನಡುಗಿದ ಉಕ್ರೇನ್ ನೆಲ!

ಯೆಸ್, ರಷ್ಯಾ ಮಿಲಿಟರಿ ಈಗ ದಕ್ಷಿಣ ಉಕ್ರೇನ್ ನಗರ ಜಪೋರಿಝಿಯಾ ಮೇಲೆ ರಾತ್ರಿ ಪೂರ್ತಿ ರಾಕೆಟ್ ದಾಳಿ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ದಾಳಿಯ ಪರಿಣಾಮ ಇಡೀ ಉಕ್ರೇನ್ ನಲುಗಿಬಿಟ್ಟಿದೆ. ಜೊತೆಗೆ ಇಬ್ಬರು ಮಕ್ಕಳು ಸೇರಿದಂತೆ 13 ಜನರು ಗಾಯಗೊಂಡಿದ್ದಾರೆ ಎಂಬ ಆರೋಪ ಕೂಡ ಮಾಡಿದೆ ಉಕ್ರೇನ್. ಹೀಗೆ ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಹಿನ್ನೆಲೆ ತಕ್ಷಣ ಯುರೋಪ್ ದೇಶಗಳು ಒಂದಾಗಿ & ಉಕ್ರೇನ್‌ಗೆ ವಾಯು ರಕ್ಷಣೆ ವ್ಯವಸ್ಥೆಯನ್ನ ಕೊಡಬೇಕೆಂದು ಒತ್ತಾಯಿಸಿದ್ದಾರೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು. ಆದರೆ ಈಗಿನ ಸ್ಥಿತಿಯಲ್ಲಿ ಸ್ವತಃ ಯುರೋಪ್ ದೇಶಗಳೇ ಕಷ್ಟದಲ್ಲಿ ಇವೆ, ಹೀಗಾಗಿಯೇ ಈ ಸಹಾಯ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

ಅಮೆರಿಕ & ನ್ಯಾಟೋ ಎಂಟ್ರಿ ಗ್ಯಾರಂಟಿ?

ಕಳೆದ ಕೆಲ ದಿನಗಳಿಂದ ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡದಾಗಿ ಚರ್ಚೆಯು ನಡೆಯುತ್ತಿದೆ. ಯಾಕಂದ್ರೆ ಪದೇ ಪದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಪರವಾಗಿ ತಮ್ಮ ಧ್ವನಿ ಎತ್ತುತ್ತಿದ್ದಾರೆ. ಹಾಗೇ ರಷ್ಯಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ ಡೊನಾಲ್ಡ್ ಟ್ರಂಪ್. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಕೂಡ ಗರಂ ಆಗಿದ್ದಾರೆ. ಮತ್ತೊಂದು ಕಡೆ ಯುದ್ಧಕ್ಕೆ ಬ್ರೇಕ್ ಹಾಕಲು ಚೀನಾ ಮುಂದಾಗಬೇಕು ಅನ್ನೋ ಡಿಮ್ಯಾಂಡ್ ಕೂಡ ಮುಂದೆ ಇಟ್ಟಿದ್ದಾರೆ. ಈ ಸಮಯದಲ್ಲಿ ಉಕ್ರೇನ್ ಪರ ನೇರವಾಗಿ ಅಮೆರಿಕ & ನ್ಯಾಟೋ ಪಡೆಗಳು ನುಗ್ಗುವ ಸಾಧ್ಯತೆ ಇದೆಯಾ? ಅನ್ನೋ ಚರ್ಚೆ ಕೂಡ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+