Ukraine War: ರಷ್ಯಾ ಅಡ್ಡೆಗೆ ನುಗ್ಗಿದ ಉಕ್ರೇನ್ ಮಿಲಿಟರಿ, ಮುಂದೇನು ಕಥೆ?

ಉಕ್ರೇನ್ ಹಣೆಬರಹ ಚನ್ನಾಗಿದೆ ಅಂತಾ ಕಾಣುತ್ತೆ, ಯಾಕಂದ್ರೆ ಇಷ್ಟು ದಿನಗಳ ಕಾಲ ಬರೀ ರಷ್ಯಾ ಕೈಯಲ್ಲಿ ಸರಿಯಾಗಿ ಏಟು ತಿಂದು ಕಣ್ಣೀರು ಹಾಕುತ್ತಿದ್ದ ಉಕ್ರೇನ್ ಸೇನೆ ಈಗ ಖಡಕ್ ಆಗಿ ತಿರುಗಿಬಿದ್ದಿದೆ. ಖುದ್ದಾಗಿ ರಷ್ಯಾ ನೆಲಕ್ಕೆ ಎಂಟ್ರಿ ಕೊಟ್ಟಿರುವ ಉಕ್ರೇನ್ ಮಿಲಿಟರಿ, ಹೊಸ ಆಘಾತ ನೀಡಿದೆ. ರಷ್ಯಾ ಗಡಿ ಭಾಗದಲ್ಲಿ ದಿಢೀರ್ ಬಿಗುವಿನ ವಾತಾವರಣ ನಿರ್ಮಾಣವಾಗಿ, ಖುದ್ದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚಿಂತೆ ಮಾಡುವಂತೆ ಆಗಿದೆ.

ರಷ್ಯಾ & ಉಕ್ರೇನ್ ನಡುವೆ ವಾರ್ ನಿಲ್ಲಿಸಿ, ಶಾಂತಿ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆಯು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಕಳೆದ 3ಕ್ಕೂ ಹೆಚ್ಚು ವರ್ಷಗಳಿಂದ ಸತತವಾಗಿ ಬಡಿದಾಡುತ್ತಿರುವ ರಷ್ಯಾ & ಉಕ್ರೇನ್ ಸೇನೆಗಳು ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿವೆ. ಮತ್ತೊಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿ ಪ್ರಯತ್ನ ಮಾಡಿ ಸೋತು ಹೋಗಿದ್ದಾರೆ. ಈ ವಿಚಾರದಲ್ಲಿ ರಷ್ಯಾ ತನ್ನ ನಿಲುವು ಬದಲಿಸಿಲ್ಲ, ಹೀಗಾಗಿ ಉಕ್ರೇನ್ ಕೂಡ ಸೋತು ಶರಣಾಗುವ ಲಕ್ಷಣ ಕಾಣಿಸುತ್ತಿಲ್ಲ. ಇಬ್ಬರ ಜಗಳ ಹೀಗೆ ಮುಂದುವರಿದಿದೆ. ಇಂತಹ ಸಮಯದಲ್ಲೇ ಉಕ್ರೇನ್ ಸೇನೆ ದಿಢೀರ್ ರಷ್ಯಾ ನೆಲಕ್ಕೆ ನುಗ್ಗಿದೆ.

Zelensky Confirms Ukrainian Troops Activity in Belgorod Region

ರಷ್ಯಾ ಸೇನೆ ಎಲ್ಲಿ ಹೋಯ್ತು?

ಉಕ್ರೇನ್ ವಿರುದ್ಧ ಯುದ್ಧ ಸಾರಿದ ನಂತರ ರಷ್ಯಾ ಸೇನೆ ಸಾಕಷ್ಟು ದೊಡ್ಡ ಮಟ್ಟದ ನಷ್ಟ ಅನುಭವಿಸಿದೆ. ಅದರಲ್ಲೂ ಲಕ್ಷಾಂತರ ಸೈನಿಕರನ್ನು ರಷ್ಯಾ ಕಳೆದುಕೊಂಡಿದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ, ಆದರೆ ಈ ಬಗ್ಗೆ ರಷ್ಯಾ ಅಧಿಕೃತ ಹೇಳಿಕೆ ನೀಡಿಲ್ಲ. ಇಂಥ ಸಂದಿಗ್ಧ ಸಮಯದಲ್ಲಿ ಹಂಗೋ ಹಿಂಗೋ ಪ್ಲಾನ್ ಮಾಡಿ ಉಕ್ರೇನ್ ಸೇನೆ ನೇರ ರಷ್ಯಾ ಗಡಿಯ ಒಳಗೆ ನುಸುಳಿದೆ. ಒಂದು ಅಂದಾಜಿನ ಪ್ರಕಾರ ಭಾರಿ ದೊಡ್ಡ ಮಟ್ಟದಲ್ಲೇ ಉಕ್ರೇನ್ ಸೇನೆ ಇದೀಗ ರಷ್ಯಾ ಒಳಗೆ ನುಗ್ಗಿದ್ದು, ಕಾರ್ಯಾಚರಣೆಯನ್ನ ನಡೆಸುತ್ತಿದೆಯಂತೆ. ಈ ಬಗ್ಗೆ ಖುದ್ದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+