Ukraine War: ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರವಾಗಿ ಚೀನಾ ಸೈನಿಕರ ಹೋರಾಟ?

ರಷ್ಯಾ & ಉಕ್ರೇನ್ ಯುದ್ಧದಲ್ಲಿ ದಿನಕ್ಕೊಂದು ಕಾಂಟ್ರವರ್ಸಿ ಕ್ರಿಯೇಟ್ ಆಗುತ್ತಿದ್ದು, ಇಬ್ಬರ ಜಗಳ ಜಗತ್ತಿನ ನೆಮ್ಮದಿ ಹಾಳು ಮಾಡುತ್ತಿರುವ ಆರೋಪ ಕೇಳಿ ಬರುತ್ತಲೇ ಇದೆ. ಮತ್ತೊಂದು ಕಡೆ ಲಕ್ಷಾಂತರ ಜನರ ಜೀವ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬಲಿಯಾಗಿದ್ದು, ಆಕ್ರೋಶ ಕೂಡ ಮೊಳಗಿದೆ. ಇಷ್ಟೆಲ್ಲದರ ನಡುವೆ ಉತ್ತರ ಕೊರಿಯಾ ಕೂಡ ರಷ್ಯಾಗೆ ಸಾಥ್ ನೀಡಿ ಯುದ್ಧಕ್ಕೆ ನುಗ್ಗಿದ್ದು, ಉತ್ತರ ಕೊರಿಯಾದ ಸೈನಿಕರು ರಷ್ಯಾ ಪರವಾಗಿ ಹೋರಾಡುತ್ತಿದ್ದಾರೆ. ಇದೆಲ್ಲವೂ ಸಾಲದು ಎನ್ನುವಂತೆ ಇದೀಗ ಚೀನಾ ಕೂಡ ಯುದ್ಧಕ್ಕೆ ಎಂಟ್ರಿ ಕೊಟ್ಟಿದೆಯಂತೆ! ಏನಿದು ಭಾರಿ ಗಂಭೀರ ಆರೋಪ?

3 ವರ್ಷಗಳಿಂದ ರಷ್ಯಾ & ಉಕ್ರೇನ್ ನಡುವೆ ಗಲಾಟೆ ನಡೆಯುತ್ತಿದ್ದರೆ, ಇನ್ನೊಂದ್ಕಡೆ ಉತ್ತರ ಕೊರಿಯಾ ಎಂಟ್ರಿ ಕೊಟ್ಟಿತ್ತು. ಉತ್ತರ ಕೊರಿಯಾ ವರ್ತನೆ ಭಾರಿ ಕುತೂಹಲ ಕೂಡ ಕೆರಳಿಸಿದ್ದು & ಜಾಗತಿಕ ಮಟ್ಟದಲ್ಲೂ ಹೊಸ ಸಂಚಲನ ಸೃಷ್ಟಿ ಮಾಡಿತ್ತು. ಅದ್ರಲ್ಲೂ ರಷ್ಯಾ ಸಂಕಷ್ಟದಲ್ಲಿ ಸಿಲುಕಿ ನರಳುವ ಸಮಯದಲ್ಲೇ ದಿಢೀರ್ ಉತ್ತರ ಕೊರಿಯಾ ಎಂಟ್ರಿ ಕೊಟ್ಟು ಗಮನವನ್ನ ಕೂಡ ಸೆಳೆದಿತ್ತು. ಹೀಗಿದ್ದಾಗಲೇ ಚೀನಾ ಕೂಡ ರಷ್ಯಾ ಪರ ಇದೀಗ ಅಖಾಡ ಪ್ರವೇಶ ಮಾಡಿದ್ದು, ಮತ್ತೊಮ್ಮೆ ಜಗತ್ತಿನಲ್ಲಿ ತಲ್ಲಣ ಸೃಷ್ಟಿ ಮಾಡಿದೆ.

Zelensky Accuses Russia of Involving China in Ukraine Conflict

ವೊಲೊಡಿಮಿರ್ ಝೆಲೆನ್ಸ್ಕಿ ಗಂಭೀರ ಆರೋಪ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖುದ್ದು ಈ ಆರೋಪವನ್ನು ಮಾಡಿದ್ದು, ಸದ್ಯ ರಷ್ಯಾ ಪರ ಚೀನಾ ಸೈನಿಕರು ಕೂಡ ಹೋರಾಟ ನಡೆಸುತ್ತಿದ್ದಾರೆ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೆ ನೀಡಿರುವುದು ಸಂಚಲನ ಸೃಷ್ಟಿ ಮಾಡಿದೆ. ಸುಮಾರು 150ಕ್ಕೂ ಹೆಚ್ಚು ಚೀನಿ ಸೈನಿಕರನ್ನು ಇದೀಗ ಉಕ್ರೇನ್ ಬಂಧಿಸಿದೆ ಎಂದು ಝೆಲೆನ್ಸ್ಕಿ ಆರೋಪ ಮಾಡಿದ್ದಾರೆ. ಆದರೆ ಈ ಬಗ್ಗೆ ರಷ್ಯಾ ಕಡೆಯಿಂದ ಈವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಭಾರಿ ಕುತೂಹಲ ಕೆರಳಿಸಿದೆ ಈ ಬಡಿದಾಟ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+