ಯಪ್ಪಾ! ಇದು ಯಾವ ರೀತಿ ವಧುದಕ್ಷಿಣೆ
ಲಂಡನ್, ಡಿ.20: ವರದಕ್ಷಿಣೆ ಅಥವಾ ವಧುದಕ್ಷಿಣೆ ರೂಪದಲ್ಲಿ ನಗ, ನಾಣ್ಯ, ವಸ್ತ್ರ, ವಜ್ರ ವೈಢೂರ್ಯ, ಮನೆ, ಕಾರು, ಜಮೀನು, ಉದ್ಯೋಗ ಹೀಗೆ ಪಡೆಯುವುದು ಅಥವಾ ಕೊಡುವುದನ್ನು ಕೇಳಿರುತ್ತೀರಿ ಅಥವಾ ಕಂಡಿರುತ್ತೀರಿ ಅದರೆ, ಇಲ್ಲೊಬ್ಬ ಮಾವ ತನ್ನ ಮಗಳನ್ನು ಮದುವೆಯಾಗಬೇಕಾದರೆ ಇಷ್ಟು ಜನರ ಮೆಚ್ಚುಗೆ ಗಳಿಸಿಕೊಂಡು ಬಾ ಎಂದು ಭಾವಿ ಅಳಿಯನಿಗೆ ಷರತ್ತು ವಿಧಿಸಿದ ಪ್ರಸಂಗ ನಡೆದಿದೆ.
ನನ್ನ ಮಗಳನ್ನು ನೀನು ಮದುವೆಯಾಗಬೇಕಾದರೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ 1 ಮಿಲಿಯನ್ Likes ಗಳಿಸಿಕೊಂಡು ಬಾ ಎಂದು ಯೆಮೆನ್ ದೇಶದ ಕನ್ಯಾ ಪಿತೃವೊಬ್ಬ ಷರತ್ತುವಿಧಿಸಿದ್ದಾನೆ.
ಟಾಯಜ್ ನಗರದ ಕವಿ ಸಲೇಂ ಅಯಾಶ್ ಎಂಬುವರು ತಮ್ಮ ಭಾವಿ ಅಳಿಯನಿಂದ ಮದುವೆಗೂ ಮುನ್ನ ಈ ರೀತಿ 'ಪೇಮಂಟ್' ಬಯಸಿದ್ದಾರೆ ಎಂದು ಮೆಟ್ರೊ.ಕೊ.ಯುಕೆ ವರದಿ ಮಾಡಿದೆ. ಯೆಮೆನ್ ನಲ್ಲಿ ಯಾರೂ ಈ ರೀತಿ ವಧುದಕ್ಷಿಣೆ ನೀಡಲು ಮುಂದಾಗದ ಕಾರಣ ಈ ರೀತಿ ಆಫರ್ ನೀಡಿದ್ದಾರೆ.

ಪ್ರತ್ಯೇಕ ವೆಬ್ ಪುಟ ರಚಿಸಿ ಈ ರೀತಿ ಆಫರ್ ಇದೆ ಎಂದು ಮಾವ ತನ್ನ ಭಾವಿ ಆಳಿಯಂದಿರುಗಳಿಗೆ ಆಹ್ವಾನ ನೀಡಿದ್ದಾರೆ. ಈ ಪುಟ ಈಗಾಗಲೇ 30 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಅಯಾಶ್ ಅವರು ಇದರಲ್ಲಿ ಷರತ್ತಿನ ಬಗ್ಗೆ ವಿವರಿಸಿದ್ದಾರೆ.
ತನ್ನ ಮಗಳನ್ನು ಮದುವೆಯಾಗ ಬಯಸುವ ವರ 1 ಮಿಲಿಯನ್ ಲೈಕ್ಸ್ ಪಡೆಯಲೇ ಬೇಕು. ಬೇಕಾದರೆ ಒಂದು ತಿಂಗಳು, ಒಂದು ವರ್ಷ ಅಥವಾ ಎರಡು ವರ್ಷ ಬೇಕಾದರೂ ತೆಗೆದುಕೊಳ್ಳಬಹುದು. ನಿಗದಿತ ಸಂಖ್ಯೆ ಮುಟ್ಟಿದ ಮೇಲೆ ಮದುವೆ ಬಗ್ಗೆ ಮಾತುಕತೆ ನಡೆಸಬಹುದು ಎಂದು ಕವಿವರ್ಯ ಹೇಳಿದ್ದಾರೆ.












Click it and Unblock the Notifications