ಪ್ರಧಾನಿ ಮೋದಿಗೆ ಚೀನಾ ಅಧ್ಯಕ್ಷರಿಂದ ಹೀಗೊಂದು ಸರ್ಪ್ರೈಸ್ !

ವುಹಾನ್, ಏಪ್ರಿಲ್ 28: ಎರಡು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರಮೋದಿಯವರಿಗೆ ಇಂದು ಅಚ್ಚರಿ ಕಾದಿತ್ತು!

ಚೀನಾದ ವುಹಾನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಏರ್ಪಡಿಸಲಾಗಿದ್ದ ಖಾಸಗಿ ಔತಣ ಕೂಟದಲ್ಲಿ ಸಿದ್ಧಪಡಿಸಲಾಗಿದ್ದ ಮೆನು ಕಾರ್ಡ್ ಕೇಸರಿ, ಬಿಳಿ, ಹಸಿರು ಬಣ್ಣಗಳೊಂದಿಗೆ ತಿರಂಗವನ್ನು ಪ್ರತಿನಿಧಿಸುತ್ತಿತ್ತು. ನರೇಂದ್ರ ಮೋದಿಯವರಿಗೆ ಸರ್ಪ್ರೈಸ್ ನೀಡುವುದಕ್ಕೆಂದೇ ಮೆನುವನ್ನು ಈ ರೀತಿ ಸಿದ್ಧಪಡಿಸಲಾಗಿತ್ತು.

ಅಷ್ಟೇ ಅಲ್ಲ, ಮೆನುವಿನ ಮುಖಪುಟದಲ್ಲಿ ಸುಂದರವಾದ ನವಿಲಿನ ಚಿತ್ರವನ್ನು ಬರೆಯಲಾಗಿತ್ತು. ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲನ್ನು ಅಶೋಕ ಚಕ್ರದ ನೀಲಿ ಬಣ್ಣದಲ್ಲಿ ಚಿತ್ರಿಸಲಾಗಿದ್ದು ವಿಶೇಷ.

Wuhan menu card designed with Indian touch for PM Modi

ಈ ಮೆನು ಕಾರ್ಡ್ ರಚಿಸಲು ಚೀನಾ ಅಧ್ಯಕ್ಷ ಗ್ಸೈ ಜಿನ್ಪಿಂಗ್ ಅವರೇ ಖುದ್ದು ಸಲಹೆಗಳನ್ನು ನೀಡಿ, ಆಸ್ಥೆ ವಹಿಸಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡು ದಿನಗಳ ಕಾಲ ಚೀನಾಕ್ಕೆ ಅನೌಪಚಾರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಮದ್ರ ಮೋದಿ, ಅಧ್ಯಕ್ಷರೊಂದಿಗೆ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ಇದು ಔಪಚಾರಿಕ ಭೇಟಿಯಲ್ಲದ ಕಾರಣ ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ನೀಡಲಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+