ವುಹಾನ್ ನಿವಾಸಿಗಳು ಬಾಯ್ಬಿಟ್ಟ ಭಯಾನಕ ಸತ್ಯ: ಅಸಲಿ ಸಾವಿನ ಪ್ರಮಾಣ ಎಷ್ಟು?

ಬೀಜಿಂಗ್, ಮಾರ್ಚ್ 31: ಮಾರಣಾಂತಿಕ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರದಲ್ಲಿ. ಆದ್ರೀಗ, ಇಟಲಿ, ಸ್ಪೇನ್ ಮತ್ತು ಅಮೇರಿಕಾದಲ್ಲಿ ಹೆಚ್ಚು ಜನರನ್ನು ಕೊರೊನಾ ವೈರಸ್ ಬಲಿ ಪಡೆಯುತ್ತಿದೆ.

ಚೀನಾದಲ್ಲಿ ಇಲ್ಲಿಯವರೆಗೂ ಕೋವಿಡ್-19 ನಿಂದಾಗಿ 3305 ಮೃತಪಟ್ಟಿದ್ದರೆ, ಸ್ಪೇನ್ ನಲ್ಲಿ 7716, ಇಟಲಿಯಲ್ಲಿ 11,591 ಮತ್ತು ಅಮೇರಿಕಾದಲ್ಲಿ 3165 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಕೊರೊನಾ ವೈರಸ್ ನ ಜನ್ಮಸ್ಥಳ ವುಹಾನ್ ನಲ್ಲಿ ಸುಮಾರು 2500 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಚೀನಾ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.

ಆದರೆ, 'ಸಾವಿನ ಸಂಖ್ಯೆ' ಬಗ್ಗೆ ವುಹಾನ್ ನಿವಾಸಿಗಳು ಹೇಳುವುದೇ ಬೇರೆ.! ಸರ್ಕಾರ ನೀಡಿರುವ ಅಧಿಕೃತ 'ಸಾವಿನ ಪ್ರಮಾಣ'ವನ್ನು ತಳ್ಳಿ ಹಾಕುವ ವುಹಾನ್ ನಿವಾಸಿಗಳು ಬೆಚ್ಚಿಬೀಳಿಸುವ ಭಯಾನಕ ಸತ್ಯವೊಂದನ್ನು ಬಾಯ್ಬಿಟಿದ್ದಾರೆ. ಅಲ್ಲಿನ ನಿವಾಸಿಗಳ ಪ್ರಕಾರ, ವುಹಾನ್ ನಗರವೊಂದರಲ್ಲೇ 42 ಸಾವಿರ ಮಂದಿ ಕೋವಿಡ್-19 ನಿಂದಾಗಿ ಜೀವ ಬಿಟ್ಟಿದ್ದಾರೆ.!

ಸಾವಿನ ಸಂಖ್ಯೆ ಹೆಚ್ಚಿದೆ.!

ಸಾವಿನ ಸಂಖ್ಯೆ ಹೆಚ್ಚಿದೆ.!

ವುಹಾನ್ ನಗರದಲ್ಲಿ ಸುಮಾರು 2500 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳಬಹುದು. ಆದ್ರೆ, ವುಹಾನ್ ನಿವಾಸಿಗಳ ಪ್ರಕಾರ ಅಲ್ಲಿ ಸಾವಿಗೀಡಾವರ ಸಂಖ್ಯೆ ವರದಿಯಾಗಿದ್ದಕ್ಕಿಂತ ಹೆಚ್ಚು.

ಪ್ರತಿ ದಿನ 500 ಭಸ್ಮಕರಂಡ ವಿತರಣೆ

ಪ್ರತಿ ದಿನ 500 ಭಸ್ಮಕರಂಡ ವಿತರಣೆ

ವುಹಾನ್ ನಗರದಲ್ಲಿ 7 ಪ್ರತ್ಯೇಕ ಸ್ಮಶಾನಗಳಿದ್ದು, ಪ್ರತಿ ಸ್ಮಶಾನದಿಂದ ಪ್ರತಿ ದಿನ 500 ಭಸ್ಮಕರಂಡಗಳನ್ನು ಮೃತ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿದೆ. ಅಂದ್ಮೇಲೆ, ದಿನವೊಂದಕ್ಕೆ 3500 ಮೃತರ ಚಿತಾಭಸ್ಮ ವಿತರಿಸಿದ ಹಾಗೆ ಲೆಕ್ಕ. ಇನ್ನು ಹಾಂಕಾವ್, ವುಚಾಂಗ್ ಮತ್ತು ಹಾನ್ಯಾಂಗ್ ನಲ್ಲಿರುವ ನಿವಾಸಿಗಳಿಗೆ ಏಪ್ರಿಲ್ 5 ರ ಒಳಗೆ ಚಿತಾಭಸ್ಮವನ್ನು ನೀಡುವುದಾಗಿ ತಿಳಿಸಲಾಗಿದೆ. ಅಲ್ಲಿಗೆ, ಲೆಕ್ಕಾಚಾರದ ಪ್ರಕಾರ 12 ದಿನಗಳಲ್ಲಿ 42,000 ಮೃತರ ಬೂದಿಗಡಿಗೆಯನ್ನ ಹಸ್ತಾಂತರಿಸಿದ ಹಾಗೆ ಆಗುತ್ತದೆ. ಈ ಲೆಕ್ಕಾಚಾರ ಇದೀಗ ವುಹಾನ್ ನಿವಾಸಿಗಳಲ್ಲಿ ಬೆಚ್ಚಿಬೀಳಿಸಿದೆ.

ನಿವಾಸಿಗಳು ಬಾಯ್ಬಿಟ್ಟ ಭಯಾನಕ ಸತ್ಯ

ನಿವಾಸಿಗಳು ಬಾಯ್ಬಿಟ್ಟ ಭಯಾನಕ ಸತ್ಯ

''ವುಹಾನ್ ನಲ್ಲಿ ಕಡಿಮೆ ಜನ ಸತ್ತಿದ್ದಾರೆ ಅಂತ ಹೇಳಲು ಸಾಧ್ಯವೇ ಇಲ್ಲ. ಯಾಕಂದ್ರೆ, ದಹನಕಾರಕಗಳು ಬಿಡುವಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ'' ಎಂದು ಓರ್ವ ವುಹಾನ್ ನಿವಾಸಿ ಹೇಳಿದರೆ, ಮತ್ತೊಬ್ಬ ವುಹಾನ್ ನಿವಾಸಿ ''ಒಂದು ತಿಂಗಳಿನಲ್ಲಿ ಏನಿಲ್ಲ ಅಂದರೂ 28 ಸಾವಿರ ಮಂದಿಯ ಅಂತ್ಯ ಸಂಸ್ಕಾರ ನಡೆದಿದೆ'' ಎಂಬ ಕಠೋರ ಸತ್ಯವನ್ನು ಬಾಯಿಬಿಟ್ಟಿದ್ದಾರೆ.

ಮನೆಯಲ್ಲೇ ಸಾವು

ಮನೆಯಲ್ಲೇ ಸಾವು

ಮತ್ತೊಂದು ಕಳವಳಕಾರಿ ವಿಚಾರ ಏನಂದರೆ, ಕೋವಿಡ್-19 ಗಾಗಿ ಚಿಕಿತ್ಸೆ ಪಡೆಯದೆ ಎಷ್ಟೋ ಜನ ಮನೆಯಲ್ಲೇ ತೀರಿಕೊಂಡಿದ್ದಾರಂತೆ. ಅಂಥವರನ್ನು ಸರ್ಕಾರ 'ಅಧಿಕೃತ ಲೆಕ್ಕಾಚಾರ'ದಲ್ಲಿ ಪರಿಗಣಿಸುವುದಿಲ್ಲ.

ಲೆಕ್ಕಾಚಾರದಲ್ಲಿ ಸರ್ಕಾರದ ಕಣ್ಣಾಮುಚ್ಚಾಲೆ

ಲೆಕ್ಕಾಚಾರದಲ್ಲಿ ಸರ್ಕಾರದ ಕಣ್ಣಾಮುಚ್ಚಾಲೆ

''ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು ದಾಖಲಾಗುತ್ತಿಲ್ಲ. ವುಹಾನ್ ನಗರದಲ್ಲಿ ಕೋವಿಡ್-19 ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ'' ಎಂದು ಚೀನಾ ಸರ್ಕಾರ ಹೇಳಿಕೊಂಡಿದೆ. ಆದ್ರೆ, ಕೋವಿಡ್-19 ಪಾಸಿಟೀವ್ ಇದ್ದರೂ ರೋಗ ಲಕ್ಷಣ ಇಲ್ಲದವರನ್ನು ಸರ್ಕಾರ 'ಸೋಂಕಿತರ ಪಟ್ಟಿ'ಯಲ್ಲಿ ಸೇರಿಸುತ್ತಿಲ್ಲ ಎಂಬುದು ಮತ್ತೊಂದು ಆತಂಕಕಾರಿ ವಿಚಾರ.

ವಿಶ್ವದ ಅಂಕಿ-ಅಂಶ

ವಿಶ್ವದ ಅಂಕಿ-ಅಂಶ

ವಿಶ್ವದಾದ್ಯಂತ ಇಲ್ಲಿಯವರೆಗೂ 785,777 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅದರಲ್ಲಿ ಈಗಾಗಲೇ 37,815 ಮಂದಿ ಸಾವಿಗೀಡಾಗಿದ್ದಾರೆ. 165,607 ಮಂದಿ ಗುಣಮುಖರಾಗಿದ್ದಾರೆ. 29,488 ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+