• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗತ್ತಿನ ಅತ್ಯಂತ ವಾಸಯೋಗ್ಯ ನಗರಗಳು ಯಾವವು ಗೊತ್ತೇ?

|

ನ್ಯೂಯಾರ್ಕ್, ಸೆಪ್ಟೆಂಬರ್ 4: ಮಾಲಿನ್ಯ, ವಾಹನ ದಟ್ಟಣೆ, ದುಬಾರಿ ಬೆಲೆ, ಮೂಲಸೌಕರ್ಯದ ಕೊರತೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆ ನಗರಗಳ ವಾಸಯೋಗ್ಯ ಮಟ್ಟವನ್ನು ಕುಗ್ಗಿಸುತ್ತಿವೆ. ಭಾರತದಲ್ಲಂತೂ ನಗರಗಳು ಬೆಳೆಯುತ್ತಲೇ ತಮ್ಮ ಗುಣಮಟ್ಟವನ್ನು ಕಳೆದುಕೊಳ್ಳುತ್ತಲೇ ಇವೆ. ಜಗತ್ತಿನಲ್ಲಿ ಜನರು ಖುಷಿ, ಸಂತೋಷ ಮತ್ತು ನೆಮ್ಮದಿಯಿಂದ ಬದುಕಬಹುದು ಎಂಬಂತಹ ನಗರವನ್ನು ಹುಡುಕಿದರೆ ಬೆರಳಣಿಕೆಯಷ್ಟು ಹೆಸರುಗಳು ಸಿಗುತ್ತವೆ. ಅವುಗಳಲ್ಲಿ ಭಾರತದ ನಗರಗಳನ್ನು ಸೇರಿಸುವುದು ದೂರದ ಮಾತು.

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ಸಿದ್ಧಪಡಿಸಿರುವ 2019ರ ಜಾಗತಿಕ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ. ಆಸ್ಟ್ರೇಲಿಯಾದ ಮೆಲ್ಬರ್ನ್ ಜತೆ ಜಿದ್ದಾಜಿದ್ದಿನ ಪೈಪೋಟಿ ನಡೆಸಿರುವ ವಿಯೆನ್ನಾ, ಸತತ ಎರಡನೆಯ ವರ್ಷ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಜತೆಗೆ ವಿಶ್ವದ ಅತ್ಯಂತ ಆಹ್ಲಾದಕರ ನಗರ ಎಂಬ ಹೆಗ್ಗಳಿಕೆಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ಶಾಸ್ತ್ರೀಯ ಸಂಗೀತದ ಶ್ರೀಮಂತಿಕೆ ಮತ್ತು ಇತಿಹಾಸದ ಭವ್ಯ ಪರಂಪರೆಯಿಂದ ವಿಯೆನ್ನಾ, ಪ್ರವಾಸಿಗರನ್ನು ಸೆಳೆಯುತ್ತಿರುವ ವಿಯೆನ್ನಾ, ಹಸಿರಿನ ಪ್ರಕೃತಿ ಮತ್ತು ಅತ್ಯುತ್ತಮ ಸಾರ್ವಜನಿಕ ಸೇವೆಗೂ ಮೆಚ್ಚುಗೆ ಗಳಿಸಿದೆ. 140 ನಗರಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗುತ್ತದೆ. ಸತತ ಏಳು ವರ್ಷಗಳಿಂದ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದ ಪಾರಮ್ಯವನ್ನು ವಿಯೆನ್ನಾ, ಕಳೆದ ವರ್ಷ ಅಂತ್ಯಗೊಳಿಸಿತ್ತು.

ಪ್ರಾಚೀನ ಭಾರತದ ಮೊದಲ 'ಸ್ಮಾರ್ಟ್ ಸಿಟಿ'ಯನ್ನು ಹೊಗಳಿದ ನಾಸಾ

ಐದು ಪ್ರಮುಖ ಮಾನದಂಡಗಳನ್ನು ಇರಿಸಿಕೊಂಡು ಈ ಪಟ್ಟಿ ತಯಾರಿಸಲಾಗುತ್ತದೆ. ಇವುಗಳಲ್ಲಿ ಸ್ಥಿರತೆ, ಸಂಸ್ಕೃತಿ ಮತ್ತು ಪರಿಸರಗಳ ಎರಡು ಪ್ರಮುಖ ಮಾನದಂಡಗಳಾಗಿದ್ದು, ಒಟ್ಟು ಅಂಕದ ಶೇ 25ರಷ್ಟು ಅಂಕಗಳನ್ನು ಸಮಾನವಾಗಿ ಹಂಚಿಕೊಂಡಿರುತ್ತವೆ. ಆರೋಗ್ಯ ಮತ್ತು ಮೂಲಸೌಕರ್ಯ ತಲಾ ಶೇ 20 ಮತ್ತು ಶಿಕ್ಷಣ ಶೇ 10ರಷ್ಟು ಅಂಕಗಳನ್ನು ಹೊಂದಿರುತ್ತವೆ.

ವಿಯೆನ್ನಾ, ಮೆಲ್ಬರ್ನ್ ನಡುವೆ ಪೈಪೋಟಿ

ವಿಯೆನ್ನಾ, ಮೆಲ್ಬರ್ನ್ ನಡುವೆ ಪೈಪೋಟಿ

ನೂರು ಅಂಕಗಳಲ್ಲಿ ಈ ಎರಡೂ ನಗರಗಳ ನಡುವಿನ ಅಂಕಗಳ ವ್ಯತ್ಯಾಸ 0.7 ಮಾತ್ರ. ಬುಧವಾರ ಪ್ರಕಟಗೊಂಡ 2019ರ ಪಟ್ಟಿಯಲ್ಲಿ 99.1 ಅಂಕ ಪಡೆದ ವಿಯೆನ್ನಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆಸ್ಟ್ರೇಲಿಯಾದ ಮತ್ತೊಂದು ನಗರ ಸಿಡ್ನಿ ಕೂಡ ಈ ಪಟ್ಟಿಯಲ್ಲಿ ನೀಡಿ ಮೂರನೇ ಸ್ಥಾನ ಪಡೆದುಕೊಂಡಿದೆ. ಐದನೇ ಸ್ಥಾನದಲ್ಲಿದ್ದ ಸಿಡ್ನಿ ಸಂಸ್ಕೃತಿ ಮತ್ತು ಪರಿಸರದ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಕೆನಡಾದ ಮೂರು ನಗರಗಳು

ಕೆನಡಾದ ಮೂರು ನಗರಗಳು

ಜಪಾನ್‌ನ ಒಸಾಕೋ ನಗರ ನಾಲ್ಕನೆಯ ಸ್ಥಾನದಲ್ಲಿದೆ. ಕೆನಡಾದ ಮೂರು ನಗರಗಳು ನಂತರದ ಮೂರು ಸ್ಥಾನಗಳನ್ನು ಪಡೆದುಕೊಂಡಿರುವುದು ವಿಶೇಷ. ಕಲ್ಗಾರಿ, ವ್ಯಾಂಕೊವೆರ್ ಮತ್ತು ಟೊರಾಂಟೋ ನಗರಗಳು ಈ ಪಟ್ಟಿಯಲ್ಲಿವೆ. ಟೊರಾಂಟೋ ಮತ್ತು ಜಪಾನ್‌ನ ಟೋಕಿಯೋ ಏಳನೇ ಸ್ಥಾನದಲ್ಲಿ ಸಮಬಲ ಸಾಧಿಸಿವೆ. ಡೆನ್ಮಾರ್ಕ್‌ನ ಕೋಪನ್ ಹೇಗನ್ ಹಾಗೂ ಆಸ್ಟ್ರೇಲಿಯಾದ ಮತ್ತೊಂದು ನಗರ ಅಡಿಲೇಡ್ ಕ್ರಮವಾಗಿ 9, 10ನೇ ಸ್ಥಾನದಲ್ಲಿವೆ.

ಮಂಗಳವಾರ ದೇಶದ 10 ಹಾಟೆಸ್ಟ್ ನಗರಗಳು ಯಾವುವು?

ವಾಸಕ್ಕೆ ಅಯೋಗ್ಯ ನಗರಗಳು

ವಾಸಕ್ಕೆ ಅಯೋಗ್ಯ ನಗರಗಳು

ವಿಶೇಷವೆಂದರೆ ಮೊದಲ 22 ನಗರಗಳ ಪಟ್ಟಿಯಲ್ಲಿ ಅಮೆರಿಕದ ಯಾವ ನಗರವೂ ಇಲ್ಲ. ಭಾರತದ ನಗರಗಳಂತೂ ಈ ಪೈಪೋಟಿಯಿಂದ ಬಹು ದೂರದಲ್ಲಿವೆ. ವಾಸಕ್ಕೆ ಅತ್ಯಂತ ಅಯೋಗ್ಯ ಹತ್ತು ನಗರಗಳ ಪಟ್ಟಿಯಲ್ಲಿ ಭಾರತದ ಯಾವ ನಗರಗಳೂ ಇಲ್ಲದಿರುವುದು ಸಮಾಧಾನಕರ.

ವೆನೆಜುವೆಲಾದ ಕಾರಾಕಸ್, ಅಲ್ಜೀರಿಯಾದ ಅಲ್ಜೀರ್ಸ್, ಕ್ಯಾಮೆರಾನ್‌ನ ಡೌಲಾ, ಜಿಂಬಾಬ್ವೆಯ ಹರಾರೆ, ಪಪುವಾ ನ್ಯೂಗಿನಿಯ ಪೋರ್ಟ್ ಮೋರ್‌ಸ್ಬಿ, ಪಾಕಿಸ್ತಾನದ ಕರಾಚಿ, ಬಾಂಗ್ಲಾದೇಶದ ಢಾಕಾ, ನೈಜೀರಿಯಾದ ಲಾಗೋಸ್ ಮತ್ತು ಸಿರಿಯಾದ ಡಮಾಸ್ಕಸ್ ನಗರಗಳು ವಾಸಕ್ಕೆ ಯೋಗ್ಯವಲ್ಲದ ನಗರಗಳ ಪಟ್ಟಿಯಲ್ಲಿವೆ.

ಭಾರತದ ನಗರಗಳಿಗೆ ಹಿನ್ನಡೆ

ಭಾರತದ ನಗರಗಳಿಗೆ ಹಿನ್ನಡೆ

ಇನ್ನು ಭಾರತದ ನಗರಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಇತರೆ ದೇಶಗಳಲ್ಲಿನ ನಗರಗಳು ಸುಧಾರಣೆಯ ಪೈಪೋಟಿಯಲ್ಲಿದ್ದರೆ, ಭಾರತದ ನಗರಗಳು ಇನ್ನಷ್ಟು ಹದಗೆಡುತ್ತಿವೆ. 140 ನಗರಗಳ ಪಟ್ಟಿಯಲ್ಲಿ ಭಾರತದ ರಾಜಧಾನಿ ನವದೆಹಲಿ ಕಳೆದ ವರ್ಷ 112ನೇ ಸ್ಥಾನದಲ್ಲಿತ್ತು. ಈ ಬಾರಿ ಅದು ಆರು ಸ್ಥಾನಗಳಷ್ಟು ಕುಸಿತ ಕಂಡಿದ್ದು, 118ಕ್ಕೆ ಇಳಿದಿದೆ. ಇನ್ನು 119ನೇ ಸ್ಥಾನದಲ್ಲಿದ್ದ ವಾಣಿಜ್ಯ ನಗರಿ ಎರಡು ಸ್ಥಾನ ಮುಗ್ಗರಿಸಿದ್ದು, 121ಕ್ಕೆ ಕುಸಿದಿದೆ.

ಮೊದಲ ಸ್ಥಾನ ತಪ್ಪಿಸಿಕೊಂಡ 'ಕ್ಲೀನ್ ಸಿಟಿ' ಮೈಸೂರು, ಕಾರಣ ನೂರು!

English summary
Austria capital Vienna has been topped on the Economist Intelligence Unit's Global Liveable Index for 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X