ವಿಶ್ವದ ಅತೀ ಉದ್ದ ಹಾಗೂ ವೇಗದ ಮೆಟ್ರೋ ಸಂಚಾರ ಆರಂಭ; ಮಾರ್ಗಗಳು, ವಿಶೇಷತೆ, ಟಕೆಟ್‌ ದರಗಳ ವಿವರ ತಿಳಿಯಿರಿ

Metro Train: ಸಾಮಾನ್ಯವಾಗಿ ಬೃಹತ್ ನಗರಗಳಲ್ಲಿ ಬಹುತೇಕ ಮಂದಿ ಟ್ರಾಫಿಕ್‌ ಜಂಜಾಟದಿಂದ ತಪ್ಪಿಸಿಕೊಳ್ಳಲು ಮೆಟ್ರೋ ಪ್ರಯಾಣವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಬೆಂಗಳೂರು, ನವದೆಹಲಿಯಂತಹ ಮಹಾನಗರಗಳಲ್ಲಿ ಮಟ್ರೋ ರೈಲುಗಳು ಪ್ರತಿನಿತ್ಯವೂ ಲಕ್ಷಾಂತರ ಮಂದಿ ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದಡೆಗೆ ಹೊತ್ತೊಯ್ತುತ್ತವೆ. ಇನ್ನು ಇದೀಗ ಈ ಮಾರ್ಗದಲ್ಲಿ ಇಂದಿನಿಂದ ಅಂದರೆ ಡಿಸೆಂಬರ್ 1, 2024ರಿಂದ ವಿಶ್ವದ ಅತೀ ಉದ್ದ ಹಾಗೂ ವೇಗದ ಮೆಟ್ರೋ ಸಂಚಾರ ಆರಂವಾಗಿದೆ.

ವಿಶ್ವದ ಅತಿ ಉದ್ದ ಮತ್ತು ವೇಗದ ರಿಯಾದ್ ಮೆಟ್ರೋ ವನ್ನು ಇಂದು (ಡಿಸೆಂಬರ್ 1,2024) ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರು ಲೋಕಾರ್ಪಣೆ ಮಾಡಿದ್ದಾರೆ. ಹಾಗಾದರೆ ಟಿಕೆಟ್‌ ದರ, ಸಮಯ, ಮಾರ್ಗಗಳ ವಿವರ ತಿಳಿಯಿರಿ.

World s Longest and Fastest Metro Service from today Know details

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಈ ಮೆಟ್ರೋ ಜನರ ಜೀವನಾಡಿಯಾಗಿದೆ. ಬಹುನಿರೀಕ್ಷಿತ ಈ ರಿಯಾದ್ ಮೆಟ್ರೋ ಇಂದಿನಿಂದ ಅಧಿಕೃತವಾಗಿ ಕಾರ್ಯನಿರ್ವಹಣೆ ಪ್ರಾರಂಭ ಮಾಡಿದೆ. ನಗರದ ರಾಯಲ್ ಕಮಿಷನ್ ತನ್ನ ಪ್ರಯಾಣಿಕರಿಗೆ ತಡೆರಹಿತ ಪ್ರಯಾಣವನ್ನು ಒದಗಿಸಲಯ ಈ ಮೆಟ್ರೋವನ್ನು ಆರಂಭ ಮಾಡಿದೆ. ಮುಂದಿನ ದಿನಗಳಲ್ಲಿ ರಿಯಾದ್ ಮೆಟ್ರೋವನ್ನು ಹಂತ ಹಂತವಾಗಿ ಬೇರೆಡೆಯು ವಿಸ್ರಣೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಮೆಟ್ರೋ ನಿಲ್ದಾಣದ ವಿಶೇಷತೆ

* ಮೆಟ್ರೋ ನಿಲ್ದಾಣಗಳ ಸಂಖ್ಯೆ - 84
* ರೈಲು ಮಾರ್ಗಗಳ ಸಂಖ್ಯೆ - 6
* ಮೆಟ್ರೋ ಮಾರ್ಗದ ಉದ್ದ - 176 ಕಿಲೋ ಮೀಟರ್‌
* ಇನ್ನು ಈ ರಿಯಾದ್ ಮೆಟ್ರೋ ಅಂತ್ಯಂತ ವೇಗ ಮತ್ತು ಸಂಪೂರ್ಣ ಚಾಲಕ ರಹಿತವಾಗಿದೆ.

ಪ್ರಯಾಣಿಕರು ಮೊಬೈಲ್ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಲಭ್ಯ ಇರುವ ದರ್ಬ್ ಎಂಬ ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಟಿಕೆಟ್‌ ದರಗಳ ವಿವರ

ಪ್ರಥಮ ದರ್ಜೆ

* ಎರಡು ಗಂಟೆಗಳ ಪಾಸ್: SR 10
* ಮೂರು ದಿನದ ಪಾಸ್: SR 50
* ಒಂದು ವಾರದ ಪಾಸ್: SR 100
* ಒಂದು ತಿಂಗಳ ಪಾಸ್: SR350

ದ್ವಿತೀಯ ದರ್ಜೆ

ಎರಡು ಗಂಟೆಗಳ ಪಾಸ್: SR 4
ಮೂರು ದಿನಗಳ ಪಾಸ್: SR 20
ಏಳು-ದಿನದ ಪಾಸ್: SR 40
ಮೂವತ್ತು-ದಿನದ ಪಾಸ್: SR 140

ಮೆಟ್ರೋ ಮಾರ್ಗಗಳ ವಿವರ: ಇಂದು (ಡಿಸೆಂಬರ್ 1, 2024) ನೀಲಿ ಲೈನ್‌ (1), ಹಳದಿ ಲೈನ್‌ (4), ಮತ್ತು ಪರ್ಪಲ್ ಲೈನ್ (6)ನಲ್ಲಿ ಮೆಟ್ರೋ ಸಂಚಾರವನ್ನು ಆರಂಭಿಸಲಾಗಿದೆ. ಡಿಸೆಂಬರ್ 15ರಂದು ರೆಡ್ ಲೈನ್ (2) ಮತ್ತು ಗ್ರೀನ್ ಲೈನ್ (5)ನಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ. ಇನ್ನು ಆರೆಂಜ್ ಲೈನ್ (3)ನಲ್ಲಿ ಜನವರಿ 5, 2025ರಂದು ಮೆಟ್ರೋ ಸಂಚಾರ ಪ್ರಾರಂಭಿಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+