ವಿಶ್ವದ ಮೊದಲ ವಿದ್ಯುತ್ ಸಂವಹನ ಉಪಗ್ರಹ ಕಕ್ಷೆಗೆ
ವಾಷಿಂಗ್ಟನ್, ಮಾ. 2: ಅಮೆರಿಕ ಮೂಲದ ಅಂತರಿಕ್ಷ ಸಂಸ್ಥೆ (ಸ್ಪೇಸ್ ಎಕ್ಸ್) ವಿಶ್ವದ ಮೊದಲ ವಿದ್ಯುತ್ ಸಂವಹನ ಮಾದರಿಯ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಬಿಟ್ಟಿದೆ. 'ಫಾಲ್ಕನ್ 9' ರಾಕೆಟ್ ಗಳ ಮೂಲಕ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಗಿದೆ.
ಕ್ಯಾಲಿಫೋರ್ನಿಯಾದ ಕೇಪ್ ಕಾನ್ ವೆರಲ್ ಉಪಗ್ರಹ ಉಡಾವಣಾ ಕೇಂದ್ರದಿಂದ ಮೇ 1 ರಂದು ಉಪಗ್ರಹ ಹಾರಿಸಿ ಬಿಡಲಾಗಿದೆ. ಫ್ರೆಂಚ್ ಮೂಲದ ಬೋಯಿಂಗ್ ಮತ್ತು ಏಷ್ಯಾ ಬ್ರೋಡ್ ಕಾಸ್ಟ್ ಸೆಟ್ ಲೈಟ್ ಸಂಸ್ಥೆ ತಯಾರಿಸಿರುವ ರಾಕೆಟ್ ಗಳ ಮೂಲಕ ಉಪಗ್ರಹ ಉಡಾವಣೆ ಮಾಡಲಾಗಿದೆ.[ಸಂವಹನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ದಾಟಿದ ಭಾರತ]

ಶಕ್ತಿಯ ಪರಿಪೂರ್ಣ ಬಳಕೆ ಆಧಾರದಲ್ಲಿ ತಯಾರಾಗಿರುವ ಉಪಗ್ರಹ ಭೂಮಿಯ ಕಕ್ಷೆಯಲ್ಲಿ 2 ದಶಕ ಕಾಲ ಸುತ್ತುವರಿಯಲಿದೆ. ಸಾಂಪ್ರದಾಯಿಕ ಅಥವಾ ಸಾಮಾನ್ಯವಾಗಿ ನಿರ್ಮಾಣವಾಗುವ ರಾಕೆಟ್ ಗಳಿಗಿಂತ ಭಿನ್ನವಾಗಿ ಇದನ್ನು ತಯಾರು ಮಾಡಲಾಗಿದೆ. ಉಪಗ್ರಹದ ಹೊರಭಾಗವನ್ನು ಸಂಪೂರ್ಣವಾಗಿ ವಿದ್ಯುತ್ ಉಪಕರಣಗಳಿಂದಲೇ ಕೂಡಿದೆ ಎಂದು ಪೋರ್ಬ್ಸ್ ತನ್ನ ವರದಿಯಲ್ಲಿ ತಿಳಿಸಿದೆ.[ಜಿಎಸ್ಎಲ್‌ವಿ ಎಂಕೆ 3 ಯಶಸ್ಸಿನ 10 ಬೆಳವಣಿಗೆಗಳು]
ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿರುವ ಸ್ಪೇಸ್ ಎಕ್ಸ್ ಈ ವರ್ಷದ ಅಂತ್ಯದ ವೇಳೆಗೆ ಇನ್ನು ಎರಡು 'ಫಾಲ್ಕನ್ 9' ರಾಕೆಟ್ ತಯಾರು ಮಾಡುವ ಇಂಗಿತ ವ್ಯಕ್ತಪಡಿಸಿದೆ. ಮಾರ್ಚ್ 21 ಕ್ಕೆ ಇದೇ ರೀತಿಯ ಇನ್ನೊಂದು ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ. ತುರ್ಕೆಸ್ಟಮನ್ ಸರ್ಕಾರದ ಆಶ್ರಯದಲ್ಲಿ ಥೇಲ್ಸ್ ಅಲೇನಿಯಾದ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.












Click it and Unblock the Notifications