Miserable Countries List 2022: ದರಿದ್ರ ದೇಶಗಳ ಪಟ್ಟಿಯಲ್ಲಿ ಜಿಂಬಾಬ್ವೆಗೆ ಮೊದಲ ಸ್ಥಾನ; ಭಾರತಕ್ಕೆ ಎಷ್ಟನೇ ಸ್ಥಾನ?
ಖ್ಯಾತ ಅರ್ಥಶಾಸ್ತ್ರಜ್ಞ ಸ್ಟೀವ್ ಹ್ಯಾಂಕೆ ಅವರ ವಾರ್ಷಿಕ ದಾರಿದ್ರ್ಯ ಸೂಚ್ಯಂಕ (ಎಚ್ಎಎಂಎ)ದಲ್ಲಿ ಜಿಂಬಾಬ್ವೆ ಅತ್ಯಂತ ಶೋಚನೀಯ ದೇಶವಾಗಿ ಹೊರಹೊಮ್ಮಿದೆ. ಇದು ದೇಶಗಳ ಆರ್ಥಿಕ ಪರಿಸ್ಥಿತಿಗಳ ಮೇಲೆ ನಿರ್ಣಯಿಸಲಾಗುತ್ತದೆ.
ಉಕ್ರೇನ್, ಸಿರಿಯಾ ಮತ್ತು ಸುಡಾನ್‌ನಂತಹ ಯುದ್ಧಪೀಡಿತ ದೇಶಗಳನ್ನು ಮೀರಿಸಿ ಆಫ್ರಿಕನ್ ದೇಶ ಜಿಂಬಾಬ್ವೆ ತೀವ್ರ ಹಣದುಬ್ಬರದಿಂದ ಬಳಲುತ್ತಿದೆ. ಕಳೆದ ವರ್ಷ 243.8 ಪ್ರತಿಶತವನ್ನು ಮುಟ್ಟಿತ್ತು. ನ್ಯೂಯಾರ್ಕ ಪೋಸ್ಟ್ ಪ್ರಕಾರ, ಒಟ್ಟು 157 ದೇಶಗಳನ್ನು ಶ್ರೇಯಾಂಕಕ್ಕಾಗಿ ವಿಶ್ಲೇಷಿಸಲಾಗಿದೆ.

ಹಾಂಕೆ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, 2022ರಲ್ಲಿ ವಿಶ್ವದ ಅತ್ಯಂತ ದರಿದ್ರ ಮತ್ತು ದುಃಖದ ದೇಶವಾಗಿ ಜಿಂಬಾಬ್ವೆ ಮೊದಲ ಸ್ಥಾನ ಪಡೆದಿದ್ದರೆ, ಸ್ವಿಟ್ಜರ್ಲೆಂಡ್ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಅಂದರೆ, ಇಲ್ಲಿ ಅತ್ಯಂತ ಕಡಿಮೆ ದಾರಿದ್ರ್ಯ ಹೊಂದಿದೆ ಎಂದರ್ಥ.
ಅಚ್ಚರಿಯೆಂಬಂತೆ, ವಿಶ್ವದ ಅತ್ಯಂತ ಸಂತೋಷದ ದೇಶವೆಂದು ಕರೆಯಲ್ಪಡುವ ಫಿನ್‌ಲ್ಯಾಂಡ್ ದೇಶ ದಾರಿದ್ರ್ಯದ ಪಟ್ಟಿಯಲ್ಲಿ 109ನೇ ಸ್ಥಾನ ಪಡೆದುಕೊಂಡಿದೆ. ಫಿನ್‌ಲ್ಯಾಂಡ್ ಜನರು ದಾರಿದ್ರ್ಯದಲ್ಲೂ ಸಂತೋಷ ಅನುಭವಿಸುತ್ತಾರೆ ಎನ್ನಬಹುದು.

ವಿಶ್ವದ ದಾರಿದ್ರ್ಯ ಪಟ್ಟಿಯ ಟಾಪ್ 15 ದೇಶಗಳು
1) ಜಿಂಬಾಬ್ವೆ
2) ವೆನಿಝುವೆಲಾ
3) ಸಿರಿಯಾ
4) ಲೆಬನಾನ್
5) ಸುಡಾನ್
6) ಅರ್ಜೆಂಟೀನಾ
7) ಯೆಮೆನ್
8) ಉಕ್ರೇನ್
9) ಕ್ಯೂಬಾ
10) ಟರ್ಕಿ
11) ಶ್ರೀಲಂಕಾ
12) ಹೈಟಿ
13) ಆಂಗೋಲ
14) ಟೋಂಗಾ
15) ಘಾನಾ
ಮೊದಲ 15 ದೇಶಗಳ ಪೈಕಿ ಸಿರಿಯಾ, ಉಕ್ರೇನ್, ಆಂಗೋಲ, ಟೋಂಗಾ ದೇಶಗಳು ದಾರಿದ್ರ್ಯದ ಪಟ್ಟಿಗೆ ಸೇರಲು ನಿರುದ್ಯೋಗ ಸಮಸ್ಯೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಉಳಿದ ಮೊದಲ 15 ದೇಶಗಳಲ್ಲಿ ಹಣದುಬ್ಬರವು ದಾರಿದ್ರ್ಯಕ್ಕೆ ಕಾರಣವಾಗಿದೆ. ಜಿಂಬಾಬ್ವೆಯಲ್ಲಿ ಹಣದುಬ್ಬರ ಶೇ.243.8ರಷ್ಟು ಇದ್ದರೆ, ಅಲ್ಲಿನ ಬಡ್ಡಿದರ ಶೇ.131.8ರಷ್ಟು ಇದೆ.

ಭಾರತ ಮತ್ತು ಪಾಕಿಸ್ತಾನ ದೇಶಗಳ ಸ್ಥಾನವೇನು?
ವಿಶ್ವದಲ್ಲಿ ದಾರಿದ್ರ್ಯ ಹೊಂದಿದ ದೇಶಗಳ ಪಟ್ಟಿಯಲ್ಲಿ 157 ದೇಶಗಳ ಪೈಕಿ ಭಾರತ 103ನೇ ಸ್ಥಾನ ಪಡೆದುಕೊಂಡಿದೆ. ಭಾರತ ದೇಶದ ದರಿದ್ರಕ್ಕೆ ಮುಖ್ಯ ಕಾರಣ ನಿರುದ್ಯೋಗ ಎಂದು ಸ್ಟೀವ್ ಹ್ಯಾಂಕೆ ಹೇಳಿದೆ. ಇನ್ನು ನೆರೆಯ ಪಾಕಿಸ್ತಾನ 35ನೇ ಸ್ಥಾನದಲ್ಲಿದೆ. ಇದಕ್ಕೆ ಮುಖ್ಯ ಕಾರಣ ಹಣದುಬ್ಬರವೆಂದು ಹೆಸರಿಸಲಾಗಿದೆ.
ದಾರಿದ್ರ್ಯ ದೇಶವೆಂದು ಘೋಷಿಸಲು ಅಳತೆ ಏನು?
ಗಮನಾರ್ಹವಾಗಿ, ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಅನ್ವಯಿಕ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಸ್ಟೀವ್ ಹ್ಯಾಂಕೆ ಅವರು ವಾರ್ಷಿಕ ದಾರಿದ್ರ್ಯ ಸೂಚ್ಯಂಕವನ್ನು ಸಂಗ್ರಹಿಸಿದ್ದಾರೆ. ಸೂಚ್ಯಂಕಗಳು ನಿರುದ್ಯೋಗದ ಮೊತ್ತ (ಎರಡರಿಂದ ಗುಣಿಸಿದಾಗ), ಹಣದುಬ್ಬರ ಮತ್ತು ಬ್ಯಾಂಕ್-ಸಾಲ ದರಗಳು, ತಲಾದಾಯ ಅಂಶಗಳು ಪ್ರಮುಖವಾಗಿವೆ.
ಅತ್ಯಂತ ಕಡಿಮೆ ದಾರಿದ್ರ್ಯ ಹೊಂದಿದ ದೇಶಗಳ ಪಟ್ಟಿ
1) ಸ್ವಿಟ್ಜರ್ಲ್ಯಾಂಡ್ (157)
2) ಕುವೈತ್ (156)
3) ಐರ್ಲೆಂಡ್ (155)
4) ಜಪಾನ್ (154)
5) ಮಲೇಷ್ಯಾ (153)
6) ತೈವಾನ್ (152)
7) ನೈಜರ್ (151)
8) ಥಾಯ್ಲಂಡ್ (150)
9) ಟೋಗೋ (149)
10) ಮಾಲ್ಟಾ (148)












Click it and Unblock the Notifications