ಕರಾಳ ರಾತ್ರಿ: ನಿದ್ದೆಯಲ್ಲಿ ಮುಳುಗಿ ವಿಮಾನ ಇಳಿಯುವುದನ್ನೇ ಮರೆತ ಮಹಿಳೆ, ಮುಂದೇನಾಯ್ತು?

ಮೊಂಟ್ರಿಯಲ್, ಜೂನ್ 24: ವಿಮಾನ ಟೇಕಾಫ್ ಆಗುವ ಸಮಯದಲ್ಲಿ ನಿದ್ದೆಗೆ ಜಾರಿದ್ದ ಮಹಿಳೆಯೊಬ್ಬರು ಅದು ಲ್ಯಾಂಡ್ ಆದ ಮೇಲೆ ಇಳಿಯುವುದಕ್ಕೇ ಮರೆತು ಆದ ಅವಾಂತರವನ್ನು ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಆ ಕರಾಳ ಕ್ಷಣಗಳಲ್ಲಿ ಬದುಕಿನ ಭರವಸೆಯನ್ನೇ ಕಳೆದುಕೊಂಡೆ ಎಂದು ವಿವರಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಏರ್ ಕೆನಡಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಟಿಫಾನಿ ಆಡಮ್ಸ್ ಟೊರೊಂಟೋಗೆ ತೆರಳಬೇಕಿತ್ತು. ವಿಮಾನದಲ್ಲಿ ಕೂತು, ಅದು ಟೇಕಾಪ್ ಆಗುತ್ತಿದ್ದಂತೆಯೇ ನಿದ್ದೆಗೆ ಜಾರಿದ್ದರು. ನಂತರ ಟೊರೊಂಟೋ ಪರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿತ್ತು. ಆದರೂ ಅವರಿಗೆ ಎಚ್ಚರವಾಗಿರಲಿಲ್ಲ. ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲ ಇಳಿದು ಹೋದರೂ, ಗಲಾಟೆ ಎದ್ದಿದ್ದರೂ ಅದ್ಯಾವುದೂ ಗೊತ್ತಾಗದಂತೆ ಅವರು ನಿದ್ರಿಸುತ್ತಿದ್ದರು. ಎಲ್ಲರೂ ವಿಮಾನದಿಂದ ತೆರಳಿದ್ದಾರೆ ಎಂದು ತಿಳಿದು ವಿಮಾನದಲ್ಲಿ ಲೈಟ್ ಆಫ್ ಮಾಡಿ, ವಿಮಾನಯಾನ ಸಿಬ್ಬಂದಿ ವಿಮಾನದಿಂದ ಇಳಿದು ಹೋಗಿದ್ದರು.

ರಾತ್ರಿಯಾಗಿತ್ತು. ಇದ್ದಕ್ಕಿದ್ದಂತೆ ಟಿಫಾನಿಗೆ ಎಚ್ಚರವಾಗಿತ್ತು. ಕಣ್ಬಿಟ್ಟು ನೋಡಿದರೆ ಕತ್ತಲು, ಕತ್ತಲು. ಅಕ್ಕಪಕ್ಕದಲ್ಲಿ ಯಾರೂ ಇಲ್ಲ ಎಂಬುದು ಅರಿವಿಗೆ ಬರುತ್ತಿದಂತೆಯೇ ಆತಂಕಕ್ಕೊಳಗಾಗಿದ್ದರು. ಕೂಡಲೇ ತಮ್ಮ ಮೊಬೈಲ್ ತೆಗೆದು ಸ್ನೇಹಿತರಿಗೆ ಕರೆ ಮಾಡಲು ಯತ್ನಿಸಿದರೆ ಫೋನ್ ಬ್ಯಾಟರಿ ಇಲ್ಲದೆ ಸ್ವಿಚ್ಡ್ ಆಫ್ ಆಗಿತ್ತು!

ಅಳು ಉಕ್ಕಿ ಬರುತ್ತಿತ್ತು. ಏನಾಗಿದೆ, ತಾನು ಎಲ್ಲಿದ್ದೇನೆ, ಇದು ಕನಸೋ, ಸತ್ಯವೋ ತಿಳಿಯದ ಸ್ಥಿತಿ ಅವರದಾಗಿತ್ತು.

Woman sleeping in plane explains horrible experience

ಎಲ್ಲಾದರೂ ಚಾರ್ಜಿಂಗ್ ಪಾಯಿಂಟ್ ಇದೆಯೇ ಎಂದು ನೋಡಿದರೆ ಪ್ಲೇನ್ ನಲ್ಲಿ ವಿದ್ಯುತ್ ಇಲ್ಲ ಎಂಬುದು ಅರಿವಿಗೆ ಬಂತು. ಹಾಗೆಯೇ ಎದ್ದು, ಕಾಕ್ಪಿಟ್ ಗೆ ಹೇಗೋ ತೆರಳಿದರು. ಅದೃಷ್ಟವಶಾತ್ ಅಲ್ಲೊಂದು ಟಾರ್ಚ್ ಸಿಕ್ಕಿತ್ತು. ಅದನ್ನು ಹಿಡಿದು ಇಳಿಯಲೆಂದು ತೆರಳಿದರೆ ಸುಮಾರು 50 ಅಡಿ ಎತ್ತರದಿಂದ ಇಳಿಯಬೇಕಲ್ಲ! ಸಾಧ್ಯವಿಲ್ಲ ಎಂಬುದು ತಿಳಿಯುತ್ತಿದ್ದಂತೆಯೇ ಆಕೆ ಯಾರದಾದರೂ ಗಮನ ಸೆಳೆಯುವ ಸಲುವಾಗಿ ಆ ಟಾರ್ಚ್ ಲೈಟ್ ಕಾಣುವಂತೆ ಅದನ್ನು ಬೀಸತೊಡಗಿದರು.

ಅದನ್ನು ನೋಡಿದ ಲಗೇಜ್ ಕಾರ್ಟ್ ಡ್ರೈವರ್ ವೊಬ್ಬರು ಅಚ್ಚರಿಯಿಂದ ಓಡಿಬಂದು 'ನೀವ್ಯಾಕೆ ಇಲ್ಲಿದ್ದೀರಿ' ಎಂದು ಪ್ರಶ್ನಿಸಿದರು. ನಂತರ ಅವರನ್ನು ರಕ್ಷಿಸಿದರು.

"ಕ್ರ್ಯೂ ಸಿಬ್ಬಂದಿಗಳು ಪ್ರಯಾಣಿಕರೆಲ್ಲರೂ ವಿಮಾನದಿಂದ ಇಳಿದಿದ್ದಾರೆಯೇ, ಇಲ್ಲವೇ ಎಂಬುದನ್ನೂ ಪರಿಶೀಲಿಸುವುದಿಲ್ಲವೇ?" ಎಂದು ಟಿಫಾನಿ ಹರಿಹಾಯ್ದಿದಿದ್ದಾರೆ. ಅಂದಿನಿಂದ ನನಗೆ ಸರಿಯಾಗಿ ನಿದ್ರೆ ಬರುತ್ತಿಲ್ಲ, ರಾತ್ರಿ ಮಲಗಿದರೆ ಅದೇ ಕರಾಳ ರಾತ್ರಿ ನೆನಪಾಗುತ್ತದೆ ಎಂದು ಆಕೆ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಟಿಫಿನಾ ಅವರ ಕ್ಷಮೆ ಕೇಳಿರುವ ಏರ್ ಕೆನಡಾ, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+