27 ವರ್ಷದ ನಂತರ ಕೋಮಾ ಸ್ಥಿತಿಯಿಂದ ಎದ್ದ ಮಹಿಳೆ, ನೆನಪಿದ್ದಿದ್ದು ಮಗನ ಹೆಸರೊಂದೆ!

ಅಬುಧಾಬಿ, ಏಪ್ರಿಲ್ 26: ವೈದ್ಯಕೀಯ ಕ್ಷೇತ್ರ ಅದೆಷ್ಟೋ ಅಚ್ಚರಿಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. 'ನಮ್ಮಿಂದ ಆಗಲ್ಲ' ಎಂದು ವೈದ್ಯರೇ ಕೈಚೆಲ್ಲಿದ ಪ್ರಕರಣಗಳಲ್ಲೂ ಪವಾಡ ಸದೃಶವಾಗಿ ವ್ಯಕ್ತಿ ಬದುಕುಳಿದ ಘಟನೆಗಳು ನಡೆದಿವೆ. ಈ ಜಗತ್ತಿನಲ್ಲಿ ಮನುಷ್ಯನನ್ನು ಮೀರಿದ ಶಕ್ತಿಯೊಂದಿದೆ ಎಂಬ ನಂಬಿಕೆಯನ್ನು ಇಂಥ ಘಟನೆಗಳು ಜೀವಂತವಾಗಿರಿಸಿವೆ.

ಅಂಥ ಘಟನೆಗಳಲ್ಲಿ ಇದೂ ಒಂದು. ಯುನೈಟೆಡ್ ಅರಬ್ ಎಮಿರೇಟ್ಸ್ ನ ಮುನಿರಾ ಅಬ್ದುಲ್ಲಾ ಎಂಬ ಮಹಿಳೆಯೊಬ್ಬರು 27 ವರ್ಷದ ಹಿಂದೆ ಅಪಘಾತಕ್ಕೊಳಗಾಗಿ ಕೋಮಾ ಸ್ಥಿತಿಗೆ ತಲುಪಿದ್ದರು. ಆಗಿನಿಂದಲೂ ಅವರು ಪ್ರಜ್ಞಾವಸ್ಥೆಗೆ ಬಂದಿರಲಿಲ್ಲ್. ಆದರೆ ಇತ್ತೀಚೆಗಷ್ಟೇ ಅವರು ಪವಾಡ ಎಂಬಂತೆ ಕಣ್ಣುಬಿಟ್ಟರು. ಕಣ್ಣು ಬಿಡುತ್ತಿದ್ದಂತೆಯೇ ತಮ್ಮ ಮಗನ ಹೆಸರನ್ನು ಕೂಗಿದರು!

ಜರ್ಮನಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಬ್ದುಲ್ಲಾ, ಕಳೆದ ವರ್ಷ ಇದ್ದಕ್ಕಿದ್ದಂತೆ ತಮ್ಮ ಪುತ್ರ "ಓಮರ್ ವೆಬೈರ್" ನ ಹೆಸರನ್ನು ಹೇಳುವುದಕ್ಕೆ ಆರಂಭಿಸಿದ್ದರು. ಅದುವರೆಗೂ ಅವರು ಬದುಕಬಹುದು ಎಂಬ ಯಾವ ಭರವಸೆಯನ್ನೂ ಇಟ್ಟುಕೊಳ್ಳದ ವೈದ್ಯರಿಗೆ ಹೊಸ ಆಶಾಕಿರಣ ಗೋಚರಿಸಿತ್ತು. ಕೆಲ ದಿನಗಳ ನಂತರ ಖುರಾನ್ ನ ಸಾಲುಗಳನ್ನೂ ಆಕೆ ಉಚ್ಚರಿಸುವುದಕ್ಕೆ ಆರಂಭಿಸಿದರು. ಕೊನೆಗೂ ಒಂದು ದಿನ ಆಕೆ ಕಣ್ಣು ಬಿಟ್ಟರು!

Woman in UAE regains consciousness after spending 27 years in Coma state

ಅಪಘಾತಕ್ಕೊಳಗಾಗಿ, ಕೋಮಾ ಸ್ಥಿತಿಗೆ ತಲುಪಿ, ಇಷ್ಟು ಸುದೀರ್ಘ ವರ್ಷದ ನಂತರ ಪ್ರಜ್ಞಾವಸ್ಥೆಗೆ ಮರಳಿದ ಅಬ್ದುಲ್ಲಾಗೆ ಹಳೆಯದನ್ನೆಲ್ಲ ನೆನಪಿಸಿಕೊಳ್ಳಲು ಸಮಯ ಬೇಕಾಯ್ತು. ಆದರೆ ತಮ್ಮ ಮಗನ ಹೆಸರು ಮಾತ್ರ ಅವರಿಗೆ ಮರೆತಿರಲಿಲ್ಲ! ಆಕೆಗೆ ಅಪಘಾತವಾದಾಗ ಮಗನಿಗೆ 4 ವರ್ಷ ವಯಸ್ಸು! 27 ವರ್ಷಗಳಿಂದಲೂ ಅಮ್ಮ ಇಂದು ಕಣ್ಣು ಬಿಟ್ಟಾಳು, ನಾಳೆ ಕಣ್ಣು ಬಿಟ್ಟಾಳು ಎಂದು ಮಗ ಕಾಯುತ್ತಲೇ ಇದ್ದ. ತನ್ನ ಮಡಿಲಲ್ಲಿ ಬೆಚ್ಚಗೆ ಮಲಗುತ್ತಿದ್ದ ಮಗ ಅಮ್ಮ ಕಣ್ಣು ಬಿಡುವ ಹೊತ್ತಿಗೆ ಹೆಗಲಿಗೂ ಎತ್ತರ ಬೆಳೆದು ನಿಂತಿದ್ದಾನೆ! ಅಮ್ಮಂಗೆ ಅಚ್ಚರಿ, ಕನಸೋ-ನನಸೋ ಗೊತ್ತಾಗದ ಸ್ಥಿತಿ.

ಇದೀಗ ಗುಣಮುಖರಾಘಿರುವ ಮುನಿರಾ ಅಬ್ದುಲ್ಲಾ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಮರಳಿದ್ದಾರೆ, ಇಲ್ಲಿಯೇ ಅವರಿಗೆ ಸಣ್ಣಪುಟ್ಟ ಚಿಕಿತ್ಸೆ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+