ಲೈಂಗಿಕ ಕಿರುಕುಳ: ದುರ್ಬುದ್ಧಿಯ ಟೆಕ್ಕಿ ಗಡಿಪಾರು

ಸಾಫ್ಟ್‌ವೇರ್ ಕನ್ಸಲ್ಟೆಂಟ್ ಆಗಿರುವ ಹೈದರಾಬಾದಿನ ಶ್ರೀನಿವಾಸ ಎಸ್ ಎರ್ರಾಮಿಲ್ಲಿಗೆ (45) 2.5 ಲಕ್ಷ ಡಾಲರ್ ದಂಡ ಸಹ ವಿಧಿಸಲಾಗಿದೆ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಒಂದು ವರ್ಷ ಕಾಲ ನ್ಯಾಯಾಲಯದ ಕಣ್ಗಾವಲಿನಲ್ಲಿ ಇರಬೇಕಾಗುತ್ತದೆ ಎಂದೂ ಚಿಕಾಗೊ ಜಿಲ್ಲಾ ನ್ಯಾಯಾಧೀಶ ಜೋನ್ ಲೆಫ್ ಕೊ ತಿಳಿಸಿದ್ದಾರೆ.
ತುರ್ತಾಗಿ ಸ್ವದೇಶಕ್ಕೆ ಗಡಿಪಾರು: 2011ರ ಜೂನ್ 14ರಂದು Southwest Airlines ವಿಮಾನದಲ್ಲಿ ಚಿಕಾಗೋಗೆ ತೆರಳುತ್ತಿದ್ದಾಗ ಶ್ರೀನಿವಾಸ್ ಮಹಿಳೆಗೆ 3 ಬಾರಿ ಲೈಂಗಿಕ ಕಿರುಕುಳ ನೀಡಿದ್ದ. ಬಾಧಿತ ಮಹಿಳೆ ತನ್ನ ಪತಿಯ ಜತೆ 34ನೇ ವಿವಾಹ ವಾರ್ಷಿಕೋತ್ಸವ ಆಚರಿಸಲು ತೆರಳುತ್ತಿದ್ದಾಗ ಈ ಕಸಿವಿಸಿ ಅನುಭವಿಸಬೇಕಾಯಿತು.
ಅದಕ್ಕೂ ಮೊದಲು ಎರ್ರಾಮಿಲ್ಲಿ ಇಂತಹುದೇ ಇನ್ನೆರಡು ಪ್ರಕರಣಗಳಲ್ಲಿ ದೋಷಿಯೆನಿಸಿದ್ದನು ಎಂಬುದು ಗಮನಾರ್ಹ. ಪಾಪಿ ಶ್ರೀನಿವಾಸ ಆ ಎರಡೂ ಪ್ರಕರಣಗಳಲ್ಲೂ ಶಿಕ್ಷೆ ಅನುಭವಿಸಿದ್ದ! ಆದರೂ ಬುದ್ಧಿ ನೆಟ್ಟಗಾಗಿಲ್ಲ. ಹಾಗಾಗಿ ಮೂರನೆಯ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗುತ್ತಿದ್ದಂತೆ ಅವನನ್ನು ತುರ್ತಾಗಿ ಸ್ವದೇಶಕ್ಕೆ ಗಡಿಪಾರು ಮಾಡಲು ಆದೇಶಿಸಲಾಗಿದೆ.
ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿರುವ ವೇಳೆ ಶ್ರೀನಿವಾಸ್ ವಿಮಾನದಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದ್ದು, ಶಿಕ್ಷೆಯನ್ನು ಸಂಪೂರ್ಣವಾಗಿ ಅನುಭವಿಸಿದ ಬಳಿಕವಷ್ಟೆ ಭಾರತಕ್ಕೆ ಮರಳಬಹುದಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ಇದಕ್ಕೂ ಮೊದಲು ಎರ್ರಾಮಿಲ್ಲಿ ಇಂತಹುದೇ ಇನ್ನೆರಡು ಪ್ರಕರಣಗಳಲ್ಲಿ ದೋಷಿಯೆನಿಸಿದ್ದನು ಎಂಬುದು ಗಮನಾರ್ಹ.












Click it and Unblock the Notifications