Donald Trump: ಉದ್ಘಾಟನಾ ಸಮಾವೇಶದಲ್ಲಿ ಮಹತ್ವದ ಘೋಷಣೆ ಮಾಡಿದ ಟ್ರಂಪ್

ವಾಷಿಂಗ್ಟನ್, ಜನವರಿ 19: ವಿಶ್ವವೇ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸಮಾರಂಭವನ್ನು ಎದುರು ನೋಡುತ್ಇದೆ. ಅಮೆರಿಕದ 47ನೇ ಅಧ್ಯಕ್ಷರಾಗಿ ಅವರು ಜನವರಿ 20ರ ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಳ್ಳುವ ತೀರ್ಮಾನಗಳೇನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಶನಿವಾರವೇ ವಾಷಿಂಗ್ಟನ್‌ಗೆ ಆಗಮಿಸಿರುವ ಡೊನಾಲ್ಡ್ ಟ್ರಂಪ್ ಭಾನುವಾರ ಉದ್ಘಾಟನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಸಾವಿರಾರು ಟ್ರಂಪ್ ಬೆಂಬಲಿಗರು ಈ ಸಮಾವೇಶಕ್ಕೆ ಸೇರಿದ್ದರು. "ಎಲ್ಲಾ ಬಿಕ್ಕಟ್ಟುಗಳನ್ನು ಬಗೆಹರಿಸುತ್ತೇನೆ" ಎಂದು ಸಮಾವೇಶದಲ್ಲಿ ಟ್ರಂಪ್ ಘೋಷಣೆ ಮಾಡಿದರು.

Will Fix Every Single Crisis Donald Trump Announced In Inauguration Rally

ಐತಿಹಾಸಿಕ ವೇಗದಲ್ಲಿ ಕೆಲಸ: ಡೊನಾಲ್ಡ್ ಟ್ರಂಪ್‌ಗೆ ಜೈಕಾರ ಕೂಗುತ್ತಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾಳೆಯಿಂದಲೇ ನಾನು ಐತಿಹಾಸಿಕ ವೇಗ ಮತ್ತು ಶಕ್ತಿಯಿಂದ ಕೆಲಸ ಮಾಡುತ್ತೇನೆ. ಪ್ರತಿಯೊಂದು ಬಿಕ್ಕಟ್ಟನ್ನು ಪರಿಹಾರ ಮಾಡುತ್ತೇನೆ" ಎಂದು ಘೋಷಿಸಿದರು.

ಡೊನಾಲ್ಡ್‌ ಟ್ರಂಪ್ ಅವರ ಈ ಸಮಾವೇಶದ ವೇದಿಕೆಯಲ್ಲಿ ಎಲಾನ್‌ ಮಸ್ಕ್‌ ಮತ್ತು ಇತರ ಉದ್ಯಮಿಗಳು ಇದ್ದರು. "ಮಹತ್ವದ ಕೆಲಸಗಳು ಅಮೆರಿಕವನ್ನು ಭದ್ರಗೊಳಿಸುತ್ತೇವೆ" ಎಂದು ಹೇಳುವ ಮೂಲಕ ಟ್ರಂಪ್ ತಮ್ಮ ಮುಂದಿನ ನಡೆಯ ಬಗ್ಗೆ ಕುತೂಹಲವನ್ನು ಮೂಡಿಸಿದರು.

78 ವರ್ಷದ ಡೊನಾಲ್ಡ್‌ ಟ್ರಂಪ್ ತಮ್ಮ ಚುನಾವಣಾ ಭಾಷಣಗಳಲ್ಲಿಯೇ ವಲಸಿಗರ ಕುರಿತು ಮಾತನಾಡಿದ್ದರು. ಅಧಿಕಾರಕ್ಕೆ ಬಂದ ಬಳಿಕ ವಲಸಿಗರನ್ನು ವಾಪಸ್ ಕಳಿಸುವ ಪ್ರಮುಖ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

"ನಮ್ಮ ಗಡಿಯ ಮೂಲಕ ನಾವು ಅತಿಕ್ರಮ ಪ್ರವೇಶ ತಡೆಯುತ್ತೇವೆ" ಎಂದು ಹೇಳುವ ಮೂಲಕ ಡೊನಾಲ್ಡ್‌ ಟ್ರಂಪ್ ತಮ್ಮ 2ನೇ ಅಧಿಕಾರ ಅವಧಿಯಲ್ಲಿ ಯಾವುದೇ ದಾಖಲೆಗಳಿದಲ್ಲದೇ ಅಮೆರಿಕದಲ್ಲಿ ನೆಲೆಸಿರುವ ವಲಸಿಗರನ್ನು ಗಡಿಪಾರು ಮಾಡುವ ಸುಳಿವು ಕೊಟ್ಟರು.

ಜೋ ಬೈಡನ್ "ವಿಫಲವಾದ ಆಡಳಿತ" ಎಂದು ಹೇಳುವ ಮೂಲಕ ಟ್ರಂಪ್ ನಿರ್ಗಮಿತ ಅಧ್ಯಕ್ಷರ ಕಾರ್ಯ ವೈಖರಿಯನ್ನು ಟೀಕಿಸಿದರು. ಅಮೆರಿಕದ ಸೇನಾ ಕಮಾಂಡರ್ ಈಗಾಗಲೇ ವೈಟ್‌ ಹೌಸ್‌ಗೆ ಭೇಟಿ ನೀಡಿ ಪ್ರಮಾಣ ವಚನ ಕಾರ್ಯಕ್ರಮದ ಭದ್ರತೆಯ ಉಸ್ತುವಾರಿ ಪರಿಶೀಲನೆ ನಡೆಸಿದ್ದಾರೆ.

"ಅಧಿಕಾರ ಸ್ವೀಕಾರ ಮಾಡಿದ ಬಳಿಕ ಕ್ಷಿಪಣಿ ದಾಳಿ ನಿರೋಧಕ ವ್ಯವಸ್ಥೆ ಐರನ್ ಡೋಮ್ ನಿರ್ಮಾಣ ಮಾಡಲು ಸೇನೆಗೆ ಸೂಚನೆ ನೀಡುತ್ತೇನೆ. ಪೋರ್ಸ್ ಶೀಲ್ಡ್ ಹೆಸರಿನ ಈ ವ್ಯವಸ್ಥೆಯನ್ನು ಅಮೆರಿಕ ನಿರ್ಮಿತವಾಗಿರಲಿದೆ" ಎಂದು ಈಗಾಗಲೇ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇಸ್ರೇಲ್ ಈಗಾಗಲೇ ಪ್ರಬಲವಾದ ಐರನ್ ಡೋಮ್ ವ್ಯವಸ್ಥೆ ಹೊಂದಿದೆ. ಇದನ್ನು ಉಲ್ಲೇಖಿಸಿಯೇ ಟ್ರಂಪ್ ಈ ಹೇಳಿಕೆ ನೀಡಿದ್ದರು.

ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಟ್ರಂಪ್ ಮಹತ್ವದ ಆದೇಶಗಳಿಗೆ ಸಹಿ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಓವಲ್ ಕಛೇರಿಯಲ್ಲಿ ಟ್ರಂಪ್ ತಂಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಾಹಿತಿಗಳ ಪ್ರಕಾರ ದೇಶದ ಅಧ್ಯಕ್ಷರು ಏಕಪಕ್ಷೀಯವಾಗಿ ಕೈಗೊಳ್ಳುವ ತೀರ್ಮಾನಗಳು ಕಾನೂನು ವ್ಯಾಪ್ತಿಯನ್ನು ಹೊಂದಿವೆ. ಇದು ಜಾರಿಗೊಳ್ಳಲು ಸಂಸತ್ ಒಪ್ಪಿಗೆ ಬೇಕಿಲ್ಲ. ಇದನ್ನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲು ಸಹ ಸಾಧ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+