ಕ್ಯಾಲಿಪೋರ್ನಿಯಾ ಕಾಡ್ಗಿಚ್ಚಿಗೆ 50 ಸಾವಿರ ಎಕರೆ ಆಪೋಷಣ
ಕ್ಯಾಲಿಪೋರ್ನಿಯಾ, ಸೆಪ್ಟೆಂಬರ್. 14: ಅಮೆರಿಕ ಸಂಯುಕ್ತ ಸಂಸ್ಥಾನದ ಉತ್ತರ ಕ್ಯಾಲಿಪೋರ್ನಿಯಾದಲ್ಲಿ ಕಾಡ್ಗಿಚ್ಚು ಆವರಿಸಿದ್ದು ಸಾವಿರಾರು ಮನೆ ಭಸ್ಮವಾಗಿದೆ. ಕಳೆದ ಒಂದು ವಾರದಿಂದ ಧಗಧಗಿಸಿ ಉರಿಯುತ್ತಿರುವ ಬೆಂಕಿ ಇನ್ನು ನಿಯಂತ್ರಣಕ್ಕೆ ಬಂದಿಲ್ಲ.
ಪಶ್ಚಿಮ ಕರಾವಳಿ ಭಾಗದ ಕಾಡುಗಳನ್ನೂ ಬಲಿ ಪಡೆಯುತ್ತಿರುವ ಬೆಂಕಿ ಪ್ರತಿ ದಿನ ತನ್ನ ವಿಸ್ತಾರವನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಈ ಋತುಮಾನದಲ್ಲಿ ಕಾಡ್ಗಿಚ್ಚು ಸಾಮಾನ್ಯವಾಗಿದ್ದರೂ ಈ ಬಾರಿ ನಿಯಂತ್ರಣಕ್ಕೆ ಸಿಗದ ರೀತಿ ಹರಡುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಬುಧವಾರ ಕಾಣಿಸಿಕೊಂಡ ಬೆಂಕಿ ಭಸ್ಮ ಮಾಡುತ್ತ ಮುಂದೆ ಸಾಗುತ್ತಿದೆ. ಕ್ಯಾಲಿಪೋರ್ನಿಯಾದ ಗವರ್ನರ್ ಜೆರ್ರಿ ಬ್ರೌನ್ ಬೆಂಕಿ ಕಾಣಿಸಿಕೊಂಡ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ಶನಿವಾರದವರೆಗೆ ಬೆಂಕಿ ಸುಮಾರು 50 ಸಾವಿರ ಎಕರೆ ಪ್ರದೇಶವನ್ನು ಸುಟ್ಟು ಹಾಕಿದೆ. ಬೆಂಕಿ ನಿಯಂತ್ರಂಣಕ್ಕೆ ತರಲು ಸಕಲ ಕ್ರಮ ತೆಗೆದುಕೊಳ್ಳಲಾಗಿದ್ದು ಪ್ರದೇಶದಲ್ಲಿ ವಾಸವಿದ್ದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾನಿ ಲೆಕ್ಕ ಇನ್ನು ಮುಂದೆ ತಿಳಿದು ಬರಬೇಕಿದೆ.
Flames visible from middletown, ca #ValleyFire pic.twitter.com/aPZXTsJ7uP
— Nicole Young (@NicoleYoung89) September 13, 2015 Flames visible from middletown, ca #ValleyFire pic.twitter.com/aPZXTsJ7uP
— Nicole Young (@NicoleYoung89) September 13, 2015 











Click it and Unblock the Notifications