ಮೋದಿ ಟ್ವಿಟ್ಟರ್ ಖಾತೆ ಫಾಲೋ ಮಾಡಿ, ಅನ್ ಫಾಲೋ ಮಾಡಿದ ವೈಟ್ ಹೌಸ್: ಕಾರಣ ಬಹಿರಂಗ

ಸುಮಾರು 22 ಮಿಲಿಯನ್ ಫಾಲೋವರ್ಸ್ ಹೊಂದಿರುವ ಅಮೆರಿಕಾದ ಅಧ್ಯಕ್ಷರ ಕಚೇರಿ 'ದಿ ವೈಟ್ ಹೌಸ್' ಟ್ವಿಟ್ಟರ್ ಖಾತೆ, ಭಾರತದ ಮುಖಂಡರ ಅಕೌಂಟ್ ಅನ್ನು ಫಾಲೋ ಮಾಡಿದ ವೇಗದಲ್ಲೇ ಅನ್ ಫಾಲೋ ಮಾಡಿ ಸುದ್ದಿಯಾಗಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಅಮೆರಿಕಾಗೆ ರಫ್ತು ಮಾಡಿತ್ತು. ಇದಾದ ನಂತರ, ವೈಟ್ ಹೌಸ್, ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಆದಿಯಾಗಿ ಹಲವು ಭಾರತದ ಟ್ವಿಟ್ಟರ್ ಅಕೌಂಟ್ ಫಾಲೋ ಮಾಡಲಾರಂಭಿಸಿತ್ತು.

ವಿಶ್ವದ ಯಾವುದೇ ಪ್ರಮುಖ ನಾಯಕರ ಅಕೌಂಟ್ ಅನ್ನು ಫಾಲೋ ಮಾಡದ ವೈಟ್ ಹೌಸ್, ಭಾರತದ ಪ್ರಮುಖ ನಾಯಕರ ಅಕೌಂಟ್ ಹಿಂಬಾಲಿಸುತ್ತಿರುವುದು ಮೋದಿಯ ಜನಪ್ರಿಯತೆಯ ಸಾಕ್ಷಿ ಎಂದೇ ವಿಶ್ಲೇಷಲಾಗಿತ್ತು.

ಮೋದಿ ಸೇರಿದಂತೆ ಪ್ರಮುಖ ನಾಯಕರ ಅಕೌಂಟ್ ಫಾಲೋ ಮಾಡಿದ್ದು ಯಾಕೆ, ಈಗ ಅನ್ ಫಾಲೋ ಮಾಡಲು ಕಾರಣ ಏನು ಎನ್ನುವುದಕ್ಕೆ, ದಿ ವೈಟ್ ಹೌಸ್ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ.

ವೈಟ್ ಹೌಸ್ ಟ್ವಿಟ್ಟರ್ ಅಕೌಂಟ್

ವೈಟ್ ಹೌಸ್ ಟ್ವಿಟ್ಟರ್ ಅಕೌಂಟ್

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡು ಅಕೌಂಟ್, ಅವರ ಪತ್ನಿ ಮೆಲಾನಿಯಾ ಟ್ರಂಪ್, ಅಲ್ಲಿನ ಉಪರಾಷ್ಟ್ರಪತಿ ಸೇರಿದಂತೆ, ಕೇವಲ ಹದಿಮೂರು ಅಕೌಂಟ್ ಅನ್ನು ಮಾತ್ರ ವೈಟ್ ಹೌಸ್ ಫಾಲೋ ಮಾಡುತ್ತಿದೆ. ಈ ಎಲ್ಲಾ ಅಕೌಂಟ್ ಗಳು ಅಮೆರಿಕಾಗೆ ಸಂಬಂಧ ಪಟ್ಟದ್ದಾಗಿದೆ.

ಮೋದಿಯನ್ನು ನನ್ನ ಬೆಸ್ಟ್ ಫ್ರೆಂಡ್ ಎಂದು ಪುನರುಚ್ಚಿರಿಸಿದ ಟ್ರಂಪ್

ಮೋದಿಯನ್ನು ನನ್ನ ಬೆಸ್ಟ್ ಫ್ರೆಂಡ್ ಎಂದು ಪುನರುಚ್ಚಿರಿಸಿದ ಟ್ರಂಪ್

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಅಮೆರಿಕಾಗೆ ರಫ್ತು ಮಾಡಿದ ನಂತರ, ಅಧ್ಯಕ್ಷ ಟ್ರಂಪ್, ಮೋದಿಯನ್ನು ನನ್ನ ಬೆಸ್ಟ್ ಫ್ರೆಂಡ್ ಎಂದು ಪುನರುಚ್ಚಿರಿಸಿ, ಬಾಯಿತುಂಬಾ ಹೊಗಳಿದ್ದರು. ಇದರ ಬೆನ್ನಲ್ಲೇ, ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಪ್ರಧಾನಮಂತ್ರಿ ಕಾರ್ಯಾಲಯ, ಅಮೆರಿಕಾದಲ್ಲಿರುವ ಭಾರತದ ರಾಯಭಾರ ಕಚೇರಿ ಅಕೌಂಟ್ ಅನ್ನು ಹಿಂಬಾಲಿಸಲು, ವೈಟ್ ಹೌಸ್ ಆರಂಭಿಸಿತು.

ರಾಷ್ಟ್ರಪತಿ, ಪ್ರಧಾನಿ ಅಕೌಂಟ್ ಅನ್ ಫಾಲೋ

ರಾಷ್ಟ್ರಪತಿ, ಪ್ರಧಾನಿ ಅಕೌಂಟ್ ಅನ್ ಫಾಲೋ

ಈಗ ಏಕಾಏಕಿ, ಈ ಎಲ್ಲಾ ಅಕೌಂಟ್ ಅನ್ನು ವೈಟ್ ಹೌಸ್ ಅನ್ ಫಾಲೋ ಮಾಡಿದೆ. ಈ ಬಗ್ಗೆ ವೈಟ್ ಹೌಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. "ವೈಟ್ ಹೌಸ್ ಟ್ವಿಟ್ಟರ್ ಖಾತೆ, ಯಾವಾಗಲೂ ಅಮೆರಿಕ ಸರ್ಕಾರದ ಹಿರಿಯ ವ್ಯಕ್ತಿಗಳ ಖಾತೆಯನ್ನು ಫಾಲೋ ಮಾಡುತ್ತದೆ. ಇದರ ಜೊತೆ ಕೆಲವು ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತದೆ" ಎಂದಿದ್ದಾರೆ.

ಗೌರವ ಸಲ್ಲಿಸುವ ಸಲುವಾಗಿ, ಸೀಮಿತ ಅವಧಿಗೆ ಅಕೌಂಟ್ ಫಾಲೋ

ಗೌರವ ಸಲ್ಲಿಸುವ ಸಲುವಾಗಿ, ಸೀಮಿತ ಅವಧಿಗೆ ಅಕೌಂಟ್ ಫಾಲೋ

"ಒಂದು ದೇಶ ಮತ್ತು ಆ ದೇಶದ ಪ್ರಮುಖ ನಾಯಕರಿಗೆ ಗೌರವ ಸಲ್ಲಿಸುವ ಸಲುವಾಗಿ, ಸೀಮಿತ ಅವಧಿಗೆ ಅಕೌಂಟ್ ಅನ್ನು ಹಿಂಬಾಲಿಸಲಾಗುತ್ತದೆ. ಭಾರತದ ನಾಯಕರ ಅಕೌಂಟ್, ಅನ್ ಫಾಲೋ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ" ಎಂದು ವೈಟ್ ಹೌಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+