israel - iran war: ಅಮೆರಿಕ ಹೇಳಿದ್ದನ್ನೆಲ್ಲಾ ನಾವ್ಯಾಕೆ ಕೇಳಬೇಕು ಎಂದ ಇಸ್ರೇಲ್, ಭಯಾನಕ ವೈಮಾನಿಕ ದಾಳಿ!
ಇಸ್ರೇಲ್ ಹಾಗೂ ಇರಾನ್‌ನ ನಡುವೆ ಸಂಘರ್ಷ ತೀವ್ರವಾಗುತ್ತಿದೆ. ಇಸ್ರೇಲ್ ಮಿಲಿಟರಿ ಪಡೆಗಳು ದಕ್ಷಿಣ ಲೆಬನಾನ್ ಮೇಲೆ ನಿರಂತ ದಾಳಿ ಮಾಡುತ್ತಿವೆ. ಬುಧವಾರ ದಕ್ಷಿಣ ಲೆಬನಾನ್‌ನ ನಬಾತಿಹ್‌ನಲ್ಲಿರುವ ಕಾರ್ಪೋರೆಷನ್ ಕಟ್ಟಡದ ಮೇಲೆ ಇಸ್ರೇಲಿ ವೈಮಾನಿಕ ದಾಳಿ ನಡೆಸಿದ್ದು, ಮೇಯರ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ಅಮೆರಿಕದ ಮಧ್ಯಪ್ರವೇಶದ ಹೊರತಾಗಿಯೂ ಇರಾನ್ ಹಾಗೂ ಇಸ್ರೇನ್‌ನ ನಡುವೆ ಯುದ್ಧದ ಕಾರ್ಮೋಡ ಸರಿಯುತ್ತಿಲ್ಲ. ಆಹಾರ ಹಾಗೂ ಮೂಲಸೌಕರ್ಯದಲ್ಲಿ ಅಡಚಣೆಯಾಗಬಾರದು ಎಂದು ಇಸ್ರೇಲ್‌ಗೆ ಅಮೆರಿಕ ಖಡಕ್ ಸೂಚನೆ ನೀಡುತ್ತಲ್ಲೇ ಇದೆ. ನಾವು ಅಮೆರಿಕದ ಸಲಹೆಗಳನ್ನು ಕೇಳುತ್ತೇವೆ. ಆದರೆ, ನಮ್ಮ ವಿವೇಚನೆಯನ್ನು ಬಳಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಇಸ್ರೇಲ್ ಹೇಳಿದೆ.

ದಕ್ಷಿಣ ಲೆಬನಾನ್‌ನ ಪ್ರಮುಖ ನಗರವಾಗಿದೆ. ಈ ನಗರದ ಮೇಲೆ ಇಸ್ರೇಲ್ ಇದೀಗ ವೈಮಾನಿಕ ದಾಳಿಯನ್ನು ನಡೆಸಿದ್ದು, ಪರಿಸ್ಥಿತಿ ಸಂಪೂರ್ಣ ವಿಷ ಮಯವಾಗಿದೆ. ನಬಾತಿಹ್ ಎನ್ನುವುದು ಇಲ್ಲಿನ ರಾಜಧಾನಿಯಾಗಿದೆ. ಬುಧವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಪಾಲಿಕೆಯ ಮೇಯರ್ ಅಹ್ಮದ್ ಕಹಿಲ್ ಸೇರಿದಂತೆ ಐದು ಜನ ಸಾವನ್ನಪ್ಪಿರುವುದಾಗಿ ಭದ್ರತಾ ಪಡೆಗಳು ಹೇಳಿರುವುದು ವರದಿಯಾಗಿದೆ.
ಅಮೆರಿಕದ ಕಾಳಜಿ ಹಾಗೂ ಎಚ್ಚರಿಕೆಯ ನಡುವೆಯೂ ಇಸ್ರೇನ್ ತನ್ನ ದಾಳಿಯನ್ನು ಮುಂದುವರಿಸಿದೆ. ನಮ್ಮ ಮೇಲೆ ಆಗಿರುವ ದಾಳಿಗೆ ಉತ್ತರಿಸುತ್ತಿದ್ದೇವೆ ಎಂದು ಇಸ್ರೇಲ್ ಹೇಳಿದೆ. ದಕ್ಷಿಣ ಲೆಬನಾನ್‌ನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಅಮೆರಿಕ ಈಗಾಗಲೇ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಅಮೆರಿಕ ಪರಿಸ್ಥಿತಿ ನಿಯಂತ್ರಣದಲ್ಲಿ ಇರಲಿ ಎಂದು ಹೇಳಿದೆಯಾದರೂ ಯದ್ಧದ ವಾತಾವರಣ ಮುಂದುವರಿಯುತ್ತಲ್ಲೇ ಇದೆ.
ಇರಾನ್ ದೇಶಕ್ಕೆ ಬೆಂಬಲ ಸೂಚಿಸುತ್ತಿರುವ ಬಂಡುಕೋರರ ಮೇಲೆ ಇಸ್ರೇಲ್ ನಿರಂತರ ದಾಳಿಯನ್ನು ಮುಂದುವರಿಸಿದೆ. ದಕ್ಷಿಣ ಲೆಬನಾನ್, ಬೈರುತ್, ಇರಾನ್ ಬೆಂಬಲಿತ ಹೆಜ್ಬೊಲ್ಲಾ ಹಾಗೂ ಗಾಜಾ, ಪ್ಯಾಲೆಸ್ಟೀನಿಯನ್ ಉಗ್ರಗಾಮಿಗಳು, ಹಮಾಸ್ ವಿರುದ್ಧ ದಾಳಿಯನ್ನು ಮುಂದುವರಿಸಿದೆ.

ನಬಾತಿಹ್ ಪ್ರದೇಶದಲ್ಲಿ ಹಿಜ್ಬುಲ್ಲಾಗಳನ್ನು (ದಾಳಿಕೋರರು) ಗುರಿಯಾಗಿಸಿಕೊಂಡು ದಾಳಿ ಮಾಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಈ ಭಯಾನಕ ದಾಳಿಯಲ್ಲಿ ಅಲ್ಲಿನ ಮೂಲಸೌಕರ್ಯವನ್ನು ನಾಶಪಡಿಸಿರುವುದಾಗಿಯೂ ಇಸ್ರೇಲ್ ಸೇನೆ ಹೇಳಿಕೊಂಡಿದೆ. ಇಸ್ರೇಲ್‌ನ ನೌಕಾಪಡೆ ಹಾಗೂ ಮಿಲಿಟರಿ ಪಡೆ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿದೆ. ಮುಖ್ಯವಾಗಿ ಹಿಜ್ಬುಲ್ಲಾಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಿರುವುದಾಗಿ ಇಸ್ರೇಲ್ ಹೇಳಿದೆ ಎನ್ನಲಾಗಿದೆ.
ಅಮೆರಿಕ ಹೇಳಿದ್ದನ್ನೆಲ್ಲಾ ನಾವ್ಯಾಕೆ ಕೇಳಬೇಕು: ಅಮೆರಿಕ ಹೇಳಿದ್ದನ್ನೆಲ್ಲಾ ನಾವ್ಯಾಕೆ ಕೇಳಬೇಕು ಎನ್ನುವ ಅರ್ಥದಲ್ಲಿ ಇಸ್ರೇಲ್ ಮಾತನಾಡಿದೆ. ಇಸ್ರೇಲ್ ಹಾಗೂ ಇರಾನ್‌ನ ನಡುವೆ ನಡೆಯುತ್ತಿರುವ ಭಾರೀ ದಾಳಿಗಳ ಬಗ್ಗೆ ಅಮೆರಿಕಾ ತನ್ನ ಕಳವಳವನ್ನು ದಾಖಲಿಸಿದೆ.
ಈ ನಡುವೆ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಇಸ್ರೇಲ್ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದ್ದಾರೆ. ಇರಾನ್ ನಮ್ಮ ಮೇಲೆ 200 ಕ್ಷಿಪಣಿಗಳನ್ನು ಸಿಡಿಸಿದೆ. ಇದಕ್ಕೆ ನಾವು ತಿರುಗೇಟು ನೀಡದೆ ಬಿಡುವುದಿಲ್ಲ ಎಂದಿರುವ ಅವರು. ನಾವು ಈ ವಿಷಯದಲ್ಲಿ ಅಮೆರಿಕವನ್ನು ಕೇಳಿಕೊಂಡು ನಮ್ಮ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ.
ನಮ್ಮ ದೇಶ ಹಾಗೂ ನಮ್ಮ ದೇಶಕ್ಕೆ ಯಾವುದು ಒಳ್ಳೆಯದು ಅನಿಸುತ್ತದೆಯೋ ಅದಕ್ಕೆ ತಕ್ಕಂತೆ ನಾವು ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಅಮೆರಿಕದ ಸಲಹೆಗಳನ್ನು ನಾವು ಖಂಡಿತವಾಗಿಯೂ ಕೇಳುತ್ತೇವೆ. ಆದರೆ, ನಮ್ಮ ವಿವೇಚನೆ ಬಳಸಿಯೇ ನಾವು ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದಿರುವ ಇಸ್ರೇಲ್. ಅಮೆರಿಕದ ಖಡಕ್ ಮಾತುಗಳಿಗೂ ಡೋಂಟ್ ಕೇರ್ ಎಂದು ವೈಮಾನಿಕ ದಾಳಿಗಳನ್ನು ಮುಂದುವರಿಸಿದೆ.












Click it and Unblock the Notifications