ಯುರೋಪ್‌ನಲ್ಲಿ ಕೊರೊನಾ ಪರಿಸ್ಥಿತಿ ತುಂಬಾ ಗಂಭೀರ: ವಿಶ್ವ ಆರೋಗ್ಯ ಸಂಸ್ಥೆ
ಯುರೋಪ್‌ನಲ್ಲಿ ಕೊರೊನಾ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಯುರೋಪ್‌ನಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಆರಂಭವಾಗಿದೆ. ಕಳೆದ 2 ವಾರಗಳಲ್ಲಿ ಯುರೋಪ್‌ನ ಅರ್ಧ ದೇಶಗಳಲ್ಲಿ ಶೇ.10ರಷ್ಟು ಕೊರೊನಾ ಸೋಂಕಿತರು ಹೆಚ್ಚಾಗಿದ್ದಾರೆ.
ನಾವು ಅಮೆರಿಕಕ್ಕೂ ಮೊದಲೇ ಗಂಭೀರ ಪರಿಸ್ಥಿತಿಯನ್ನು ಎದುರಿಸಿದ್ದೆವು ಎಂದು ಯುರೋಪ್‌ನ ಆರೋಗ್ಯ ಸಂಸ್ಥೆ ರೀಜನಲ್ ಡೈರೆಕ್ಟರ್ ಹ್ಯಾನ್ಸ್ ಕ್ಲುಗೆ ಹೇಳಿದ್ದಾರೆ.ಬುಧವಾರ ಫ್ರಾನ್ಸ್‌ನಲ್ಲಿ 9874 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದವು. ಇಲ್ಲಿಯವರೆಗಿನ ಪ್ರಕರಣಗಳಲ್ಲಿ ಇದು ಅತಿ ಹೆಚ್ಚಿನ ಪ್ರಕರಣಗಳಾಗಿವೆ.

ಯುರೋಪ್‌ನಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಏಳಲು ಆರಂಭವಾಗಿದೆ.ರಷ್ಯಾದ ಸ್ಪುಟ್ನಿಕ್ V ಕೊರೊನಾ ಲಸಿಕೆಯು 7ರಲ್ಲಿ ಒಬ್ಬ ವ್ಯಕ್ತಿಯ ಮೇಲೆ ಅಡ್ಡಪರಿಣಾಮ ಬೀರುತ್ತಿದೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಪ್ರಾಯೋಗಿಕ ಲಸಿಕೆ 'ಸ್ಪುಟ್ನಿಕ್ V' ಪ್ರಯೋಗಕ್ಕೆ ಒಳಗಾಗಿರುವ ಸ್ವಯಂ ಸೇವಕರಲ್ಲಿ ಏಳು ಜನರ ಪೈಕಿ ಒಬ್ಬರಿಗೆ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿರುವುದಾಗಿ ರಷ್ಯಾದ ಆರೋಗ್ಯ ಸಚಿವ ಹೇಳಿದ್ದಾರೆ.
ಲ್ಯಾನ್‌ಸೆಟ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿರುವ ಟ್ರಯಲ್ 1 ಮತ್ತು 2ರ ಮಾಹಿತಿಯ ಪ್ರಕಾರ, ಸ್ಪುಟ್ನಿಕ್ ವಿ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ ಹಾಗೂ ಪ್ರಯೋಗಕ್ಕೆ ಒಳಗಾದ 76 ಜನರಲ್ಲಿ ಅಗತ್ಯವಿರುವ ರೋಗ ನಿರೋಧಕ ಪ್ರಕ್ರಿಯೆ ಕಂಡು ಬಂದಿದೆ.












Click it and Unblock the Notifications