ಕೊರೊನಾ ವೈರಸ್ ಕರಿನೆರಳು ಬೀಳದ ರಾಷ್ಟ್ರಗಳಿವು
ಬೆಂಗಳೂರು, ಏಪ್ರಿಲ್ 13: ಡಿಸೆಂಬರ್ 2019ರಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಚೀನಾದಲ್ಲಿ ಕಾಣಿಸಿಕೊಂಡಿತ್ತು. ಕೆಲವೇ ವಾರಗಳ ಬಳಿಕ ವೈರಸ್ ಕೊವಿಡ್ 19 ಎಂದು ಹೆಸರು ಪಡೆದು ಜಾಗತಿಕ ಪಿಡುಗಾಗಿ ಮಾರ್ಪಾಟಾಯಿತು.
ಕೊವಿಡ್ 19 ಎನ್ನುವುದು ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು ಕಫ, ಗಂಟಲ ದ್ರವ ಮುಂತಾದವುಗಳಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆಯಾಗಿದ್ದು 185ಕ್ಕೂ ಹೆಚ್ಚು ದೇಶಗಳನ್ನು ಇದು ಆವರಿಸಿದೆ.
ಒಟ್ಟು 185ಕ್ಕಿಂತಲೂ ಹೆಚ್ಚು ರಾಷ್ಟ್ರಗಳಿಗೆ ಕೊರೊನಾ ಕರಿನೆರಳು ಆರಿಸಿದೆ ಆದರೆ ಒಟ್ಟು 17 ರಾಷ್ಟ್ರಗಳಲ್ಲಿ ಕೊರೊನಾ ಒಂದೂ ಪ್ರಕರಣ ಇದುವರೆಗೂ ದಾಖಲಾಗಿಲ್ಲ.

ಸಾಮಾಜಿಕ ಅಂತರ ಕಾಯ್ದುಕೊಳ್ಳಿ
ವಿಶ್ವದಾದ್ಯಂತ ಸಾಕಷ್ಟು ದೇಶವನ್ನು ಲಾಕ್‌ಡೌನ್ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ತಿಳಿ ಹೇಳಲಾಗುತ್ತಿದೆ. ಅಗತ್ಯ ಕಾರ್ಯಗಳನ್ನು ಹೊರತುಪಡಿಸಿ ಮನೆಯಿಂದ ಹೊರಗೆ ಓಡಾಡುವುದನ್ನು ನಿಲ್ಲಿಸಿ ಎಂದು ಹೇಳಲಾಗಿದೆ.

ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಏನು ಹೇಳುತ್ತೆ?
ಜಾನ್ ಹಾಪ್‌ಕಿಮ್ಸ್ ವಿಶ್ವವಿದ್ಯಾಲಯ ನೀಡಿರುವ ಮಾಹಿತಿ ಪ್ರಕಾರ ವಿಶ್ವದಾದ್ಯಂತ 1.8 ಮಿಲಿಯನ್ ಅಂದರೆ 18 ಲಕ್ಷ ಮಂದಿ ಕೊರೊನ ವೈರಸ್‌ಗೆ ತುತ್ತಾಗಿದ್ದಾರೆ. ಇದುವರೆಗೂ 110,000 ಮಂದಿ ಸಾವನ್ನಪ್ಪಿದ್ದಾರೆ. 412,000ಕ್ಕಿಂತಲೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

ಇದುವರೆಗೂ ಒಂದೂ ಕೊರೊನಾ ಪ್ರಕರಣವಿಲ್ಲದ ರಾಷ್ಟ್ರಗಳು
-ಕೊಮೊರೊಸ್
-ಕಿರಿಬಾಟಿ
-ಲೆಸೊಟೊ
-ಮಾರ್ಷಲ್ ಐಲ್ಯಾಂಡ್ಸ್
-ಮೈಕ್ರೋನೇಷ್ಯಾ
-ನೌರು
-ಉತ್ತರ ಕೊರಿಯಾ
-ಪಲು
-ಸಮೋಆ
-ಸಾವೋ ಟೋಮ್ ಮತ್ತು ಪ್ರಿನ್ಸಿಪಿ
-ಸೋಲೋಮನ್ ಐಲ್ಯಾಂಡ್ಸ್
-ಸೌತ್ ಸುಡಾನ್
-ತಜಿಕಿಸ್ತಾನ್
-ಟೋಂಗಾ
- ತುರ್ಕ್‌ಮೆನಿಸ್ತಾನ
-ಟುವಲು
-ವನೌತು

ಚೀನಾದಲ್ಲಿ ಎರಡನೇ ಬಾರಿ ಕೊರೊನಾ ವೈರಸ್ ಲಗ್ಗೆ
ಚೀನಾದಲ್ಲಿ ಎರಡನೇ ಬಾರಿಗೆ ಕೊರೊನಾ ಸಂಕಟ ಆರಂಭವಾಗಿದೆ. ಕೊವಿಡ್ 19 ರೋಗಕ್ಕೆ ತುತ್ತಾದವರಿಗೆ ಮತ್ತೆ ಎರಡನೇ ಬಾರಿಗೆ ಮತ್ತೆ ರೋಗ ಬರುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications