ಕೊರೊನಾ ವೈರಸ್‌ಗೆ ಲಸಿಕೆ: ವಿಶ್ವದಲ್ಲಿ ಸಂಶೋಧನೆ ಯಾವ ಹಂತದಲ್ಲಿದೆ?
ಬೆಂಗಳೂರು, ಏಪ್ರಿಲ್ 13: ಕೊರೊನಾ ವೈರಸ್ ವಿಶ್ವದಾದ್ಯಂತ 1 ಲಕ್ಷಕ್ಕೂ ಹೆಚ್ಚು ಮಂದಿಯ ಬಲಿ ಪಡೆದಿದೆ. 18ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ.
ಇಷ್ಟು ಮಂದಿ ಬಲಿ ಪಡೆದಿರುವ ಕೊರೊನಾ ವೈರಸ್ ಕೊಲ್ಲುವ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರೆ.
ಚೀನಾ, ಇಟಲಿ, ಅಮೆರಿಕದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ಆದರೆ ಕೆಲವು ದಿನಗಳಿಂದ ಚೀನಾ ಹಾಗೂ ಇಟಲಿಯಲ್ಲಿ ಸಾವಿನ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಆದರೆ ಎಚ್ಚರಿಕೆಯಿಂದಿರಬೇಕು ಲಸಿಕೆ ಇಲ್ಲದೆ ಸಂಪೂರ್ಣವಾಗಿ ವೈರಸ್ ತೊಲಗಿಸಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಲಸಿಕೆ ಯಾವ ಹಂತದಲ್ಲಿದೆ, ಯಾವಾಗ ಪ್ರಯೋಗ ಮುಕ್ತಾಯಗೊಂಡು ಮನುಷ್ಯನ ಮೇಲೆ ಪ್ರಯೋಗ ನಡೆಸಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಲಸಿಕೆ ಕಂಡು ಹಿಡಿಯುವುದು ಸುದೀರ್ಘ ಪ್ರಕ್ರಿಯೆ
ಲಸಿಕೆ ಕಂಡು ಹಿಡಿಯುವುದು ಒಂದು ಸುದೀರ್ಘ ಪ್ರಕ್ರಿಯೆಯಾಗಿದೆ. ಒಂದು ವರ್ಷವೂ ತಗುಲಬಹುದು, ವಿಜ್ಞಾನಿಗಳಿಗೆ ಕೆಲವು ತಾತ್ರಿಕ ಅಡಚಣೆಗಳು ಉಂಟಾಗಿವೆ. ಪ್ರಯೋಗಾಲಯಗಳು, ಖಾಸಗಿ ಕಂಪನಿಗಳು, ಸರ್ಕಾರ ಒಗ್ಗಟ್ಟಿನಲ್ಲಿ ಈ ಕೆಲಸ ಮಾಡುತ್ತಿವೆ.
ತಜ್ಞರು ಹೇಳುವ ಪ್ರಕಾರ ಹೊಸ ಕೊರೊನಾ ವೈರಸ್, ಸಾರ್ಸ್ ಕೊವ್ 2 ಗೆ ಲಸಿಕೆ ಕಂಡು ಹಿಡಿಯಲು ವರ್ಷವಾದರೂ ಬೇಕು. ಎಲ್ಲರಿಗೂ ಲಸಿಕೆ ಲಭ್ಯವಾಗುವಂತೆ ಮಾಡುವುದು ಸವಾಲಿನ ಕೆಲಸ.

ಲಸಿಕೆ ಕ್ಲಿನಿಕಲ್ ಟೆಸ್ಟಿಂಗ್ ಹಂತದಲ್ಲಿದೆ
ವಿಜ್ಞಾನಿಗಳು ಪರಿಶ್ರಮ ಪಟ್ಟು ಲಸಿಕೆ ಕಂಡು ಹಿಡಿದಿದ್ದು ಅದು ಕ್ಲಿನಿಕಲ್ ಟೆಸ್ಟಿಂಗ್ ಹಂತದಲ್ಲಿದೆ. ಅವರು ಮನುಷ್ಯರ ಮೇಲೆ ಪ್ರಯೋಗ ನಡೆಸುತ್ತಿದ್ದಾರೆ. 67 ಲಸಿಕೆಗಳು ಪ್ರಿ ಕ್ಲಿನಿಕಲ್ ಹಂತದಲ್ಲಿದೆ. ಈ ಹಂತದ ಮೇಲೆ ಇಡೀ ವಿಶ್ವ ನಿಂತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಟೈಮ್‌ಲೈನ್
ಡಾ. ಕಯಾತ್ ಅವರು ನೀಡಿರುವ ಮಾಹಿತಿ ಪ್ರಕಾರ ವಿಜ್ಞಾನಿಗಳು ಕೊವಿಡ್-19ಗೆ ಲಸಿಕೆ ಕಂಡು ಹಿಡಿಯುವ ಹಂತದಲ್ಲಿದ್ದಾರೆ. ಚೀನಾ ವಿಜ್ಞಾನಿಗಳಿಗೆ ಲಸಿಕೆ ಕಂಡು ಹಿಡಿಯುವುದು ಸುಭವಾಗಬಹುದು. ಸಾರ್ಸ್ ರೋಗ ಬಂದಾಗಲು ಶೇ.79 ರಷ್ಟು ಅದೇ ಮೆಟೀರಿಯಲ್‌ಗಳನ್ನು ಬಳಕೆ ಮಾಡಿದ್ದರು. ಮಾರ್ಸ್ ಬಂದಾಗಲೂ ಶೇ.50ರಷ್ಟು ಅದೇ ಮೆಟೀರಿಯಲ್‌ಗಳ ಬಳಕೆಯಾಗಿತ್ತು. ಲಸಿಕೆ ಕಂಡುಹಿಡಿಯಲು ಗ್ರೌಂಡ್ ವರ್ಕ್ ಈಗಾಗಲೇ ಆರಂಭಿಸಲಾಗಿದೆ. ಮೊದಲು ಪ್ರಾಣಿಗಳ ಮೇಲೆ ಲಸಿಕೆ ಪ್ರಯೋಗಿಸಲಾಗುತ್ತದೆ. ಒಬ್ಬರು ಪ್ರಾಣಿಗಳ ಮೇಲೆ ಪ್ರಯೋಗ ಬಿಟ್ಟು ನೇರವಾಗಿ ಮನುಷ್ಯನ ಮೇಲೆ ಪ್ರಯೋಗ ಮಾಡಿದರೆ, ಇನ್ನೊಬ್ಬ ವಿಜ್ಞಾನಿಗಳು ಮನುಷ್ಯ ಹಾಗೂ ಪ್ರಾಣಿಗಿಬ್ಬರ ಮೇಲೂ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಮೂರು ಹಂತಗಳಲ್ಲಿ ಲಸಿಕೆ ಪ್ರಯೋಗ
ಮನುಷ್ಯನ ಮೇಲೆ ಮೂರ ಹಂತಗಳಲ್ಲಿ ಲಸಿಕೆ ಪ್ರಯೋಗಿಸಲಾಗುತ್ತದೆ. ಮೊದ ಹಂತದಲ್ಲಿ ಕೇವಲ 100 ಮಂದಿ ಪಾರ್ಟಿಸಿಪೆಂಟ್‌ಗಳು ಇರುತ್ತಾರೆ. ಈ ಲಸಿಕೆ ಮನುಷ್ಯನ ಮೇಲೆ ಪರಿಣಾಮಕಾರಿಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲಾಗುತ್ತದೆ.
ಎರಡನೇ ಹಂತದಲ್ಲಿ ಸಾಕಷ್ಟು ವಿಷಯಗಳನ್ನಿಟ್ಟುಕೊಂಡು, ಇದು ಆ ರೋಗದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆಯೇ ಎಂದು ತಿಳಿದುಕೊಳ್ಳಲಾಗುತ್ತದೆ. ಈ ಹಂತ ಮುಗಿಯಲು ವರ್ಷವೇ ಬೇಕಾಗಬಹುದು.
ಮೂರನೇ ಹಂತದಲ್ಲಿ ಸಾವಿರಾರು ಮಂದಿ ಮೇಲೆ ಈ ಪ್ರಯೋಗ ನಡೆಸಲಾಗುತ್ತದೆ.ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಪ್ರಯೋಗ ನಡೆಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಮಾನವನ ಮೇಲೆ ಲಸಿಕೆ ಪ್ರಯೋಗ ಏಪ್ರಿಲ್ ಮೊದಲ ವಾರದಿಂದಲೇ ಆರಂಭವಾಗಿದೆ.












Click it and Unblock the Notifications